ಮಾ.22ರಂದು ಅಖಂಡ ಕರ್ನಾಟಕ ಬಂದ್: ನಾಳೆ ಚರ್ಚಿಸಲು ಮಹತ್ವದ ಸಭೆ ಕರೆದ ವಾಟಾಳ್ ನಾಗರಾಜ್.

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ಖಂಡಿಸಿ ಮಾರ್ಚ್.22ಕ್ಕೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇದಕ್ಕೂ ಮುನ್ನ ನಾಳೆ ಬಂದ್ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ವಾಟಾಳ್ ನಾಗರಾಜ್ ಮಹತ್ವದ ಸಭೆ ಕರೆದಿದ್ದಾರೆ.


ಬೆಳಗಾವಿಯಲ್ಲಿನ ಮರಾಠಿಗಳ ಪುಂಡಾಟಿಕೆ, ಅಟ್ಟಹಾಸ, ಎಂಇಎಸ್ ನಿಷೇಧಿಸಬೇಕು.

ಕಳಸಾ-ಬಂಡೂರಿ ಮಹದಾಯಿ ಯೋಜನ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು. ಮೇಕೆದಾಟು ಬಗ್ಗ ತಮಿಳುನಾಡು ವಿರೋಧ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ನೀತಿ ವಿರೋಧಿಸಿ ಹಾಗೂ ಚಾಲಕರಿಗೆ ಶಕ್ತಿ ತುಂಬಲು ದಿನಾಂಕ 22-03-2025ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಇದಕ್ಕೂ ಪೂರ್ವದಲ್ಲಿ ಈ ಅಖಂಡ ಕರ್ನಾಟಕ ಬಂದ್ ಬಗ್ಗೆ ಚರ್ಚಿಸಲು ದಿನಾಂಕ 18-03-2025ರ ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ಕನ್ನಡಪರ ಸಂಘಟನೆಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾರ್ಚ್.22ರ ಅಖಂಡ ಕರ್ನಾಟಕ ಬಂದ್ ರೂಪು ರೇಷೆಗಳ ಬಗ್ಗೆ ಚರ್ಚಿಸಲಿದ್ದಾರೆ.

Leave a Reply

Your email address will not be published. Required fields are marked *