ಉಪೇಂದ್ರ ʼಯುಐʼ ಟೀಸರ್‌ ರಿಲೀಸ್‌..! ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಬುದ್ದಿವಂತ.. ಟ್ಯಾಲೆಂಟ್‌ ಇದ್ರೆ ತಿಳ್ಕೋರಿ..

UI movie teaser released : ಬಹಳಷ್ಟು ದಿನದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರತಂಡ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಹುಟ್ಟು ಹಬ್ಬ ಮತ್ತು ಗಣೇಶ ಹಬ್ಬದ ಗಿಫ್ಟ್‌ ನೀಡಿದೆ.

Upendra UI teaser : ಸ್ಯಾಂಡಲ್​ವುಡ್​ ಸೂಪರ್‌ ಸ್ಟಾರ್‌ ನಟ, ನಿರ್ದೇಶಕ ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

ಹೌದು.. ಈ ಸಮಯಕ್ಕಾಗಿ ಬಹಳಷ್ಟು ದಿನದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರತಂಡ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಹುಟ್ಟು ಹಬ್ಬ ಮತ್ತು ಗಣೇಶ ಹಬ್ಬದ ಗಿಫ್ಟ್‌ ನೀಡಿದೆ. ಈ ಚಿತ್ರ ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಅಲ್ಲದೆ, ಬಹಳಷ್ಟು ದಿನಗಳ ಬಳಿಕ ಉಪ್ಪಿ ಡೈರಕ್ಟರ್​ ಕ್ಯಾಪ್​ ತೊಟ್ಟಿದ್ದಾರೆ.

ಕುದುರೆ ಸದ್ದು, ಕತ್ತಿ, ಮಚ್ಚಿನ ಅಬ್ಬರ, ಕತ್ತಲೆ ಸ್ಕ್ರೀನ್‌ ಮೇಲೆ ಯುಐ ಟೈಟಲ್‌, ಈ ಟೀಸರ್‌ ನಿಮ್ಮ ಕಲ್ಪನೆಗಾಗಿ ಎಂದು ಬರುವ ಅಕ್ಷರ ಮತ್ತೊಮ್ಮೆ ಬುದ್ದಿವಂತ ಪ್ರೇಕ್ಷಕನ ತೆಲೆಗೆ ಹುಳ ಬಿಡುವ ಕೆಲಸ ಮಾಡಿದ್ದಾನೆ. ಅಲ್ಲದೆ, ಟೀಸರ್‌ನಲ್ಲಿ ಬರುವ ಹಿನ್ನೆಲೆ ಧ್ವನಿಯೇ ಟೀಸರ್‌ನ ಹೈಲೇಟ್‌.. 

ಇನ್ನು ಟೀಸರ್‌ ರಿಲೀಸ್‌ ವೇಳೆ ಅಭಿಮಾನಿಗಳು ವೇದಿಕೆ ಮೇಲೆ ಬಂದು ಟೀಸರ್‌ ಬಿಡುಗಡೆ ಮಾಡಬಾರದು ಅಂತ ಗಲಾಟೆ ತಗೆದರು. ಈ ವೇಳೆ ಫ್ಯಾನ್ಸ್‌ ಅಭಿಮಾನಿಗಳು ತಲೆ ಎತ್ತಿ ನೋಡುವಂತೆ ಟೀಸರ್‌ ರಿಲೀಸ್‌ ಮಾಡ್ತೀನಿ ಅಂದು ಇವಾಗ ಹೀಗೆ ಮಾಡಿದ್ರೆ ಹೇಗೆ ಅಂದ್ರು, ಆಗ ಉಪ್ಪಿ ಮತ್ತು ಶಿವಣ್ಣ ಸಮಾಧಾನ ಮಾಡಿದರು. ಅಲ್ಲದೆ ಕೇಕ್‌ ಕಟ್‌ ಮಾಡಿ ಅಭಿಮಾನಿಗಳಿಗೆ ತಿನ್ನಿಸಿದರು.

ಯುಐ ಪ್ಯಾನ್-ಇಂಡಿಯನ್ ಚಲನಚಿತ್ರವಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದಾರೆ. ಜಿ. ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ಅವರು ‘ಲಹರಿ ಫಿಲ್ಮ್ಸ್ LLP’ ಮತ್ತು “ವೀನಸ್ ಎಂಟರ್‌ಟೈನರ್ಸ್” ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/entertainment/upendra-ui-movie-teaser-released-159307

Leave a Reply

Your email address will not be published. Required fields are marked *