ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಚಿತ್ರದುರ್ಗ : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಚಿತ್ರದುರ್ಗ ಇಲ್ಲಿ ದಿನಾಂಕ 05.06.2025ರಂದು “ವಿಶ್ವ ಪರಿಸರ ದಿನಾಚರಣೆಯನ್ನು” ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಚಿತ್ರದುರ್ಗ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಎಸ್ ಎಂ ಪೃಥ್ವೀ಼ಶ ಮುಖ್ಯೋಪಾಧ್ಯಾಯರಾದ ಎನ್ ಜಿ ತಿಪ್ಪೇಸ್ವಾಮಿ, ಹಾಗೂ ಪ್ರಾಂಶುಪಾಲರಾದ ಬಸವರಾಜಯ್ಯ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ನೆರವೇರಿಸಿದರು.

ಪರಿಸರ ಸಂರಕ್ಷಣೆಯ ಮಹತ್ವದ ಅರಿವನ್ನು ಮೂಡಿಸಲು ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಪೃಥ್ವೀ಼ಶ ಎಸ್.ಎಂ. ಅವರು ಮಾತನಾಡುತ್ತಾ 2025ರ ವಿಶ್ವ ಪರಿಸರ ದಿನದ ವಿಷಯದ ಕುರಿತು ಇಂದಿನ ಈ ಆಚರಣೆ ಕೇವಲ ಈ ದಿನಕ್ಕಷ್ಟೇ ಮೀಸಲಾಗದೇ ಪ್ರತಿ ದಿನ ಪರಿಸರದ ಬಗ್ಗೆ ಕಾಳಜಿಯನ್ನು ತೋರಿಸಬೇಕು.

ಮುಖ್ಯವಾಗಿ ಪ್ಲಾಸ್ಟಿಕ್ ಚೀಲ ಬಳಕೆಯನ್ನು ಕಡಿಮೆಗೊಳಿಸಿ ಸಾಧ್ಯವಾದಷ್ಟು ಮನೆಯಲ್ಲಿ ಸಿದ್ಧಪಡಿಸಿದ ಬಟ್ಟೆಯ ಕೈ ಚೀಲಗಳನ್ನು ಬಳಸಿರಿ ಎಂದರು. ಜೊತೆಗೆ ಮಕ್ಕಳೇ ಖುದ್ದಾಗಿ ನಿಮ್ಮ ಮನೆಗಳ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣಕಸವನ್ನಾಗಿ ವಿಂಗಡಿಸಿ, ವಿಲೇವಾರಿ ಮಾಡಲು ನಿಮ್ಮ ಪೋಷಕರಿಗೆ ನೆರವಾಗಬೇಕು ಎಂದು ಪ್ರೇರಣದಾಯಕ ನುಡಿಗಳನ್ನಾಡಿದರು.

10ನೇ ತಗರತಿ ವಿದ್ಯಾರ್ಥಿ ಶಿಫಾ ಸ್ವಾಗತಿಸಿದರು. 10ನೇ ತಗರತಿಯ ಆಯೇಷಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 9ನೆ ತರಗತಿ ಲೇಖನ ಎಲ್ಲರಿಗೂ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ/ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳ, ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *