ಕರ್ನಾಟಕ ಬಂದ್ : ಕರ್ನಾಟಕದಲ್ಲಿ ಮರಾಠಿ ಪುಂಡರಿಂದ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ, ಎಂಇಎಸ್ ಸಂಘಟನೆ ನಿಷೇಧ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕೈಬಿಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 22ರಂದು ಕನ್ನಡಪರ ಸಂಘಟನೆಗಳಿಂದ ಬಂದ್ ಕರೆ ನೀಡಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ಮಾರ್ಚ್ 22ರ ಶನಿವಾರದಂದು ಹಲವು ಸೇವೆಗಳು ಇರುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ. ಬಂದ್‌ಗೆ ಕೆಲವು ಶಾಲಾ – ಕಾಲೇಜುಗಳು ಬೆಂಬಲ ಸೂಚಿಸಿರುವುದು ಇದೀಗ ಭಾರೀ ಗೊಂದಲಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಮರಾಠಿ ಪುಂಡರು ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ಕನ್ನಡ ಪರ ಗುಂಪುಗಳ ಸಂಘಟನೆಗಳ ಒಕ್ಕೂಟವು ಮಾರ್ಚ್ 22ರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಬಂದ್‌ಗೆ ಕರೆ ನೀಡಿದೆ. ಆದರೆ, ಈ ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿಲ್ಲ. ಅಲ್ಲದೇ ಕೆಲವು ವಿಷಯದಲ್ಲಿ ಗೊಂದಲ ಮುಂದುವರಿದಿದೆ. ಅದರಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ಇರುವುದು ಸಹ ಪ್ರಮುಖವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ವಿವಿಧ ತರಗತಿಗಳ ಪರೀಕ್ಷೆಗಳು ನಡೆಯುತ್ತಿರುವುದರ ನಡುವೆಯೇ ಬಂದ್ ಸಹ ಇರುವುದು ಹಲವು ಗೊಂದಲ ಹಾಗೂ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಂದ್‌ಗೆ ಕೆಲವು ಶಾಲಾ – ಕಾಲೇಜುಗಳು ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದೆ.
ಶಾಲೆಗಳ ಸಂಘಟನೆಯ ಮುಖ್ಯಸ್ಥರು ನಾವೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಇಚ್ಛಿಸುತ್ತೇವೆ. ಆದರೆ ಕರ್ನಾಟಕದಲ್ಲಿ ಪರೀಕ್ಷೆಗಳು ನಡೆದಿವೆ. ಹೀಗಾಗಿ, ನೈತಿಕ ಬೆಂಬಲವನ್ನು ಮಾತ್ರ ನೀಡುತ್ತಿದ್ದೇವೆ ಎಂದು ಹೇಳಿರುವುದು ವರದಿಯಾಗಿದೆ. ಪರೀಕ್ಷೆಗಳನ್ನು ಮುಂದೂಡುವುದು ಅಥವಾ ರದ್ದು ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳಲ್ಲಿ ಗೊಂದಲ: ಪರೀಕ್ಷೆ ಅವಧಿಯಲ್ಲಿ ಬಂದ್ ನಡೆಯುತ್ತಿರುವುದು ಭಾರೀ ಗೊಂದಲಕ್ಕೆ ಕಾರಣವಾಗಿದೆ. ಇದು ಮಕ್ಕಳ ಪರೀಕ್ಷಾ ಅವಧಿಯಾಗಿರುವುದರಿಂದ ಎಲ್ಲರೂ ಪರೀಕ್ಷೆಯ ಗೊಂದಲದಲ್ಲಿ ಇದ್ದಾರೆ. ಈ ರೀತಿ ಇರುವಾಗಲೇ ಬಂದ್ ದಿನಾಂಕವೂ ಸೇಮ್ ಇರುವುದು ಗೊಂದಲ ಮೂಡಿಸಿದೆ.
ಪರೀಕ್ಷೆಯ ಅವಧಿಯಲ್ಲೇ ಬಂದ್ ಮಾಡಬಾರದು ಬಂದ್ ಮುಂದೂಡಬೇಕು ಎಂದು ಮನವಿ ಮಾಡಿದರೂ ಕನ್ನಡಪರ ಸಂಘಟನೆಗಳು ಇದರಿಂದ ಹಿಂದೆ ಸರಿದಿಲ್ಲ. ಸರ್ಕಾರ ಸಹ ಪರೀಕ್ಷಾ ದಿನಾಂಕವನ್ನು ಮುಂದೂಡಿಲ್ಲ. ಇದರ ನಡುವೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಕರ್ನಾಟಕ ಬಂದ್‌ಗೆ ಯಾವೆಲ್ಲ ಸಂಘಟನೆಗಳ ಬೆಂಬಲ
ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟದಿಂದ ಬೆಂಬಲ ಸಿಕ್ಕಿದೆ. ಕೆಎಸ್‌ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಕನ್ನಡ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದಿಂದ ಬೆಂಬಲ ಸೂಚಿಸಲಾಗಿದೆ. ಓಲಾ, ಉಬರ್ ಅಸೋಸಿಯೋಷನ್ ಹಾಗೂ ಆಟೋ ಸಂಘಟನೆಗಳಿಂದಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.
source: oneindia.com