ಧರ್ಮಸ್ಥಳ ಅಪಪ್ರಚಾರದ ಹಿಂದೆ ವಿದೇಶಿ ಹಣ: ವಿಹಿಂಪಾ ಆರೋಪ

ಚಿತ್ರದುರ್ಗ ಆ. 28

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಧರ್ಮಸ್ಥಳದ ವಿಚಾರದಲ್ಲಿ ನಡೆದಂತಹ ಅಪಪ್ರಚಾರದ ಹಿಂದೆ ದೊಡ್ಡ ಮಟ್ಟದ ಷಡ್ಯಂತರ ನಡೆದಿದೆ.ಇದಕ್ಕೆ ವಿದೇಶಗಳಿಂದ ಹಾಗೂ ಕ್ರಿಶ್ಚಿಯನ್ಮಿಷನರಿ ಗಳಿಂದ ಹಣದ ನೆರವು ಬಂದಿದೆ.ಇದರಿಂದ ಹಿಂದೂಗಳ ಧಾರ್ಮಿಕ  ಹಾಗೂ ಭಾವನೆ ಕ್ಷೇತ್ರವಾದ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಇದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಖಂಡಿಸುತ್ತದೆ.ಈ ಪ್ರಕರಣವನ್ನು ಎನ್‍ಐಎ ಹಾಗೂ ಇಡಿ ತನಿಖೆಗೆ ವಯಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‍ನ ದಕ್ಷಿಣ ಪ್ರಾಂತ್ಯದ ಸಂಚಾಲಕರಾದ ಪ್ರಭಂಜನ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಹಿಂದೂ ಮಹಾ ಗಣಪತಿಯ ಮಹಾ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಕ್ಷೇತ್ರ ಹಲವಾರು ವರ್ಷಗಳಿಂದ ಹಿಂದೂಗಳ ಧಾರ್ಮಿಕ ಕೇಂದ್ರವಾಗಿದೆ.. ಇಲ್ಲಿಗೆ ದೇಶ/ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ… ಆದರೆ ಭಕ್ತಿ ಭಾವನೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಷಡ್ಯಂತರ ನಡೆಯುತ್ತಿದೆ. ಧರ್ಮಸ್ಥಳ ಕ್ಷೇತ್ರವು ರಾಜ್ಯದಲ್ಲಿ ಜನೋಪಕಾರಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನತೆಗೆ ಹತ್ತಿರವಾಗುತ್ತಿದೆ ಇದನ್ನು ಸಹಿಸದ ಕೆಲವು ಸಂಘಟನೆಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳು ಇದಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲು ಮುಂದಾಗಿವೆ ಇದನ್ನು ಹಿಂದೂಗಳಾದ ನಾವು ಸಹಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ಈ ಪ್ರಕರಣದಲ್ಲಿ ಪಿಎಫ್‍ಐ ಸಂಘಟನೆಯ ಪ್ರತಿರೂಪವಾಗಿರುವ ಎಸ್‍ಡಿಪಿಐ ಸಂಘಟನೆಯೂ ಕುಮ್ಮಕ್ಕು ನೀಡುತ್ತಿದೆ. ಅಲ್ಲಿ ಏನು ಆಗದಿದ್ದರೂ ಸಹ ಏನೋ ಆಗಿದೆ ಎನ್ನುವ ರೀತಿಯಲ್ಲಿ  ವಾತಾವರಣವನ್ನು ನಿರ್ಮಿಸಿ  ಯಾರೋ ಅನಾಮಿಕ ವ್ಯಕ್ತಿಯಿಂದ ದೂರನ್ನು ಕೊಡಿಸಿವೆ. ಇದನ್ನು ಪರಿಗಣಿಸಿದ ಸರ್ಕಾರ ಎಸ್‍ಐಟಿಗೆ ನೀಡಿ ತನಿಖೆ ನಡೆಸುತ್ತಿದ್ದರು ಸಹ ಅಲ್ಲಿ ಏನೂ ಸಹ ಸಿಕ್ಕಿಲ್ಲ ಇದರಿಂದಲೇ ತಿಳಿಯುತ್ತೆ ಇದೊಂದು ಷಡ್ಯಂತರ  ಎಂದು ಗೊತ್ತಾಗುತ್ತದೆ. ಈ ಪ್ರಕರಣದ ಹಿಂದೆ ಮಹೇಶ್ ಶೆಟ್ಟಿ ತಿಮ್ಮರೋಡಿರವರ ಹೆಸರು ಸಹ ಇದ್ದು ಧರ್ಮಸ್ಥಳ ಅಪಪ್ರಚಾರ ನಡೆದ ಘಟನೆಯಲ್ಲಿ ಪಾಲುದಾರನೆಂದು ಕಾಣುತ್ತಿದೆ.. ಇವರ ಬಗ್ಗೆನೂ ಸಹ ತನಿಖೆ ನಡೆಸಿ ಕ್ರಮ ವಹಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ 2025ರ ಹಿಂದೂ ಮಾಹಾ ಗಣಪತಿಯ ಸಮಿತಿಯ ಅಧ್ಯಕ್ಷರಾದ ಶರಣ್ ಕುಮಾರ್, ವಿಶ್ವ ಹಿಂದು ಪರಿಷತ್‍ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಕಾರ್ಯದರ್ಶಿ ಕೇಶವ ಭಾಗವಹಿಸಿದ್ದರು. 

Views: 11

Leave a Reply

Your email address will not be published. Required fields are marked *