ಚಂದ್ರಬಾಬು ನಾಯ್ಡು ಸಿಎಂ ಆಗುತ್ತಲೇ ಈ ಮಹಿಳೆ ಸವಾಲು ಗೆದ್ದಿದ್ದಾರಂತೆ. ಇತ್ತ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕರಿಸಿದ್ರೆ, ಅತ್ತ ಆ ಮಹಿಳೆ ಸವಾಲು ಗೆದ್ದ ಖುಷಿಯಲ್ಲಿ ತನ್ನ ತವರಿಗೆ ಹೊರಟಿದ್ದಾಳಂತೆ!
ಆಂಧ್ರ ಪ್ರದೇಶ: ಚಂದ್ರಬಾಬು ನಾಯ್ಡು (Chandrababu Naidu) ಮತ್ತೊಮ್ಮೆ ಆಂಧ್ರ ಸಿಎಂ (Andhra Pradesh CM) ಆಗಿದ್ದಾರೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ (Assembly Election) ಮತ್ತು ಲೋಕಸಭೆ ಚುನಾವಣೆಯಲ್ಲಿ (Lok Sabha Election) ಭರ್ಜರಿ ಸ್ಥಾನಗಳನ್ನು ಪಡೆಯೋ ಮೂಲಕ ತೆಲುಗು ದೇಶಂ ಪಾರ್ಟಿ (TDP) ಮತ್ತೊಮ್ಮೆ ಫಿನಿಕ್ಸ್‌ನಂತೆ ಎದ್ದು ಬಂದಿದೆ. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಗೆ (Jagan Mohan Reddy) ಸವಾಲು ಹಾಕುತ್ತಲೇ ಗೆದ್ದು ಬಂದ ಚಂದ್ರಬಾಬು ನಾಯ್ಡು, ಸಿಎಂ ಆಗಿ ಅಧಿಕಾರ ಶುರು ಮಾಡಿದ್ದಾರೆ. ಇದಕ್ಕೆ ಟಿಡಿಪಿ ಕಾರ್ಯಕರ್ತರು, ಚಂದ್ರಬಾಬು ನಾಯ್ಡು ಕುಟುಂಬಸ್ಥರು, ಅಭಿಮಾನಿಗಳು, ಆಂಧ್ರ ಮತದಾರರು ಸಂಭ್ರಮಿಸಿದ್ದಾರೆ. ಇದರ ಜೊತೆ ವಿಶೇಷವಾಗಿ ಮಹಿಳೆಯೊಬ್ಬರು ಸಂಭ್ರಮ ಪಟ್ಟಿದ್ದಾರೆ. ಚಂದ್ರಬಾಬು ನಾಯ್ಡು ಸಿಎಂ ಆಗುತ್ತಲೇ ಈ ಮಹಿಳೆ ಸವಾಲು ಗೆದ್ದಿದ್ದಾರಂತೆ. ಇತ್ತ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕರಿಸಿದ್ರೆ, ಅತ್ತ ಆ ಮಹಿಳೆ ಸವಾಲು ಗೆದ್ದ ಖುಷಿಯಲ್ಲಿ ತನ್ನ ತವರಿಗೆ ಹೊರಟಿದ್ದಾಳಂತೆ!
ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಕ್ಕೆ ಸವಾಲು ಗೆದ್ದ ಮಹಿಳೆ
ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ಕೇಶವಪುರಂ ಗ್ರಾಮದ ಮಹಿಳೆ ಕಟ್ಟಾ ವಿಜಯಲಕ್ಷ್ಮೀ ಎಂಬಾಕೆ ಈಗ ಭಾರೀ ಸಂಭ್ರಮದಲ್ಲಿದ್ದಾಳೆ. ಇತ್ತ ಆಂಧ್ರ ಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅತ್ತ ವಿಜಯಲಕ್ಷ್ಮೀ ಸವಾಲು ಗೆದ್ದಿದ್ದಾಳಂತೆ. ಅಲ್ಲದೇ ಇದೇ ಖುಷಿಯಲ್ಲಿ ತನ್ನ ತವರಿಗೆ ಹೊರಟಿದ್ದಾಳಂತೆ!
ವಿಜಯಲಕ್ಷ್ಮೀ ಸವಾಲಿನ ಹಿಂದಿದೆ ಕಥೆ
ಅಸಲಿಗೆ ವಿಜಯಲಕ್ಷ್ಮೀ ಹಿಂದೆಯೂ ಒಂದು ಕಥೆ ಇದೆಯಂತೆ. ಹೇಳಿ ಕೇಳಿ ವಿಜಯಲಕ್ಷ್ಮೀ ತವರಿನವರು ಚಂದ್ರಬಾಬು ನಾಯ್ಡು ಅಭಿಮಾನಿಗಳಂತೆ. 2019ರ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಟಿಡಿಪಿ ಪಕ್ಷ ಅಧಿಕಾರಕ್ಕೆ ಬಂದು, ಚಂದ್ರಬಾಬು ನಾಯ್ಡು ಅವರೇ ಮತ್ತೆ ಸಿಎಂ ಆಗ್ತಾರೆ ಅಂತ ವಿಜಯಲಕ್ಷ್ಮೀ ತವರು ಮನೆಯವರು ಆಕೆ ಗಂಡನ ಮನೆಯವ್ರಿಗೆ ಸವಾಲು ಹಾಕಿದ್ರಂತೆ.
