ತಮಿಳುನಾಡಲ್ಲಿ ಶಬರಿಮಲೆ ಯಾತ್ರಿಕರ ಕಾರು ಅಪಘಾತ: ಕರ್ನಾಟಕದ ಇಬ್ಬರು ಮಾಲಾಧಾರಿಗಳು ಸಾವು.

ಚಾಮರಾಜನಗರ: ಶಬರಿಮಲೆ ಯಾತ್ರಿಕರ ಕಾರು ಮರಕ್ಕೆ ಡಿಕ್ಕಿಯಾಗಿ ಕರ್ನಾಟಕದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟ ಘಟನೆ ತಮಿಳುನಾಡಿನ ಮೆಟ್ಟುಪಾಳ್ಯಂ – ಸಿರುಮುಗೈ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಾಗರಾಜು (65) ಹಾಗೂ ವೆಂಕಟಾದ್ರಿ (55) ಮೃತಪಟ್ಟವರು. ಘಟನೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರೇ ಆದ ಸ್ವಾಮಿ, ಮಹೇಶ್ ಹಾಗೂ ಕುಮಾರ್ ಎಂಬವರು ತೀವ್ರವಾಗಿ ಗಾಯಗೊಂಡು ಮೆಟ್ಟುಪಾಳ್ಯಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಬರಿಮಲೆ ಯಾತ್ರೆ ಕೈಗೊಂಡಿದ್ದ ಇವರ ಕಾರು ಇಂದು ಮುಂಜಾನೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹುಣಸೆ ಮರಕ್ಕೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಮಿಳುನಾಡಿನ ಸಿರುಮುಗೈ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Source : https://www.etvbharat.com/kn/!state/two-ayyappa-devotees-from-karnataka-dies-in-an-car-accident-in-tamil-nadu-karnataka-news-kas25011002742

Leave a Reply

Your email address will not be published. Required fields are marked *