ಕ್ರೇಜಿಸ್ಟಾರ್ ಸುಪುತ್ರನ ಎರಡನೇ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್..’ಮುಧೋಳ್’ ಜೊತೆ ಬಂದ ವಿಕ್ರಮ್ ರವಿಚಂದ್ರನ್..

Entertainment: ಸ್ಯಾಂಡಲ್ ವುಡ್ ಕನಸುಗಾರ ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೇ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ನಗರದ ನರ್ತಕಿ ಚಿತ್ರಮಂದಿರದಲ್ಲಿಅಭಿಮಾನಿಗಳ ಸಮುಖದಲ್ಲಿ ವಿಕ್ರಮ್ ಹಾಗೂ ಸಹ ಬಳಗದವರು ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. 

ಬೆಂಗಳೂರು: ಸ್ಯಾಂಡಲ್ ವುಡ್ ಕನಸುಗಾರ ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೇ ಚಿತ್ರಕ್ಕೆ ಮಧೋಳ್ ಎಂಬ ಟೈಟಲ್ ಇಡಲಾಗಿದೆ. ನಗರದ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮುಖದಲ್ಲಿ ವಿಕ್ರಮ್ ಹಾಗೂ ಸಹ ಬಳಗದವರು ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. 

ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ. 

ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್  ಆದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದು,ಇದೀಗ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ಸದ್ಯ ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡುವ ಯೋಜನೆಯಲ್ಲಿದ್ದೇವೆ. ವಿಕೆಆರ್ ಅಂದರೆ ವೀರಸ್ವಾಮಿ ರವಿಚಂದ್ರನ್ ಎಂದಿದ್ದಾರೆ. 

ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಕಾಡಿದೆವು. ಸಿನಿಮಾಕ್ಕೆ ತಕ್ಕ ಹಾಗೆ  ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. 

ಸಂಭಾಷಣೆಗಾರ ಮಾಸ್ತಿ ಮಾತನಾಡಿ,ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಎಷ್ಟೋ ಹಿರೋಯಿನ್ಸ್ ಗಳು ರವಿಚಂದ್ರನ್  ಜೊತೆ ಕೆಲಸ ಮಾಡುವ ಕನಸು ಕಂಡಿದ್ದಾರೆ. ಇದರ ಜೊತೆಯಲ್ಲಿ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಿನಿಮಾಕ್ಕಾಗಿ , ಯುವರಾಜ್ ಚಂದ್ರನ್ ಸಂಗೀತ ನಿರ್ದೇಶನ,ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್,ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

Source: https://zeenews.india.com/kannada/entertainment/crazystars-son-vikram-ravichandrans-second-film-mudhol-131363

Leave a Reply

Your email address will not be published. Required fields are marked *