UPI ಬಳಕೆದಾರರೇ ಗಮನಿಸಿ: ಈ ಆಪ್ಷನ್​ ತಕ್ಷಣ ನಿಷ್ಕ್ರಿಯಗೊಳಿಸಿ, ಇಲ್ಲ ಅಂದ್ರೆ ನಿಮ್ಮ ಬ್ಯಾಂಕ್​ ಖಾತೆ ಖಾಲಿ!

ನವದೆಹಲಿ: ತಂತ್ರಜ್ಞಾನ ಅಭಿವೃದ್ಧಿಯಿಂದ ನಮ್ಮ ಜೀವನವನ್ನು ಸುಲಭ ಮತ್ತು ಆರಾಮದಾಯಕವಾಗಿಸಿದೆ. ಪ್ರಸ್ತುತ ತಂತ್ರಜ್ಞಾನದ ಸಹಾಯದಿಂದ ನಮ್ಮ ಅನೇಕ ಕೆಲಸಗಳು ಸುಲಭವಾಗಿ ನಡೆಯುತ್ತಿವೆ. ಇದರ ಭಾಗವಾಗಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ವಿಭಾಗ ಅಭೂತಪೂರ್ವ ವೇಗದಲ್ಲಿ ವಿಕಸನಗೊಳ್ಳುತ್ತಿದೆ. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಪ್ಲಾಟ್​ಫಾರ್ಮ್​ಗಳು ಜನರ ದೈನಂದಿನ ಹಣಕಾಸು ವಹಿವಾಟುಗಳಿಗೆ ಅತ್ಯಗತ್ಯ ಸಾಧನಗಳಾಗಿವೆ. ಯುಪಿಐ ಮೂಲಕ ಹಣಕಾಸಿನ ವಹಿವಾಟು ನಡೆಸುವುದು ತುಂಬಾ ಸುಲಭವಾಗಿದೆ.

ಆರ್‌ಬಿಐ ಮತ್ತು ಎನ್‌ಪಿಸಿಐನ ಉಪಕ್ರಮದೊಂದಿಗೆ ವಿವಿಧ ಡಿಜಿಟಲ್​ ಪಾವತಿ ಆ್ಯಪ್‌ನಲ್ಲಿ ಹೊಸ ಫೀಚರ್‌ಗಳು ಲಭ್ಯವಾಗುತ್ತಿವೆ. ಅವುಗಳಲ್ಲಿ ಒಂದು ‘ಯುಪಿಐ ಆಟೋಪೇ’ ಸೇವೆ. ಇದರ ಸಹಾಯದಿಂದ, ನೀವು ಪ್ರತಿ ತಿಂಗಳು ಒಂದೇ ಬಾರಿಗೆ ವಿವಿಧ ಬಿಲ್‌ಗಳನ್ನು ಪಾವತಿಸಬಹುದು. ಅಂದರೆ ಸಿಮ್​ ಕಾರ್ಡ್ ರಿಚಾರ್ಜ್, ಇಂಟರ್ನೆಟ್, ವಿದ್ಯುತ್, ನೀರು, ಗ್ಯಾಸ್ ನಂತಹ ನಿಮ್ಮ ಮಾಸಿಕ ಸೇವಾ ಬಿಲ್‌ಗಳನ್ನು ಒಂದೇ ಬಾರಿಗೆ ಸ್ವಯಂಚಾಲಿತವಾಗಿ ಪಾವತಿಸಬಹುದು. ಇದಕ್ಕಾಗಿ ನೀವು ಯುಪಿಐ ಸ್ವಯಂ ಪಾವತಿ(ಆಟೋಪೇ) ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ನಂತರ ಪ್ರತಿ ತಿಂಗಳು ನಿಮ್ಮ ಬಿಲ್‌ಗಳನ್ನು ಪಾವತಿಸಲು ಪ್ರತ್ಯೇಕವಾಗಿ ಲಾಗಿನ್ ಮಾಡುವ ಅಗತ್ಯವಿಲ್ಲ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

ಆದರೆ, ಈ ಆಟೋಪೇ ಫೀಚರ್​ನಿಂದ ಎಷ್ಟು ಲಾಭ ಇದೆಯೋ, ಅಷ್ಟೇ ನಷ್ಟ ಕೂಡ ಇದೆ. ಹೌದು, ಈ ಯುಪಿಐ ಆಟೋಪೇ ಸೇವೆಯಿಂದ ನೀವು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ, ನೀವು ನಿಮ್ಮ ಖಾತೆಯಲ್ಲಿ ಯುಪಿಐ ಆಟೋಪೇ ಮೋಡ್ ಅನ್ನು ನಿಷ್ಕ್ರಿಯಗೊಳಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

PhonePe ನಲ್ಲಿ ಯುಪಿಐ ಆಟೋಪೇ ಆಯ್ಕೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?:

  • ಮೊದಲಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ‘ಪೇಮೆಂಟ್ ಮ್ಯಾನೇಜ್​ಮೆಂಟ್ ಸೆಕ್ಷನ್​ನಲ್ಲಿ ಕಾಣುವ ಆಟೋಪೇ ಆಪ್ಷನ್​ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ನಿಮಗೆ ‘Pause’ ಮತ್ತು ‘Delete’ ಎಂಬ ಎರಡು ಆಯ್ಕೆಗಳು ಕಾಣುತ್ತವೆ.
  • ಈಗ ನೀವು ಆಟೋಪೇ ತಾತ್ಕಾಲಿಕವಾಗಿ ನಿಲ್ಲಿಸಲು ‘Pause’ ಎಂಬ ಆಪ್ಷನ್ ಆಯ್ಕೆ ಮಾಡಿ.
  • ಒಂದು ವೇಳೆ ಆಟೋಪೇ ಶಾಶ್ವತವಾಗಿ ಆಫ್ ಮಾಡಬೇಕು ಎಂದು ಬಯಸಿದರೆ ‘Delete’ ಎಂಬ ಆಪ್ಷನ್ ಆಯ್ಕೆ ಮಾಡಿ.
  • ನಂತರ ನಿಮ್ಮ ಆಟೋಪೇ ಆಪ್ಷನ್ ಶಾಶ್ವತವಾಗಿ ನಿಷ್ಕ್ರಿಯಗೊಳ್ಳುತ್ತದೆ.

Paytm ನಲ್ಲಿ ಆಟೋಪೇ ಆಯ್ಕೆ ನಿಷ್ಕ್ರಿಯಗೊಳಿಸುವುದು ಹೇಗೆ?:

  • ಮೊದಲಿಗೆ ನಿಮ್ಮ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಎಡ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ನಿಮ್ಮ ಪಾವತಿ ಸೆಟ್ಟಿಂಗ್‌ಗಳನ್ನು ಪ್ರವೇಶಿಸಲು ಮೆನುವಿನಿಂದ ‘ಯುಪಿಐ ಮತ್ತು ಪಾವತಿ ಸೆಟ್ಟಿಂಗ್ಸ್​’ ಆಪ್ಷನ್ ಆಯ್ಕೆ ಮಾಡಿ.
  • ಯುಪಿಐ ಸೆಟ್ಟಿಂಗ್ಸ್​ ವಿಭಾಗದಲ್ಲಿ ಆಟೋಪೇ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಎಲ್ಲ ಆಟೋಪೇ ಪಟ್ಟಿಯಿಂದ, ನೀವು ನಿಷ್ಕ್ರಿಯಗೊಳಿಸಲು ಬಯಸುವ ಸೇವೆಯನ್ನು ಆಯ್ಕೆಮಾಡಿ. ನಂತರ ಆಟೋಪೇ ನಿಷ್ಕ್ರಿಯಗೊಳಿಸಿ.

Google Pay ನಲ್ಲಿ ಆಟೋಪೇ ಆಯ್ಕೆ ನಿಷ್ಕ್ರಿಯಗೊಳಿಸುವುದು ಹೇಗೆ?:

  • ಗೂಗಲ್ ಪೇ ಆ್ಯಪ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಟ್ಯಾಪ್ ಮಾಡಿ.
  • ನಂತರ ಆಟೋಪೇ ಆಪ್ಷನ್​ ಆಯ್ಕೆ ಮಾಡಿ.
  • ನಿಮ್ಮ ಸಕ್ರಿಯ ಆಟೋಪೇ ಪಟ್ಟಿಯಿಂದ ನೀವು ನಿಷ್ಕ್ರಿಯಗೊಳಿಸಲು ಬಯಸುವ ಸೇವೆ ಆಯ್ಕೆಮಾಡಿ.
  • ಈಗ ನಿರ್ದಿಷ್ಟ ಸೇವೆಯ ಆಟೋಪೇ ಕ್ಯಾನ್ಸೆಲ್ ಆಪ್ಷನ್​ ಮೇಲೆ ಟ್ಯಾಪ್ ಮಾಡಿ.
  • ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ ಆಟೋಪೇ ನಿಷ್ಕ್ರಿಯಗೊಳಿಸಿ
  • ಆಟೋಪೇ ನಿಷ್ಕ್ರಿಯಗೊಳಿಸಿದ ನಂತರ ನೀವು ದೃಢೀಕರಣ ಸಂದೇಶ ಸ್ವೀಕರಿಸುತ್ತೀರಿ.

ಯುಪಿಐ ಆಟೋಪೇ ನಿಷ್ಕ್ರಿಯಗೊಳಿಸಿದ ನಂತರ ಏನಾಗುತ್ತದೆ?: ಆಟೋಪೇ ಫೀಚರ್​ ಅನ್ನು ನಿಷ್ಕ್ರಿಯಗೊಳಿಸಿದ ನಂತರ, ಆ್ಯಪ್​ನಿಂದ ಯಾವುದೇ ಸೇವೆಗೆ ಸ್ವಯಂಚಾಲಿತವಾಗಿ ಶುಲ್ಕ ಕಡಿತವಾಗುವುದಿಲ್ಲ. ನಿಮಗೆ ಅಗತ್ಯವಿದ್ದರೆ ಆಟೋಪೇ ಅನ್ನು ಮತ್ತೆ ಸಕ್ರಿಯಗೊಳಿಸಬಹುದು. ಅನಗತ್ಯ ಪಾವತಿಗಳನ್ನು ತಪ್ಪಿಸಲು ಮತ್ತು ನೀವು ಪಡೆಯುತ್ತಿರುವ ಸೇವೆಗಳಿಗೆ ಮಾತ್ರ ಹಣ ಪಾವತಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಇದರಿಂದ ಸಾಧ್ಯ.

Source : https://www.etvbharat.com/kn/!technology/how-to-deactivate-upi-autopay-option-learn-all-the-processes-step-by-step-in-kannada-kas25012804034

Leave a Reply

Your email address will not be published. Required fields are marked *