UPI Payment Safety Tips: ಯು‌ಪಿ‌ಐ ಪೇಮೆಂಟ್ ವೇಳೆ ನೆನಪಿರಲಿ ಈ ವಿಷಯಗಳು

UPI Payment Safety Tips: ಈ ಡಿಜಿಟಲ್ ಯುಗದಲ್ಲಿ ಯುಪಿಐ ಪಾವತಿಗಳು ಜನರ ಕೆಲಸವನ್ನು ತುಂಬಾ ಸುಲಭಗೊಳಿಸಿವೆ. ಆದರೆ, ಯುಪಿಐ ಪೇಮೆಂಟ್ ವೇಳೆ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಬಹಳ ಮುಖ್ಯ. ಇಲ್ಲದಿದ್ದರೆ, ಭಾರೀ ನಷ್ಟ ಉಂಟಾಗಬಹುದು. 

  • ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಪಾವತಿ ವ್ಯವಸ್ಥೆಯು ಹಣಕಾಸಿನ ವಹಿವಾಟನ್ನು ನಡೆಸಲು ಬಹಳ ಸುಲಭ ವಿಧಾನ.
  • ಆದರೆ, ಈ ವೇಳೆ ನೀವು ಸ್ವಲ್ಪ ಮೈಮರೆತರೂ, ನಿಮ್ಮಿಂದ ಸಣ್ಣ ತಪ್ಪಾದರೂ ಸಹ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು

UPI Payment Safety Tips: ಯುಪಿಐ ಪೇಮೆಂಟ್ ಎಂದರೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಪಾವತಿ ವ್ಯವಸ್ಥೆಯು ಹಣಕಾಸಿನ ವಹಿವಾಟನ್ನು ನಡೆಸಲು ಬಹಳ ಸುಲಭ ವಿಧಾನ. ಆದರೆ, ಈ ವೇಳೆ ನೀವು ಸ್ವಲ್ಪ ಮೈಮರೆತರೂ, ನಿಮ್ಮಿಂದ ಸಣ್ಣ ತಪ್ಪಾದರೂ ಸಹ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಿಮಗೆ ತಿಳಿದಿದೆಯೇ? 

ಈ ಡಿಜಿಟಲ್ ಯುಗದ ಯುಪಿಐ ಪಾವತಿಗಳು ಜನರ ಕೆಲಸವನ್ನು ತುಂಬಾ ಸುಲಭಗೊಳಿಸಿವೆ. ಆದರೆ,  ಯು‌ಪಿ‌ಐ ಪಾವತಿ ವೇಳೆ ಸಣ್ಣ ನಿರ್ಲಕ್ಷ್ಯವೂ ನಿಮಗೆ ಭಾರೀ ನಷ್ಟ ಉಂಟು ಮಾಡಬಹುದು. ಇದನ್ನು ತಪ್ಪಿಸಲು ಈ ಕೆಳಗೆ ವಿಷಯಗಳನ್ನು ನೆನಪಿನಲ್ಲಿಡುವುದು ಅವಶ್ಯಕ. ಅವುಗಳೆಂದರೆ: 

ಸುರಕ್ಷಿತ ಪಿನ್: 
ನೀವು ನಿಮ್ಮ ಎಟಿಎಂ ಪಿನ್ ನಂತೆಯೇ ಯುಪಿಐಗೂ ಕೂಡ ಸುರಕ್ಷಿತ ಪಿನ್ ಹೊಂದಿಸಿ. ಮಾತ್ರವಲ್ಲ, ಈ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 

ವಿಶ್ವಾಸಾರ್ಹ ಅಪ್ಲಿಕೇಶನ್‌ಗಳ ಬಳಕೆ: 
ನೀವು ಯುಪಿಐ ಅನ್ನು ಬಳಸುವಾಗ ನಿಮ್ಮ ಬ್ಯಾಂಕ್ ಅಥವಾ ಅಧಿಕೃತ ಸೇವಾ ಪೂರೈಕೆದಾರರು ಒದಗಿಸಿದ ಅಧಿಕೃತ ಮತ್ತು ವಿಶ್ವಾಸಾರ್ಹ UPI ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ. ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಅನ್ನು ಬಳಸಬೇಡಿ. ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. 

ಪಾವತಿ ದೃಢೀಕರಿಸುವ ಮುನ್ನ ಇರಲಿ ವಿಶೇಷ ಗಮನ: 
ನೀವು ಹಣ ಪಾವತಿಯನ್ನು ದೃಢೀಕರಿಸುವ ಮೊದಲು ನೀವು ಹಣ ಕಳುಹಿಸುತ್ತಿರುವ ಖಾತೆಯ ವಿವರವನ್ನು ಎರಡೆರಡು ಬಾರಿ ಪರಿಶೀಲಿಸಿ. ಒಂದೇ ಒಂದು ನಂಬರ್ ಬದಲಾದರೂ ಹಣ ಬೇರೆ ಖಾತೆಗೆ ಸೇರುತ್ತದೆ. 

ವಹಿವಾಟಿನ ಮಿತಿ: 
ನೀವು ನಿಮ್ಮ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಬಯಸಿದರೆ ನಿಮ್ಮ ಯುಪಿಐ ಅಪ್ಲಿಕೇಶನ್‌ನಲ್ಲಿ ದೈನಂದಿನ ವಹಿವಾಟು ಮಿತಿಯನ್ನು ಹೊಂದಿಸಿ. ಇದು ನಿಮ್ಮ ಸುರಕ್ಷತೆಯ ದೃಷ್ಟಿಯಿಂದಲೂ ಪ್ರಯೋಜನಕಾರಿ ಆಗಿದೆ. 

ಹಗರಣಗಳ ಬಗ್ಗೆ ಎಚ್ಚರ: 
ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಆನ್ಲೈನ್ ಹಗರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ UPI ವಿವರಗಳನ್ನು ಕೇಳುವ ಅಪೇಕ್ಷಿಸದ ಪಾವತಿ ವಿನಂತಿಗಳು ಅಥವಾ ಕರೆಗಳು ಹೆಚ್ಚಾಗಿದ್ದು, ಇಂತಹ ಹಗರಣಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಎಂತಹದ್ದೇ ಸಂದರ್ಭದಲ್ಲಿ ಯಾವುದೇ ಗೊತ್ತಿಲ್ಲದ ಲಿಂಕ್ ಕ್ಲಿಕ್ ಮಾಡುವುದಾಗಲಿ, ಯಾರೊಂದಿಗಾದರೂ ನಿಮ್ಮ ಯುಪಿಐ ವಿವರಗಳನ್ನು ಹಂಚಿಕೊಳ್ಳುವುದನ್ನಾಗಲಿ ಮಾಡಬೇಡಿ. 

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source: https://zeenews.india.com/kannada/business/upi-payment-safety-tips-keep-these-things-in-mind-during-upi-payment-158597

Leave a Reply

Your email address will not be published. Required fields are marked *