ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಐಸಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ನಡೆದ ಝೋನಲ್ ಚೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮೂವರು ವಿಜೇತರಾಗಿ ಬೆಂಗಳೂರಿನಲ್ಲಿ ನಡೆಯಲಿರುವ ರಿಜಿನಲ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರ ವಿವರಗಳು ಹೀಗಿವೆ:
ಕ್ರಮ | ವಿದ್ಯಾರ್ಥಿ ಹೆಸರು | ತರಗತಿ | ಸ್ಪರ್ಧೆ | ಸ್ಥಾನ |
---|---|---|---|---|
01 | ಸಿಂಚನಾ ಎಸ್ | 7ನೇ ತರಗತಿ | ಚೆಸ್ | ಐದನೇ ಸ್ಥಾನ |
02 | ಅನಿರುದ್ ವಿ ಸಜ್ಜನ್ | 10ನೇ ತರಗತಿ | ಚೆಸ್ | ತೃತೀಯ ಸ್ಥಾನ |
03 | ಶೋಭಿತ್ ಹೆಚ್ | 10ನೇ ತರಗತಿ | ಚೆಸ್ | ನಾಲ್ಕನೇ ಸ್ಥಾನ |
ಈ ಯಶಸ್ಸು ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಸಕಾರಾತ್ಮಕ ವಾತಾವರಣದ ಫಲವಾಗಿದ್ದು, ಸಂಸ್ಥೆಗೆ ಇನ್ನಷ್ಟು ಹೆಮ್ಮೆ ತಂದಿದೆ.
ಅಭಿನಂದನೆಗಳು:
ಈ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ. ವಿಜಯ್ ಕುಮಾರ್, ಐಸಿಎಸ್‌ಇ ವಿಭಾಗದ ಪ್ರಾಚಾರ್ಯ ಬಸವರಾಜಯ್ಯ ಪಿ., ಮುಖ್ಯ ಶಿಕ್ಷಕರು ತಿಪ್ಪೇಸ್ವಾಮಿ ಎನ್.ಜಿ, ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ್, ಶ್ರೀಮತಿ ಸುನಿತಾ ಪಿ.ಸಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಗಳನ್ನು ಶ್ಲಾಘಿಸಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.