ಸಮರ್ಥ ಭಾರತ ನಿರ್ಮಾಣ ಗ್ರಾಮೀಣ ಯುವ ಜನರಿಂದ ಸಾಧ್ಯ: ಗ್ರಾ.ಪಂ.ಅಧ್ಯಕ್ಷ ಮಲ್ಲೇಶ್ ಡಿ. ಅಭಿಪ್ರಾಯ.

76ನೇ ಗಣರಾಜ್ಯೋತ್ಸವ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಜೆ ಎನ್ ಕೋಟೆ ಆಯುಷ್ ಚಿಕಿತ್ಸಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆ ಎನ್ ಕೋಟೆ/ಚಿತ್ರದುರ್ಗ: ಜ.27: ನಮ್ಮ ಗ್ರಾಮಗಳಲ್ಲಿ ಸ್ವಚ್ಛತೆ, ಆರೋಗ್ಯ ಯುವಕರಿಗೆ ಹುಟ್ಟಿದ ಗ್ರಾಮಗಳಲ್ಲೇ ಉದ್ಯೋಗ ಸಿಗುವಂತಾದಾಗ ” ಸಮರ್ಥ ಸಶಕ್ತ ಭಾರತ” ಎಂಬ ಈ ವರ್ಷದ ಗಣರಾಜ್ಯೋತ್ಸವದ ಉದ್ದೇಶವು ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಬಲಗೊಳಿಸುವುದಾಗಿದೆ ಸಮರ್ಥ ಸದೃಢ ಭಾರತ ನಿರ್ಮಾಣ ಗ್ರಾಮೀಣ ಯುವ ಜನರಿಂದ ಸಾಧ್ಯ” ಎಂದು ಜೆ ಎನ್ ಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲೇಶ ಡಿ. ಅಭಿಪ್ರಾಯ ಪಟ್ಟಿದ್ದಾರೆ.
76ನೇ ಗಣರಾಜ್ಯೋತ್ಸವ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಜೆ ಎನ್ ಕೋಟೆ ಆಯುಷ್ ಚಿಕಿತ್ಸಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಆಯುಷ್ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ವಿಜಯಲಕ್ಷ್ಮಿ ಪಿ. ಮಾತನಾಡಿ ಸಮರ್ಥ ಸಶಕ್ತ ಭಾರತವನ್ನು ನಿರ್ಮಿಸಲು ನಾವು ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಇದಕ್ಕಾಗಿ ಆಯುಷ್ ಇಲಾಖೆಯು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಜೊತೆಗೆ ಉಚಿತ ಯೋಗ ತರಬೇತಿ ಸೌಲಭ್ಯ ಒದಗಿಸುತ್ತಿದೆ ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಂಡು ಸಮರ್ಥ, ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ” ಎಂದು ಹೇಳಿದರು.

ಆಯುಷ್ ಇಲಾಖೆಯ ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯ ಪರೀಕ್ಷಕರಾದ ಅನ್ನಪೂರ್ಣ ,ಎನ್. ಗ್ರಾಮ ಪಂ.ಸದಸ್ಯರಾದ ನೇತ್ರಾವತಿ, ಈರಮ್ಮ , ಶಿವಮೂರ್ತಿ, ಆರೋಗ್ಯ ಕೇಂದ್ರದ ಸಿಬ್ಬಂದಿ ಶಾರದಮ್ಮ, ರಘು, ಗ್ರಾಮದ ಮುಖಮಡರಾದ ಪ್ರಸನ್ನಕುಮಾರ್, ಅರುಣ್ ಕುಮಾರ್, ಪಾಲಣ್ಣ, ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *