ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 32025-2026ನೇ ಸಾಲಿನಲ್ಲಿ ತುಂಗಾಪಿಯೂ ಕಾಲೇಜಿನಲ್ಲಿ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ70ಕ್ಕಿಂತಲೂ ಹೆಚ್ಚಿನ ಅಂಕ ಪಡೆದವರಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದೆ ಎಂದು ತುಂಗಾ ಮಹಾವಿದ್ಯಾಲಯದ ಪದವಿಯ ಪ್ರಾಂಶುಪಾಲರಾದ
ಡಾ.ಆರ್.ಕುಮಾರಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ
ಮಹಾವಿದ್ಯಾಲಯವು ತನ್ನ ವಜ್ರಮಹೋತ್ಸವದ ಹೊಸ್ತಿಲಲ್ಲಿ ನಿಂತಿರುವ ಸಂಭ್ರಮದ ಹೊತ್ತಿನಲ್ಲಿ ಪಿ.ಯೂ. ವಿದ್ಯಾರ್ಥಿಗಳಿಗೆ
ಒದಗಿಸುತ್ತಿರುವ ಎರಡು ವರ್ಷಗಳ “ಉಚಿತ ಶಿಕ್ಷಣ” ಯೋಜನೆಯನ್ನು ನೀಡಲು ಮುಂದಾಗಿದೆ 1967ರಲ್ಲಿ ಆರಂಭವಾದ
ಮಲೆನಾಡಿನ ವಿದ್ಯಾಸಂಸ್ಥೆ ತುಂಗಾ ಮಹಾವಿದ್ಯಾಲಯ. ತುಂಗಾ ವಿದ್ಯಾವರ್ಧಕ ಸಂಘದ ಮೂಲಕ ತುಂಗಾ ಪದವಿಪೂರ್ವ
ಕಾಲೇಜು, ತುಂಗಾ ಪದವಿ ಕಾಲೇಜು ಹಾಗೂ ತುಂಗಾ ಎಂ.ಕಾಂ, ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ನಡೆಸುತ್ತಾ
ಮುನ್ನಡಿಯಿಡುತ್ತಿದೆ. ತನ್ನ ಸುದೀರ್ಘವಾದ ಶೈಕ್ಷಣಿಕ ಪ್ರಯಾಣದಲ್ಲಿ ಮಲೆನಾಡಿನ ಜನರ ಜೀವನದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ
ಮಾಡಿದೆ. ಸರಿಸುಮಾರು 50-60 ವರ್ಷಗಳ ಹಿಂದೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ವಿದ್ಯೆಯ ಬೆಳಕು ಮೂಡಿಸುವ ಮೂಲಕ
ಶೈಕ್ಷಣಿಕ ವಲಯದಲ್ಲಿ ತುಂಗಾ ಮಹಾವಿದ್ಯಾಲಯ ಮುಂಚೂಣಿಯಲ್ಲಿದೆ ಎಂದರು.
ತುಂಗಾ ವಿದ್ಯಾವರ್ಧಕ ಸಂಘ(ರಿ), ತುಂಗಾ ಮಹಾವಿದ್ಯಾಲಯ ತನ್ನ ಅರವತ್ತರ ವಜ್ರಮಹೋತ್ಸವದ ಹೊಸ್ತಿಲಿಗೆ ಬಂದು ನಿಂತಿದೆ.