2019ರಲ್ಲಿ ಗೆದ್ದಿದ್ದ ಜಗನ್, ಸೋತಿದ್ದ ನಾಯ್ಡು
ಅತ್ತ ವಿಜಯಲಕ್ಷ್ಮೀ ಗಂಡನ ಮನೆಯವರು ಜಗನ್ ಮೋಹನ್ ರೆಡ್ಡಿ ಅಭಿಮಾನಿಗಳಾಗಿದ್ದು, 2019ರಲ್ಲಿ ಜಗನ್ ಮೋಹನ್ ಗೆದ್ದು, ಆಂಧ್ರ ಸಿಎಂ ಆಗ್ತಾರೆ ಅಂದಿದ್ದರಂತೆ. ಅದೇ ರೀತಿ 2019ರಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದು, ಜಗನ್ ಮೋಹನ್ ರೆಡ್ಡಿ ಗೆದ್ದು ಆಂಧ್ರ ಸಿಎಂ ಆಗಿದ್ದರು.
5 ವರ್ಷಗಳಿಂದ ತವರು ಮನೆಗೆ ಹೋಗದ ವಿಜಯಲಕ್ಷ್ಮಿ
2019ರ ಚುನಾವಣೆಯಲ್ಲಿ ಜಗನ್ ಎಪಿ ಸಿಎಂ ಆದ ಬಳಿಕ ವಿಜಯಲಕ್ಷ್ಮಿ ಸವಾಲಿನಂತೆಯೇ ತವರು ಮನೆ ತೊರೆದಿದ್ದರು. ಚಂದ್ರಬಾಬು ಸಿಎಂ ಆದ ನಂತರವೇ ಊರು ಪ್ರವೇಶಿಸುವುದಾಗಿ ಶಪಥ ಮಾಡಿದ್ದರಂತೆ, ಅಲ್ಲಿಂದ 5 ವರ್ಷ ತಮ್ಮ ತವರೂರಿಗೆ, ತವರು ಮನೆಗೆ ವಿಜಯಲಕ್ಷ್ಮೀ ಹೋಗಿರಲಿಲ್ವಂತೆ.
ತವರಿಗೆ ಬಂದ ವಿಜಯಲಕ್ಷ್ಮೀಗೆ ಅದ್ಧೂರಿ ಸ್ವಾಗತ
ಇತ್ತೀಚೆಗಷ್ಟೇ ಎಪಿ ಸಿಎಂ ಆಗಿ ಚಂದ್ರಬಾಬು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಜಯಲಕ್ಷ್ಮೀ ಮತ್ತೆ ತವರಿಗೆ ಮರಳಿದ್ದಾಳೆ. ಐದು ವರ್ಷಗಳ ನಂತರ ತಮ್ಮ ಗ್ರಾಮಕ್ಕೆ ಬಂದ ವಿಜಯಲಕ್ಷ್ಮಿ ಅವರನ್ನು ಕುಟುಂಬಸ್ಥರು ಮಾತ್ರವಲ್ಲದೆ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಚಾಲೆಂಜ್ ಎಂದರೆ ಹೀಗಿರಬೇಕು ಎಂದು ಎಲ್ಲರೂ ಹೊಗಳಿದ್ರಂತೆ.
ಎನ್‌ಟಿಆರ್ ಮೂರ್ತಿಗೆ ಪೂಜಿಸಿ, ತವರಿಗೆ ಬಂದ ಮಗಳು
ಇನ್ನು ವಿಜಯಲಕ್ಷ್ಮಿ ಅವರು ಗ್ರಾಮದಲ್ಲಿನ ಎನ್‌ಟಿಆರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ತಮ್ಮ ಮನೆಗೆ ಪ್ರವೇಶಿಸಿದರು. ಆದರೆ ವಿಜಯಲಕ್ಷ್ಮಿ ಅವರ ಹಠದ ಮುಂದೆ 5 ವರ್ಷ ಭಾವುಕತೆ ಕೈಕೊಟ್ಟಿತು. ಚಂದ್ರಬಾಬು ಸಿಎಂ ಆಗದೇ ಇದ್ದಿದ್ದರೆ ಈಗಲಾದರೂ ಹೋಗುತ್ತಿರಲಿಲ್ಲ. ಅದೃಷ್ಟವಶಾತ್ ಎಪಿಯ ಜನರು ಮೈತ್ರಿ ಪಕ್ಷವನ್ನು ಗೆಲ್ಲಿಸಿ, ಪರೋಕ್ಷವಾಗಿ ಆಕೆಯ ತವರಿಗೆ ಮತ್ತೆ ಆಕೆ ಹೋಗುವಂತೆ ಮಾಡಿದ್ದಾರೆ.