ಪುಲ್ವಾಮ ದಾಳಿಯಲ್ಲಿ ಮಡಿದವರಿಗೆ ಗೌರವಾಂಜಲಿಗಳು
ಚಿತ್ರದುರ್ಗ : ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಇತ್ತೀಚಿಗೆ ಪುಲ್ವಾಮ ದಾಳಿಯಲ್ಲಿ ವೀರ ಮರಣವನ್ನು ಹೊಂದಿದ ವೀರ ಯೋಧರ ಸ್ಮರಣೆ ಹಾಗೂ ಗೌರವಾಂಜಲಿ ಸಲ್ಲಿಸಲಾಯಿತು.
ನಗರದ ಹೊರವಲಯದಲ್ಲಿರುವ ಸೈನಿಕ ಪಾರ್ಕ್‍ನಲ್ಲಿ ವಾಸವಿ ಕ್ಲಬ್ ಅಧ್ಯಕ್ಷರಾದ ಲಕ್ಷ್ಮಣ್, ಕಾರ್ಯದರ್ಶಿಗಳಾದ ಪಿ.ಎಸ್. ಕೋಟೇಶ್ವರ ಗುಪ್ತ ಖಜಾಂಚಿಗಳಾದ ಡಿ.ಆರ್. ವೇಣುಗೋಪಾಲ್, ನಿರ್ದೇಶಕರಾದ ಟಿ.ಎಸ್. ಸುಹಾಸ್, ಎ. ಮಂಜುನಾಥ್, ಸತ್ಯನಾರಾಯಣ್ ಗುಪ್ತ, ಎಂ.ಎಸ್. ಸಂತೋಷ್, ಜ್ಯೋತಿ ಲಕ್ಷ್ಮಣ್, ರಶ್ಮಿ ಹರೀಶ್, ರಿಂಕಿ ಸುರೇಶ್, ಕಲ್ಪನಾ ಹಾಗೂ ಇತರ ನಿರ್ದೇಶಕರು ಅಭಿಮಾನಿ ಮಿತ್ರರೊಡಗೂಡಿ ಮೇಣದ ಬತ್ತಿಗಳನ್ನು ಪ್ರಜ್ವಲಿಸಿ, ವೀರಯೋಧರಿಗೆ ಗೌರವಾಂಜಲಿಗಳನ್ನು ಸಲ್ಲಿಸಿದರು. ಹಲವಾರು ವೀಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ದೇಶಾಭಿಮಾನ, ಯೋಧರನ್ನು ಕುರಿತಂತೆ ತಮ್ಮ ಗೌರವವನ್ನು ಹಂಚಿಕೊಂಡರು.
ಮಾಹಿತಿ ಮತ್ತು ಫೋಟೋ ಕೃಪೆ
ಟಿ.ಎಸ್. ಸುಹಾಸ್
ನಿರ್ದೇಶಕರು, ವಾಸವಿ ಕ್ಲಬ್, ಚಿತ್ರದುರ್ಗ
ಮೊ : 8105424447
The post ಪುಲ್ವಾಮ ದಾಳಿಯಲ್ಲಿ ಮಡಿದವರಿಗೆ ಗೌರವಾಂಜಲಿಗಳು first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/BN23Xw6
via IFTTT