ಚಿತ್ರದುರ್ಗ ಆ. 23
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿ 2026ರಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಾಣೆಗೆ ನಾನು ಸಹಾ ಆಕಾಂಕ್ಷಿಯಾಗಿದ್ದು, ನನ್ನ ಸೇವೆಯನ್ನು ಪರಿಗಣಿಸಿ ಪಕ್ಷ ಟಿಕೇಟ್ ನೀಡಿದರೆ ಸ್ಪರ್ದೆ ಮಾಡುತ್ತೇನೆ ಈಗಾಗಲೇ ಕಳೆದ ಭಾರಿಯೂ ಸಹಾ ಟಿಕೇಟ್ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷ ಟಿಕೇಟ್ ನೀಡಲಿಲ್ಲ ಈ ಬಾರಿ ಪಕ್ಷ ನನಗೆ ಟಿಕೇಟ್ ನೀಡುವ ಭರವಸೆ ಇದೆ ಎಂದು ನ್ಯಾಯಾವಾದಿ, ಬಿಜೆಪಿಯ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ವಸಂತಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪದವೀಧರ ಚುನಾವಣೆಗೆ ಪದವಿಯನ್ನು ಪಡೆದು ಮೂರು ವರ್ಷವಾಗಿರುವವರು ತಮ್ಮ ಹೆಸರುಗಳನ್ನು ನೊಂದಾಯಿಸುವುದರ ಮೂಲಕ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸಬೇಕಿದೆ ನ. 06 ಮತದಾನಕ್ಕೆ ತಮ್ಮ ಹೆಸರನ್ನು ನೊಂ ದಾಯಿಸಲು ಕೊನೆಯ ದಿನವಾಗಿದೆ ಕಳೆದ ಭಾರಿಯ ಚುನಾವಣೆಯಲ್ಲಿ ನನ್ನ ಕಡೆಯಿಂದ ಈ ಕ್ಷೇತ್ರದಲ್ಲಿ 1.15 ಲಕ್ಷ ಮತದಾರರನ್ನು ನೊಂದಾಯಿಸಿದ್ದೆ ಈ ಬಾರಿ 1.40 ಲಕ್ಷ ಮತದಾರರನ್ನು ನೊಂದಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ನನ್ನ ಪ್ರೌಢಶಾಲೆ ವಿದ್ಯಾಭ್ಯಾಸವೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಸಂಸ್ಥಾನಮಠದ ಸರ್ಕಾರಿ ಪ್ರೌಢಶಾಲೆಯಲ್ಲಿ, ಪಿ.ಯು.ಸಿ: ವಿದ್ಯಾಭ್ಯಾಸವೂ ಅಂತರಗಟ್ಟೆಯ ಶ್ರೀ ನಂದೀಶ್ವರ ಪದವಿ ಪೂರ್ವ ಕಾಲೇಜು, ಪದವಿಯನ್ನು ತುಮಕೂರು ಜಿಲ್ಲೆಯ ತಿಪಟೂರು ಗುರುಕುಲ ವಿದ್ಯಾರ್ಥಿ ನಿಲಯದ ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕಾನೂನು ಪದವಿಯನ್ನು ಬೆಂಗಳೂರಿನ ಜಯನಗರದ ಬಿ.ಇ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ಪಡೆಯಲಾಯಿತು, ನಾನು ಮೂಲತಹ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನವನು ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾದ ನಂತರ ಅನೇಕ ಪದವಿ ವಿದ್ಯಾರ್ಥಿಗಳ, ಬೋಧಕ ಹಾಗೂ ಬೋಧಕೇತರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಅನೇಕ ಕಾಲೇಜುಗಳ ಸಮಸ್ಯೆಗಳಿಗೆ ಸಿಂಡಿಕೇಟ್ ಸಭೆಯಲ್ಲಿ ನ್ಯಾಯ ದೊರಕಿಸಿ ಕೊಟ್ಟಿದ್ದೇನೆ.
ಸಂಘ ಪರಿವಾರದ ಒಡನಾಟಯಿದ್ದು, 2003 ರಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸೇವೆ ಕಾಲೇಜು ವಿದ್ಯಾರ್ಥಿ ಸಂದರ್ಭದಲ್ಲಿ ದಕ್ಷಿಣ ವಲಯ ಸಂಚಾಲಕ ಪೂರ್ಣಾವಧಿಯ ಸಂದರ್ಭದಲ್ಲಿ ನಿರ್ವಹಿಸಿದಲ್ಲಿ 2008: ಉತ್ತರ ವಲಯ ಸಂಘಟನಾ ಕಾರ್ಯದರ್ಶಿ 2009: ಉತ್ತರ ಮತ್ತು ಕೇಂದ್ರ ವಲಯ ಸಂಘಟನಾ ಕಾರ್ಯದರ್ಶಿ 2010: ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ 2010: 56ನೇ ರಾಷ್ಟ್ರೀಯ ಸಮ್ಮೇಳನದ ಪ್ರಬಂಧಕ ಪ್ರಮುಖ 2017 ರಿಂದ 2019: ಕರ್ನಾಟಕ ರಾಜ್ಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಭಾರತೀಯ ಜನತಾ ಪಕ್ಷದಲ್ಲಿ 2020ರಿಂದ ಬಿಜೆಪಿ ಪಕ್ಷದಲ್ಲಿ ಒಡನಾಟ ಕಾನೂನು ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯನಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯಲ್ಲಿ ಕಾರ್ಯನಿರ್ವಹಣೆ 2024 ಮಾರ್ಚ್ ರಿಂದ ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಕಾನೂನು ಪ್ರಕೋಪದ ರಾಜ್ಯ ಸಮಿತಿಯನ್ನು ರಚಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಮಿತಿಯನ್ನು ಸಹ ರಚಿಸಿ ಅವರೊಡನೆ ನಿರಂತರ ಸಂಪರ್ಕದಲ್ಲಿರುತ್ತೇನೆ.
