ಅಬುಧಾಬಿ: ಐಪಿಎಲ್ 2026 ಮಿನಿ ಹರಾಜು ಭರ್ಜರಿಯಾಗಿ ಆರಂಭಗೊಂಡಿದ್ದು, ಆಲ್ರೌಂಡರ್ಗಳಾದ ಕ್ಯಾಮರೂನ್ ಗ್ರೀನ್ ಮತ್ತು ವೆಂಕಟೇಶ್ ಅಯ್ಯರ್ ಮೇಲೆ ತಂಡಗಳು ಭಾರೀ ಆಸಕ್ತಿ ತೋರಿವೆ. ನಿರೀಕ್ಷೆಯಂತೆ ಕ್ಯಾಮರೂನ್ ಗ್ರೀನ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಹರಾಜಿನ ಹೈಲೈಟ್ ಆಗಿದ್ದಾರೆ.
ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು 25.20 ಕೋಟಿ ರೂ ದಾಖಲೆಯ ಮೊತ್ತಕ್ಕೆ ಖರೀದಿಸಿದೆ. ಇದರಿಂದಾಗಿ ಈ ಹರಾಜಿನಲ್ಲಿ ಗ್ರೀನ್ ಅತಿ ದುಬಾರಿ ಆಟಗಾರರಾಗಿದ್ದಾರೆ. ಮತ್ತೊಂದೆಡೆ, ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಮೂರನೇ ಸೆಟ್ನಲ್ಲಿ ವೇಗದ ಬೌಲರ್ಗಳು ಬಿಡ್ಡಿಂಗ್ಗೆ ಬಂದರು. ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅನ್ಸೋಲ್ಡ್ ಆಗಿದ್ದು, ಜೇಕಬ್ ಡಫಿ ಅವರನ್ನು ಆರ್ಸಿಬಿ 2 ಕೋಟಿ ರೂ ಮೂಲಬೆಲೆಗೆ ಖರೀದಿ ಮಾಡಿತು.
ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಸ್ಲಿಂಗಿ ಬೌಲರ್ ಮತೀಶ ಪಥಿರಣ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಭಾರೀ ಬಿಡ್ಡಿಂಗ್ ವಾರ್ ನಡೆಯಿತು. ಕೊನೆಗೆ ಅವರು 18 ಕೋಟಿ ರೂಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾದರು.
ಸ್ಪಿನ್ನರ್ ರವಿ ಬಿಷ್ಣೋಯ್ಗಾಗಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು ಅವರನ್ನು 7.20 ಕೋಟಿ ರೂಗೆ ಖರೀದಿ ಮಾಡಿತು.
ಹರಾಜಿನಲ್ಲಿ ಹಲವು ಪ್ರಮುಖ ಆಟಗಾರರು ಅನ್ಸೋಲ್ಡ್ ಆಗಿರುವುದು ಗಮನ ಸೆಳೆದಿದೆ. ಜಾನಿ ಬೇರಿಸ್ಟೋ, ರಚಿನ್ ರವೀಂದ್ರ, ಲಿಯಾಮ್ ಲಿವಿಂಗ್ಸ್ಟೋನ್, ಪೃಥ್ವಿ ಶಾ ಸೇರಿದಂತೆ ಹಲವು ಖ್ಯಾತ ಹೆಸರುಗಳಿಗೆ ಈ ಬಾರಿ ಖರೀದಿದಾರರು ಸಿಗಲಿಲ್ಲ. ಇತ್ತ, ಡೇವಿಡ್ ಮಿಲ್ಲರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂಗೆ ಖರೀದಿಸಿದರೆ, ಕ್ವಿಂಟನ್ ಡಿಕಾಕ್ 1 ಕೋಟಿ ರೂಗೆ ಮುಂಬೈ ಇಂಡಿಯನ್ಸ್ ಸೇರಿದ್ದಾರೆ.
ಒಟ್ಟಿನಲ್ಲಿ, ಐಪಿಎಲ್ 2026 ಮಿನಿ ಹರಾಜು ಆಲ್ರೌಂಡರ್ಗಳು ಮತ್ತು ವೇಗದ ಬೌಲರ್ಗಳ ಮೇಲಿನ ಬೇಡಿಕೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಮುಂದಿನ ಸೀಸನ್ಗೆ ತಂಡಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಂತಾಗಿದೆ.