ಅಡಿಕೆ ತೋಟದಲ್ಲಿದ್ದ ಶ್ರೀಗಂಧದ ಮರಗಳ ಕಳ್ಳತನಕ್ಕೆ ಯತ್ನಿಸುವಾಗ ವಿದ್ಯುತ್ ಸ್ಪರ್ಶಿಸಿ ಮಧ್ಯಪ್ರದೇಶ ಮೂಲದ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಮಧ್ಯಪ್ರದೇಶ ಮೂಲದ ಮೋಹಿತ್ (24), ಕತರ್ವ ( 38) ವರ್ಷ ಎಂದು ಗುರುತಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಣಜನಹಳ್ಳಿ ರಸ್ತೆಯ ಕೃಷ್ಣಾಪುರ ಜಯರಾಂ ಎಂಬುವರ ಅಡಿಕೆ ತೋಟದಲ್ಲಿ ಗಂಧದ ಮರಗಳ ಕಳ್ಳತನಕ್ಕೆ ಮುಂದಾದಾಗ ಘಟನೆ ನಡೆದಿದೆ.
ಹಿರಿಯೂರು : ಮಧ್ಯಪ್ರದೇಶದ ಮೂಲದ ಇಬ್ಬರು ಕಳ್ಳತನಕ್ಕೆ ಯತ್ನಿಸಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಣಜನಹಳ್ಳಿ ರಸ್ತೆಯ ಕೃಷ್ಣಾಪುರ ಜಯರಾಂ ಎಂಬುವರ ಅಡಿಕೆ ತೋಟದಲ್ಲಿ ಘಟನೆ ನಡೆದಿದೆ. ಮೃತರನ್ನು ಮಧ್ಯಪ್ರದೇಶ ಮೂಲದ ಮೋಹಿತ್ (24), ಕತರ್ವ ( 38) ವರ್ಷ ಎಂದು ಗುರುತಿಸಲಾಗಿದೆ. ಮೃತರ ತಡರಾತ್ರಿ ಜಯರಾಂ ಎಂಬುವರ ಅಡಿಕೆ ತೋಟದಲ್ಲಿ ಕೆಲವು ಶ್ರೀಗಂಧ ಮರಗಳಿದ್ದವು. ಅವುಗಳನ್ನು ಕಳ್ಳತನ ಮಾಡಲು ಹೋದಾಗ ಮೋಟಾರ್ ಪಂಪ್ ಬಳಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಧರ್ಮಪುರದ ಕಣಜನಹಳ್ಳಿ ರಸ್ತೆಯ ಸ್ವಾಭಿಮಾನ ಶಾಲೆ ಬಳಿ ಟೆಂಟ್ ಹಾಕಿಕೊಂಡು ವಾಸವಿದ್ದರು ಎನ್ನಲಾಗಿದೆ. ಇವರು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತರ ಸ್ಥಳದಲ್ಲಿ ಕೊಡಲಿ ಹಾಗೂ ಗರಗಸ ಪತ್ತೆಯಾಗಿವೆ ಎನ್ನಲಾಗುತ್ತಿದೆ.
ಇನ್ನು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪಿಎಸ್ಐ ಬಾಹುಬಲಿ ಎಂ ಪಡನಾಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.