ಚಿತ್ರದುರ್ಗ ಆ. 12
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿ ದೇವಾಲಯದಲ್ಲಿ ಇಂದು ಅಂಗಾರಕ ಸಂಕಷ್ಟ ಚುತುರ್ಥಿಯ ಅಂಗವಾಗಿ ದೇವಾಲಯದಲ್ಲಿನ ಗಣಪತಿಗೆ ವಿಶಿಷ್ಟ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗಿತ್ತು. ವಿನಾಯಕನಿಗೆ ಪಂಚ ವರ್ಣದ ಬಣ್ಣದಿಂದ ಅಲಂಕಾರವನ್ನು ಮಾಡಲಾಗಿತ್ತು. ಈ ಬಾರಿ ಮಂಗಳವಾರ ವಿನಾಯಕ ಚತುರ್ಥಿ ಬಂದಿರುವುದರಿಂದ ಅದು ವಿಶೇಷವಾಗಿದ್ದು ಈ ದಿನದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯನ್ನು ಮಾಡುತ್ತಾರೆ.
Views: 7