ಹಿರಿಯ ನಟ ಸುರೇಶ್ ಹೆಬ್ಳೀಕರ್ ಇ-ಮೇಲ್ ಹ್ಯಾಕ್: 5 ಲಕ್ಷ ಹಣಕ್ಕೆ ಬೇಡಿಕೆ!

Online Fraud: ಪರಿಸರವಾದಿಯೂ ಆಗಿರುವ ಸುರೇಶ್ ಹೆಬ್ಳೀಕರ್ ಅವರ Rediff mail ಹ್ಯಾಕ್ ಮಾಡಿರುವ ಆನ್‍ಲೈನ್ ವಂಚಕರು ಅನೇಕರಿಗೆ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ.

ಧಾರವಾಡ: ಸ್ಯಾಂಡಲ್‍ವುಡ್‍ನ ಹಿರಿಯ ನಟ ಸುರೇಶ್ ಹೆಬ್ಳೀಕರ್ ಅವರಿಗೆ ಹ್ಯಾಕರ್​ಗಳ ಕಾಟ ಎದುರಾಗಿದೆ. ದುಷ್ಕರ್ಮಿಗಳು ಸುರೇಶ್ ಹೆಬ್ಳೀಕರ್ ಅವರ ಇ-ಮೇಲ್ ಹ್ಯಾಕ್ ಮಾಡಿದ್ದು, ಹಿರಿಯ ನಟನ ಹೆಸರಿನಲ್ಲಿ ಹಲವರಿಗೆ ಇ-ಮೇಲೆ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ  ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸುರೇಶ್ ಹೆಬ್ಳೀಕರ್ ಅವರು ತಮ್ಮ ಇ-ಮೇಲ್ ಹ್ಯಾಕ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರದ ಹೆಚ್ಚಾಗಿದ್ದು, ಅಲ್ಲಿನ ಜನರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದು ಹಣ ನೀಡಿ ಎಂದು ಸುರೇಶ್ ಹೆಬ್ಳೀಕರ್ ಹೆಸರಲ್ಲಿ ಅವರ ಗೆಳೆಯರಿಗೆ ಮೇಲ್ ಮಾಡಲಾಗಿದೆ.

ಪರಿಸರವಾದಿಯೂ ಆಗಿರುವ ಸುರೇಶ್ ಹೆಬ್ಳೀಕರ್ ಅವರ Rediff mail ಹ್ಯಾಕ್ ಮಾಡಿರುವ ಆನ್‍ಲೈನ್ ವಂಚಕರು ಅನೇಕರಿಗೆ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ವಿದೇಶಗಳಲ್ಲಿರೋ ಅನೇಕರಿಗೂ ಮೇಲ್ ರವಾನೆ ಮಾಡಿರುವ ದುಷ್ಕರ್ಮಿಗಳು ಸುಮಾರು 5 ಲಕ್ಷದವರೆಗೂ ಬೇಡಿಕೆ ಇಟ್ಟಿದ್ದಾರಂತೆ.

ಮಣಿಪುರ ಗಲಭೆ ಮುಂದಿಟ್ಟುಕೊಂಡು ಹ್ಯಾಕರ್ಸ್ ಡೋನೇಷನ್ ಕೇಳುತ್ತಿದ್ದಾರಂತೆ. ‘ಮಣಿಪುರದಲ್ಲಿ ನಾನು ಪರಿಹಾರ ಕಾರ್ಯ ಮಾಡಬೇಕಿರುವೆ, ಹೀಗಾಗಿ ನನಗೆ ಹಣ ಹಾಕಿ ಅಂತಾ ಹೆಬ್ಳೀಕರ್ ಹೆಸರಿನಲ್ಲಿ ಹ್ಯಾಕರ್ಸ್ ಕಥೆ ಕಟ್ಟಿ ಅವರ ಗೆಳೆಯರಿಂದ ಹಣ ಪಡೆದು ವಂಚಿಸಲು ಪ್ರಯತ್ನಿಸಿದ್ದಾರಂತೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಬ್ಳೀಕರ್, ‘ನಾನು ಯಾವುದೇ ರೀತಿಯ ಪರಿಹಾರ ಕಾರ್ಯಕ್ಕೆ ಹಣ ಕೇಳಿಲ್ಲ. ನನ್ನ ಇ-ಮೇಲ್ ಹ್ಯಾಕ್ ಮಾಡಿರುವ ಆನ್‍ಲೈನ್ ವಂಚಕರು ನನ್ನ ಗೆಳೆಯರ ಬಳಗಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ. ನನ್ನ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರೆ ನಿರ್ಲಕ್ಷಿಸಿ ಯಾರೂ ಹಣ ಹಾಕಬೇಡಿ ಎಂದು ನಟ ಮನವಿ ಮಾಡಿಕೊಂಡಿದ್ದಾರೆ.

2019ರಲ್ಲಿಯೂ ಸುರೇಶ್ ಹೆಬ್ಳೀಕರ್ ಅವರ ಫೇಸ್‍ಬುಕ್,  ಇ-ಮೇಲ್ ಹ್ಯಾಕ್ ಮಾಡಿದ್ದ ವಂಚಕರು ಅವರ ಕಾಂಟ್ಯಾಕ್ಟ್ ಲಿಸ್ಟ್‍ನಲ್ಲಿರುವ ಜನರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಲು ಯತ್ನಿಸಿದ್ದರು.

Source : https://zeenews.india.com/kannada/entertainment/hackers-hacks-sandalwood-senior-actor-suresh-heblikars-e-mail-and-try-to-make-online-fraud-167138

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *