ಶಿಕ್ಷಣ ಇಲಾಖೆ 5, 8,9, ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಯಾವುದೇ ವಿದ್ಯಾರ್ಥಿಯನ್ನ ಅನುತೀರ್ಣ ಮಾಡದೆ ಮೌಲ್ಯಾಂಕನ ಮಾದರಿಯ ಪಬ್ಲಿಕ್ ಮಾದರಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಶಿಕ್ಷಣ ಇಲಾಖೆ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ ಶುರು ಮಾಡಿಕೊಂಡು ಹೊಸ ವರಸೆ ಶುರು ಮಾಡಿವೆ.
![](https://samagrasuddi.co.in/wp-content/uploads/2024/01/image-20.png)
ಬೆಂಗಳೂರು, ಜ.03: ಕಳೆದೊಂದು ವರ್ಷದಿಂದ ಶಿಕ್ಷಣ ಇಲಾಖೆ (Karnataka Education Department) ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಐದು ಎಂಟು ಹಾಗು 9ನೇ ತರಗತಿಗೆ ಪಬ್ಲಿಕ್ ಮಾದರಿಯ ಮೌಲ್ಯಾಂಕನ ಎಕ್ಸಂ ನಡೆಸಲು ಮುಂದಾಗಿದೆ. ಆದರೆ ಈ ಪರೀಕ್ಷೆ ಈಗ ಪ್ರತಿಷ್ಠೆಯ ಕಣವಾಗಿದ್ದು ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಠಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನೂ ಶಿಕ್ಷಣ ಇಲಾಖೆಯ ಮೌಲ್ಯಾಂಕನ ಪರೀಕ್ಷೆಗಳ ಹಠದಲ್ಲಿ ಖಾಸಗಿ ಶಾಲೆಗಳು ಹೊಸ ಲಾಭಿ ಶುರು ಮಾಡಿಕೊಂಡಿರುವ ಆರೋಪ ಕೇಳಿ ಬರ್ತಿದೆ.
ಶಿಕ್ಷಣ ಇಲಾಖೆ ಕಳೆದ ವರ್ಷ ಹಠಕ್ಕೆ ಬಿದ್ದಂತೆ 5 ಹಾಗೂ 8 ನೇ ತರಗತಿಗೆ ಬೋರ್ಡ್ ಮಾದರಿಯ ಎಕ್ಸಂ ನಡೆಸಿತ್ತು. ಈಗ 9 ಹಾಗೂ 11 ಕ್ಕೂ ಪರಿಕ್ಷೆ ನಡೆಸಲು ಮುಂದಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಸಗಿ ಶಾಲೆಗಳ ಒಕ್ಕೂಟ ಹೊಸ ವರಸೆ ಶುರುಮಾಡಿದೆ. ಮತ್ತೆ ಶಾಲಾ ಮಟ್ಟದಲ್ಲಿ ಪಾಸ್ ಫೇಲ್ ಫೈಟ್ ಶುರುವಾಗಿದೆ. ಶಿಕ್ಷಣ ಇಲಾಖೆ 5, 8,9, ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಯಾವುದೇ ವಿದ್ಯಾರ್ಥಿಯನ್ನ ಅನುತೀರ್ಣ ಮಾಡದೆ ಮೌಲ್ಯಾಂಕನ ಮಾದರಿಯ ಪಬ್ಲಿಕ್ ಮಾದರಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ಮೌಲ್ಯಂಕನ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಕೂಡಾ ಪ್ರಕಟಿಸಿದೆ. ಜೊತೆಗೆ ಈ ಪರೀಕ್ಷೆಯಲ್ಲಿ ಫೇಲ್ ಮಾಡದೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಶಿಕ್ಷಣ ಇಲಾಖೆ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ ಶುರು ಮಾಡಿಕೊಂಡು ಹೊಸ ವರಸೆ ಶುರು ಮಾಡಿವೆ.
ಖಾಸಗಿ ಶಾಲೆಗಳಿಂದ ಶುಲ್ಕ ಲಾಭಿ ಅಂತಾ ಪೋಷಕರ ಕಿಡಿ
ಇನ್ನು ಶಾಲಾ ಶಿಕ್ಷಣ ಇಲಾಖೆಯ ಮೌಲ್ಯಾಂಕನ ಪರೀಕ್ಷೆಗೆ ಮೊದಲಿನಿಂದಲೂ ವಿರೋಧ ಹೊರ ಹಾಕಿರುವ ಪೋಷಕರ ಸಮನ್ವಯ ಸಮಿತಿ ಮಕ್ಕಳಿಗೆ ಈ ಬೋರ್ಡ್ ಮಾದರಿಯ ಪರೀಕ್ಷೆಗಳು ಬೇಡ ಅಂತಿದ್ದಾರೆ. ಈಗಾಗಲೇ ಮಕ್ಕಳ ಮೌಲ್ಯ ಅಳೆಯಲು ಎಸ್ ಎ ಮಾದರಿಯ ಪರೀಕ್ಷೆಗಳು ಶಾಲಾ ಮಟ್ಟದಲ್ಲಿ ಇದೆ. ಹೀಗಾಗಿ ಈ ಬೋರ್ಡ್ ಮಾದರಿಯ ಮೌಲ್ಯಾಂಕನ ಎಕ್ಸಂ ಬೇಡ ಎಂದಿದ್ದಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪಾಸ್ ಫೇಲ್ ಇಲ್ಲದೆ ಹೇಗೆ ಪರೀಕ್ಷೆ ನಡೆಸುವುದು. ಕನಿಷ್ಠ ಕಲಿಕೆಯಾಗದೆ ವಿದ್ಯಾರ್ಥಿಯ ಅನುತೀರ್ಣ ಮಾಡುವ ಅವಕಾಶ ಕಲ್ಪಿಸುವ ಕಾಯ್ದೆಯನ್ನ ಅನುಷ್ಠಾನ ಮಾಡದೆ ಕೇವಲ ಮೌಲ್ಯಂಕನ ಪರೀಕ್ಷೆ ನಡೆಸುವುದು ಎಷ್ಟು ಸರಿ. ತರಗತಿಯಲ್ಲಿ ಕಲಿಕಾ ನ್ಯೂನ್ಯೆತೆ ಮಾನಸಿಕ ಸಮಸ್ಯೆ ಇರುವ ಮಕ್ಕಳು ಆಟಿಸಂ ಚೈಲ್ಡ್ ಇರ್ತಾರೆ ಕೆಲವು ಮಕ್ಕಳಿಗೆ ಕನಿಷ್ಠ ಕಲಿಕೆಯಾಗುತ್ತೆ ಇತಂಹ ಮಕ್ಕಳನ್ನ ಪರೀಕ್ಷಾ ಅವಧಿ ಹಾಗೂ ಪುನಾರಾವರ್ತನೆಗೆ ಅವಕಾಶ ಇಲ್ಲದೆ ಬರಿ ಇತಂಹ ಪರೀಕ್ಷೆ ನಡೆಸುವುದು ಎಷ್ಟು ಸರಿ ಅಂತಾ ವಿರೋಧ ಶುರು ಮಾಡಿಕೊಂಡಿವೆ. ಖಾಸಗಿ ಶಾಲೆಗಳ ಜೊತೆ ಚರ್ಚೆ ಮಾಡಿಕೊಂಡು ಮೌಲ್ಯಂಕನ ಪರೀಕ್ಷೆಗಳ ನಡೆಸುವುದು ಸೂಕ್ತ ಅಂತಿವೆ.
ಒಟ್ನಲ್ಲಿ ಪಬ್ಲಿಕ್ ಮಾದರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆಯ ನಡೆ ಮಕ್ಕಳ ಪಾಲಿಗೆ ಅದೆಷ್ಟು ಉಪಯುಕ್ತವೋ ಗೊತ್ತಿಲ್ಲ. ಆದರೆ ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗದಂತೆ ಶಿಕ್ಷಣ ಇಲಾಖೆ ನಿಗಾ ವಹಿಸಬೇಕಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1