2024ರ ಲೋಕಸಭಾ ಚುನಾವಣೆಯಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರ ಸಹಕಾರದಿಂದ ಲೋಕಸಭಾ ಚುನಾವಣೆಯಲ್ಲಿ ಕಾನೂನು ವಿಭಾಗದ ಚುನಾವಣಾ ಕಾರ್ಯವನ್ನು ಸಮರ್ಥವಾಗಿ ನನ್ನ ತಂಡದೊಡನೆ ಮುನ್ನಡೆಸುವ ಅವಕಾಶ ದೊರಕಿತ್ತು. ಚುನಾವಣಾ ಆಯೋಗಕ್ಕೆ ನೂರಾರು ಮನವಿಗಳನ್ನು ಮತ್ತು ವಿರೋಧಪಕ್ಷದ ಚುನಾವಣಾ ಅಕ್ರಮಗಳ ವಿರುದ್ಧ ದೂರುಗಳನ್ನು ಸಲ್ಲಿಸಿದ್ದೇವೆ ಹಾಗೂ ನಮ್ಮ ಕಾರ್ಯಕರ್ತರ ಪರವಾಗಿ ಕೇಸ್‍ಗಳನ್ನು ಯಶಸ್ವಿಯಾಗಿ ನೆಡೆಸುತ್ತಿದ್ದೇವೆ ಮೈಸೂರಿನ ಮೂಡ ಪ್ರಕರಣ ಎಸ್.ಟಿ ಬೋರ್ಡ್ ಪ್ರಕರಣಗಳನ್ನು ಹೈಕೋರ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಸುವ ಅವಕಾಶ ದೊರಕಿತ್ತು. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ರಾಜ್ಯ ಸಂಚಾಲಕನಾದ ದಿನದಿಂದಲೂ ಇಲ್ಲಿಯವರೆಗೂ ಕಾನೂನು ಪ್ರಕೋಷ್ಠ ಬಲಪಡಿಸುವ ಉದ್ದೇಶದಿಂದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕರ್ತರ ತಂಡವನ್ನು ಕಟ್ಟಿ ಪಕ್ಷವನ್ನು ಬಲಪಡಿಸುವಲ್ಲಿ ಹಾಗೂ ಯುವ ವಕೀಲರನ್ನು ಪಕ್ಷಕ್ಕೆ ಸೇರಿಸುವ ಕಾರ್ಯವನ್ನು ಮಾಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ನಮ್ಮ ಪಕ್ಷ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ವಿಧಿಸಿರುವ ಕೇಸುಗಳ ವಿರುದ್ಧ ನಮ್ಮ ತಂಡದ ಸದಸ್ಯರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಕಾನೂನು ರೀತಿಯಲ್ಲಿ ಸಮರ್ಥವಾಗಿ ಪಕ್ಷ ಹಾಗೂ ಕಾರ್ಯಕರ್ತರ ಪರವಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಕರ್ನಾಟಕ ರಾಜ್ಯದ ಪ್ರಮುಖ ಬಿಜೆಪಿ ನಾಯಕರ-ನೇತಾರರ ಸೂಚನೆಗಳನ್ನು ಪಾಲಿಸಿದ್ದು ಪಕ್ಷದ ರಾಷ್ಟ್ರೀಯ ನಾಯಕರ ಸಂಪರ್ಕದಿಂದ ಅವರ ಆದೇಶ ಪರಿಪಾಲಿಸುವ ಪರಿಪಾಠ ಹೊಂದಿದ್ದೇನೆ ಎಂದು ವಸಂತ ಕುಮಾರ ತಿಳಿಸಿದ್ದಾರೆ. ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಕ್ತಾರ ನಾಗರಾಜ್ ಬೇದ್ರೇ, ಕಾರ್ಯದರ್ಶಿ ರಜನಿ, ಯುವ ಮೋರ್ಚಾದ ಅಧ್ಯಕ್ಷ ಪಾಲಯ್ಯ, ಬಿಜೆಪಿಯ 24 ಪ್ರಕೋಷ್ಠಗಳ ಕಾರ್ಯದರ್ಶಿ ನವೀನ್ ಭಾಗವಹಿಸಿದ್ದರು.
Views: 20