Twitter Account Hacked: ಮಾಜಿ ಆರ್​ಸಿಬಿ ಆಟಗಾರನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್..!

ಟೀಂ ಇಂಡಿಯಾದ ಯುವ ಕ್ರಿಕೆಟಿಗ ಹಾಗೂ ಆರ್​ಸಿಬಿ ತಂಡದ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಅಧಿಕೃತ ಟ್ವಿಟರ್ ಖಾತೆ ಸೋಮವಾರ ಬೆಳಗ್ಗೆ ಹ್ಯಾಕ್ ಆಗಿದೆ ಎಂದು ವರದಿಯಾಗಿದೆ.ವಾಷಿಂಗ್ಟನ್ ಸುಂದರ್ ಬಳಸುತ್ತಿರುವ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಇದರಲ್ಲಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಹ್ಯಾಕ್ ಮಾಡಿದ ಬಳಿಕ ಇದುವರೆಗೆ ವಾಷಿಂಗ್ಟನ್ ಸುಂದರ್ ಅವರ ಖಾತೆಯಿಂದ 3 ಪೋಸ್ಟ್‌ಗಳನ್ನು ಮಾಡಲಾಗಿದೆ. ಇದೀಗ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಖಚಿತವಾದ ಬಳಿಕ ಸುಂದರ್ ಅವರ ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳನ್ನು ನಿರ್ಬಂಧಿಸಲಾಗಿದೆ.ಕ್ರಿಕೆಟ್ ಸಂಬಂಧಿತ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಹ್ಯಾಂಡಲ್ ಅನ್ನು 2021 ರಲ್ಲಿ ಒಮ್ಮೆ ಮತ್ತು ಇತ್ತೀಚೆಗೆ ಈ ವರ್ಷದ ಜನವರಿಯಲ್ಲಿ ಎರಡು ಬಾರಿ ಹ್ಯಾಕ್ ಮಾಡಲಾಗಿತ್ತು. ಹಾಗೆಯೇ 2022 ರಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಆಲ್​ರೌಂಡರ್ ಕೃನಾಲ್ ಪಾಂಡ್ಯ ಅವರ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್‌ಕಾಯಿನ್ ಬಗ್ಗೆ ಮಾಹಿತಿ ನೀಡುವ ಲಿಂಗ್​ಗಳನ್ನು ಅಪ್​ಡೇಟ್ ಮಾಡಿದ್ದರು.ಇನ್ನು ವಾಷಿಂಗ್ಟನ್ ಸುಂದರ್ ಅವರ ವೃತ್ತಿಜೀವನದ ಬಗ್ಗೆ ಹೇಳಬೇಕೆಂದರೆ ಸದ್ಯ ಸನ್​ರೈಸರ್ಸ್​ ಹೈದರಾಬಾದ್ ಪರ ಐಪಿಎಲ್ ಆಡುತ್ತಿರುವ ಸುಂದರ್, ಮಂಡಿರಜ್ಜು ಗಾಯದಿಂದಾಗಿ ಈ ಬಾರಿಯ ಐಪಿಎಲ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ಆಡಿದ ಕೇವಲ ಏಳು ಪಂದ್ಯಗಳಲ್ಲಿ 8.26 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಸುಂದರ್ ಕೇವಲ ಮೂರು ವಿಕೆಟ್ಗಳನ್ನು ಮಾತ್ರ ಪಡೆದರು. ಇನ್ನು ಬ್ಯಾಟಿಂಗ್​ನಲ್ಲಿ 15 ಸರಾಸರಿಯಲ್ಲಿ 60 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.

source https://tv9kannada.com/photo-gallery/cricket-photos/india-cricketer-washington-sundars-twitter-account-hacked-psr-594487.html

Leave a Reply

Your email address will not be published. Required fields are marked *