ಈ ಸಂಭ್ರಮದ ಭಾಗವಾಗಿ 2025-2026 ನೇ ಸಾಲಿನಲ್ಲಿ ತುಂಗಾ ಪಿಯೂ ಕಾಲೇಜಿನಲ್ಲಿ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ.ಯಲ್ಲಿ
ಶೇಕಡಾ70ಕ್ಕಿಂತಲೂ ಹೆಚ್ಚಿನ ಅಂಕ ಪಡೆದವರಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದೆ. ಹಿಂದಿನಿಂದಲೂ ತುಂಗಾ
ವಿದ್ಯಾಸಂಸ್ಥೆ ಶಿಕ್ಷಣವನ್ನು ವ್ಯಾಪಾರವಾಗಿ ಭಾವಿಸದೆ ಸೇವೆಯೆಂದೇ ಪರಿಗಣಿಸಿ ನಡೆಸಿಕೊಂಡು ಬಂದಿದ್ದು ಎಷ್ಟೋ ಬಡ ಕಡು
ಬಡತನದ ಮಕ್ಕಳ ಶೈಕ್ಷಣಿಕ ಕನಸಿಗೆ ಈ ಮೂಲಕ ವಜ್ರ ಮಹೋತ್ಸವದ ಕೊಡುಗೆಯಾಗಿ ಎರಡು ವರ್ಷಗಳ ‘ಉಚಿತ ಶಿಕ್ಷಣ’ದ
ಯೋಜನೆಯನ್ನು ಘೋಷಿಸುತ್ತಿದೆ. ಈ ಎರಡುವರ್ಷಗಳ ಉಚಿತ ಪಿ.ಯೂ. ಶಿಕ್ಷಣದ ಸೌಲಭ್ಯವನ್ನು ಅರ್ಹ ವಿದ್ಯಾರ್ಥಿಗಳು
ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ತುಂಗಾ ಮಹಾವಿದ್ಯಾಲಯವು ತನ್ನ ಶೈಕ್ಷಣಿಕ ಸಾಧನೆಯ ದಾರಿಯಲ್ಲಿ ಈವರೆಗೆ 08 ಮೊದಲ ಬ್ಯಾಂಕುಗಳೂ ಸೇರಿದಂತೆ ಒಟ್ಟು 56
ರ್ಯಾಂಕುಗಳನ್ನುಗಳಿಸಿ ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಕಾಲೇಜೆಂದು ಹೆಸರು ಗಳಿಸಿದೆ. ಸಿಇಟಿಯಲ್ಲಿ ಆರನೇ
ರ್ಯಾಂಕ್ ಗಳಿಸಿರುವುದು ಕೂಡಾ ನಮ್ಮ ಕಾಲೇಜಿನ ಹೆಮ್ಮೆಯಾಗಿದೆ. ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೆಸರಾಂತ
ಕ್ರೀಡಾಪಟುಗಳು, ರಾಜಕೀಯ ಮುತ್ಸದ್ದಿಗಳು, ಶಿಕ್ಷಣ ತಜ್ಞರು, ಉಪ ಕುಲಪತಿಗಳು, ಪ್ರಾಧ್ಯಾಪಕರು, ಸಾಹಿತಿ-ಕಲಾವಿದರು,
ಉದ್ಯಮಶೀಲರು, ವಿಜ್ಞಾನಿಗಳು, ಸೈನಿಕರು, ವೈದ್ಯರು, ಎಂಜಿನಿಯರುಗಳು, ಪತ್ರಿಕೋದ್ಯಮಿಗಳು, ಪ್ರಗತಿಪರ ಕೃಷಿಕರು, ಉತ್ತಮ
ಗೃಹಸ್ಥರೂ ಆಗಿ ಸಮಾಜದ ಸ್ವಾಸ್ಥ್ಯಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ಈ ವಿದ್ಯಾಸಂಸ್ಥೆಗೆ ಪಿಯೂ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ
ನಿರ್ಮಿಸಿಕೊಳ್ಳಲು ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗಾಗಿ ಡಾ. ಆರ್. ಕುಮಾರಸ್ವಾಮಿ ಪ್ರಾಂಶುಪಾಲರು (ಪದವಿ)
9916880684 ಆದರ್ಶ ಹುಂಚದಕಟ್ಟೆ ಸಂಚಾಲಕರು : 9731658179 ಇವರನ್ನು ಸಂಪರ್ಕ ಮಾಡಬಹುದಾಗಿದೆ.
ಗೋಷ್ಟಿಯಲ್ಲಿ ಮೋಹನ್ ಕುಮಾರ್, ಮರಳಿ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1