
UPW vs GGW Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ಹಂಗಾಮಿ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಪಾದದ ನೋವಿಗೆ ಒಳಗಾಗಿದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯವಾಗಿ ಸೋತಿರುವ ಗುಜರಾತ್ ಜೈಂಟ್ಸ್ ಈ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ. ಮತ್ತೊಂದೆಡೆ ಚೊಚ್ಚಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡುವ ವಿಶ್ವಾಸದೊಂದಿಗೆ ಯುಪಿ ವಾರಿಯರ್ಸ್ ಕಣಕ್ಕಿಳಿದಿದೆ.
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಸೊಪ್ಪದಂಡಿ ಯಶಸ್ರಿ, ಸೋಫಿ ಎಕ್ಲೆಸ್ಟೋನ್, ಶಾಬ್ನಿಮ್ ಇಸ್ಮಾಯಿಲ್, ಲಾ ಹರ್ರಿಸ್ವಾಯಿಲ್, ರಾಜೇಶ್ವರಿ ಇಸ್ಮಾಯಿಲ್ , ಅಂಜಲಿ ಸರ್ವಾಣಿ, ಲಕ್ಷ್ಮಿ ಯಾದವ್
ಗುಜರಾತ್ ಜೈಂಟ್ಸ್ ತಂಡ: ಕಿಮ್ ಗಾರ್ತ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಬೆತ್ ಮೂನಿ (ನಾಯಕಿ), ಹರ್ಲೀನ್ ಡಿಯೋಲ್, ಹರ್ಲಿ ಗಾಲಾ, ಅನ್ನಾಬೆಲ್ ಸದರ್‌ಲ್ಯಾಂಡ್, ಸುಷ್ಮಾ ವರ್ಮಾ, ಸ್ನೇಹ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ , ಅಶ್ವನಿ ಕುಮಾರಿ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ತನುಜಾ ಕನ್ವರ್