ಚಿಕ್ಕಬಳ್ಳಾಪುರ: ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಹೋರಾಟ ಮತ್ತು ಸದಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಸೇವೆಯನ್ನು ಗುರುತಿಸಿ ಪೃಕೃತಿ ಧರ್ಮ ಪೀಠ ಟ್ರಸ್ಟ್ ವತಿಯಿಂದ ಇಂದು ಯುಗಾದಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಸಂಸ್ಥೆಯು ಪರಿಸರ ಸಂರಕ್ಷಣೆ ಹಾಗೂ ಶಾಲಾ ಮಕ್ಕಳಿಗೆ ಸಹಾಯ ಮತ್ತು ಕನ್ನಡ ಪರ ಹೋರಾಟಗಳನ್ನು ನಡೆಸಿ ಕೊಂಡು ಬರುತ್ತಿದೆ. ರಾಜ್ಯಾದ್ಯಂತ ನಮ್ಮ ಸಂಸ್ಥೆಯು ಕಾರ್ಯಾಚರಿಸುತ್ತಿದೆ ಮುಂದಿನ ದಿನಗಳಲ್ಲಿ ಒಂದು ಕೋಟಿ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಸಂಸ್ಥೆಯು ರಾಜ್ಯಾಧ್ಯಕ್ಷರಾದ ಡಾ. ನಂದಿ ಬಾಷ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ವಿ.ರಾಜಶೇಖರ್ ಸನ್ಮಾನ ಪುರಸ್ಕಾರವನ್ನು ಸ್ವೀಕರಿಸಿದರು. ಪೃಕೃತಿ ಧರ್ಮ ಪೀಠ ಟ್ರಸ್ಟ್ ಇದರ ಸಂಸ್ಥಾಪಕರಾದ ಶ್ರೀ ಜಿ ಶ್ರೀನಿವಾಸ ಭಾರತದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರು ಕರ್ನಾಟಕ ಲೋಕಾಯುಕ್ತ ನಿಟ್ಟೆ ಸಂತೋಷ್ ಹೆಗ್ಡೆ ಸನ್ಮಾನ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೃಕೃತಿ ಧರ್ಮ ಪೀಠ ಟ್ರಸ್ಟ್ ಪದಾಧಿಕಾರಿಗಳು ಮತ್ತು ಜಿ ಎಚ್ ಎನ್ ಫೌಂಡೇಶನ್ ಜಿ ಎಚ್ ನಾಗರಾಜ್ ಮತ್ತು ಇನ್ನಿತರ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1