TTE Recruitment: ರೈಲ್ವೆ ಇಲಾಖೆಯಿಂದ 7,784 ಹುದ್ದೆಗಳಿಗೆ ಅರ್ಜಿ ಆಹ್ವಾನ

Recruitment 2023: ಉದ್ಯೋಗ ಬಯಸುವವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣ ಗೊಳಿಸಿದವರು ಸಹ ಇಲ್ಲಿ ಉದ್ಯೋಗ ಪಡೆಯಬಹುದುದಾಗಿದೆ.

ದೆಹಲಿ: ಉದ್ಯೋಗ ಬಯಸುವವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣ ಗೊಳಿಸಿದವರು ಸಹ ಇಲ್ಲಿ ಉದ್ಯೋಗ ಪಡೆಯಬಹುದುದಾಗಿದೆ. ಇದೀಗ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. 

ರೈಲ್ವೆ ನೇಮಕಾತಿಯ ಹುದ್ದೆಯ ವಿವರ ಹೀಗಿದೆ: 
ವಿದ್ಯಾರ್ಹತೆ: ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಪದವಿ, ಸ್ನಾತಕೋತ್ತರ ಪಡೆದಿರಬೇಕೆಂದಿಲ್ಲ. ಖಾಸಗಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಓದಿರಬೇಕಾಗಿಲ್ಲ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣಗೊಳಿಸಿದರೂ ಸಾಕು. 

ವಯೋಮಿತಿ:  18 ರಿಂದ 30 ವರ್ಷ ವಯೋಮಿತಿಗೆ ನಿಗದಿ ಪಡಿಸಲಾಗಿದೆ

ಖಾಲಿ ಇರುವ ಹುದ್ದೆ: ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ ( 7784 )

ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಎರಡನೇ ಸುತ್ತಿಗೆ ಆಯ್ಕೆ ,ವೈದ್ಯಕೀಯ ಫಿಟ್ ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣದ ನಂತರ ಹುದ್ದೆಗೆ ನೇಮಕ ,

ಅರ್ಜಿ ಶುಲ್ಕ: ಹಿಂದುಳಿದ ವರ್ಗದವರಿಗೆ 250 ರೂ. , ಸಾಮಾನ್ಯ ವರ್ಗದವರಿಗೆ 500 
ಅರ್ಜಿ ಸಲ್ಲಿಸಲು ಕೊನೆಯ ದಿನ: ಅರ್ಜಿ ಸಲ್ಲಿಕೆಯ ಆರಂಭವಾದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು
ಅಧಿಕೃತ ವೆಬ್ ಸೈಟ್:  indianrailways.gov.in

Source : https://zeenews.india.com/kannada/career/railway-department-invites-applications-for-7784-posts-146089

Leave a Reply

Your email address will not be published. Required fields are marked *