ಮಳೆಯಿಂದ ಸಂಕಷ್ಟಕ್ಕೀಡಾದ ಓಬಣ್ಣನಹಳ್ಳಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳ ಭೇಟಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ.21 : ತಾಲ್ಲೂಕಿನ ಓಬಣ್ಣನ ಹಳ್ಳಿಯಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಅಲ್ಲಿನ ಮನೆಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದವು, ಇದರಿಂದ ಮನೆಯಲ್ಲಿ ನಿಲ್ಲಲು ಜಾಗ ವಿಲ್ಲದೆ ಜನತೆ ಪರದಾಡಿದರು ಮನೆಯಲ್ಲಿ ಇದ್ದ ಸಾಮಾನುಗಳು ಸಹಾ ನೀರಿನಲ್ಲಿ ಹೋಗಿದೆ ಇಷ್ಠಾದರೂ ಸಹಾ ಸ್ಥಳಕ್ಕೆ ಯಾವ ಒಬ್ಬ ಚುನಾಯಿತ ಪ್ರತಿನಿಧಿ ಭೇಟಿ ನೀಡದಿರುವುದಕ್ಕೆ ಅಲ್ಲಿನ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ತಾಲೂಕು. ಓಬಣ್ಣನಹಳ್ಳಿ ಸುತ್ತಾ-ಮುತ್ತಲೂ ಸಹಾ ಗುಡ್ಡದಿಂದ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಇದರಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ, ಈ ಮಳೆಯಿಂದಾಗಿ ಗ್ರಾಮದಲ್ಲಿನ ಮನೆಗಳು ಹಾನಿಯಾಗಿದ್ದು ಹಲವಾರು ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ, ಮಳೆಯ ದಿನದಂದು ಮನೆಯವರು ಪೂರ್ಣವಾಗಿ ನೀರಿನಿಂದ ಜಾಗರಣೆಯನ್ನು ಮಾಡಿದ್ದಾರೆ. ಮನೆಯಲ್ಲಿ ಯಾವ ವಸ್ತುವು ಸಃಆ ಉಳಿದಿಲ್ಲ ಎಲ್ಲವು ಸಹಾ ವರುಣನ ಪಾಲಾಗಿದೆ. ನಿಲ್ಲಲು ನೆಲೆ ಇಲ್ಲ, ಉಡಲು ವಸ್ತ್ರ, ಇಲ್ಲ ತಿನ್ನಲು ಆಹಾರ ಇಲ್ಲದಾಗಿದೆ ನಮ್ಮ ಬಗ್ಗೆ ಯಾರು ಸಹಾ ನೋಡುತ್ತಿಲ್ಲ, ಪ್ರಕೃತಿಯ ವಿಕೋಪಕ್ಕೆ ಬಲಿಯಾದ ನಮ್ಮ ಬದುಕು ಆತಂತ್ರವಾಗಿದೆ ಎಂದು ಗೋಳಾಡಿದರು.

ಗ್ರಾಮದಿಂದ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬಂದ ಗ್ರಾಮಸ್ಥರು ನಮ್ಮನ್ನು ಯಾರು ಸಹಾ ನೋಡುತ್ತಿಲ್ಲ ನಮ್ಮ ಕಷ್ಠವನ್ನು ಕೇಳುವವರಿಲ್ಲ, ನಮ್ಮಿಂದ ಚುನಾಯಿತರಾದ ಜನಪ್ರತಿನಿಧಿಗಳು ಸಹಾ ನಮ್ಮ ಕಡೆ ತಿರುಗಿ ನೋಡಿಲ್ಲ, ಘಟನೆ ನಡೆದು ಹಲವಾರು ದಿನವಾದರೂ ಸಹಾ ಅಂದು ಯಾವ ಸ್ಥಿತಿಯಲ್ಲಿ ಇತ್ತು ಇಂದು ಸಹಾ ಅದೇ ಸ್ಥಿತಿಯಲ್ಲಿ ಇದೆ, ಇರಲು ಮನೆ ಇಲ್ಲ ನಮ್ಮಲ್ಲಿ ಇದ್ದ ಬಟ್ಟೆಗಳು ನೀರು ಪಾಲಾಗಿವೆ, ಮನೆಯಲ್ಲಿ ಮಕ್ಕಳ ಪುಸ್ತಕ ಸಹಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಗ್ರಾಮದ ಶಿಕ್ಷಕರು ನಮಗೆ ಬಟ್ಟೆ, ಮಕ್ಕಳಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ನೆರವಿನ ಹಸ್ತವನ್ನು ನೀಡಿದ್ದಾರೆ ಸೌಭಾಗ್ಯ ಬಸವರಾಜನ್‌ರವರು ಹಣದ ಸಹಾಯವನ್ನು ಮಾಡಿದ್ದರೆ.ಇದರೊಂದಿಗೆ ಭೋವಿ ಗುರುಪೀಠದವರು ಅಹಾರದ ಕಿಟ್ ನೀಡಿದ್ದಾರೆ ಎಂದರು.

ಇದಾದ ಮೇಲೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ನೋವನ್ನು ತೊಡಿಕೊಂಡು ನಮ್ಮನ್ನು ಯಾರು ಕೇಳುತ್ತಿಲ್ಲ, ನಮ್ಮ ನೋವನ್ನು ಯಾರ ಬಳಿ ಹೇಳಬೇಕು, ನಮಗೆ ಏನು ಇಲ್ಲವಾಗಿದೆ ವರುಣನಿಂದ ಎಲ್ಲವನ್ನು ಕಳೆದುಕೊಂಡಿದ್ದೇವೆ ರಸ್ತೆ ಸರಿಯಿಲ್ಲ, ಮನೆಯಲ್ಲಿ ಮಣ್ಣು ಬಂದು ಕೊತಿದೆ. ನಮಗೆ ಮತ್ತು ಮಕ್ಕಳಿಗೆ ಬಟ್ಟೆ ಇಲ್ಲದಾಗಿದೆ ವರುಣನಿಂದಾಗಿ ನಮ್ಮ ಬದುಕು ಅತಂತ್ರವಾಗಿದೆ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ತಹಶೀಲ್ದಾರ್ ರವರಿಂದು ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ತಿಳಿದುಕೊಂಡು ಅಲ್ಲಿಗೆ ಜೆಸಿಬಿಯನ್ನು ಕಳುಹಿಸಿ ರಸ್ತೆ, ಚರಂಡಿಯನ್ನು ಸರಿಪಡಿಸಿ ಮನೆಯಲ್ಲಿ ಇರುವ ಮಣ್ಣನ್ನು ಸಹಾ ತೆಗೆಯವ ಕಾರ್ಯವನ್ನು ಮಾಡಿ ತೊಂದರೆಗೆ ಒಳಗಾದವರಿಗೆ ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿ ಎಂದು ಸೂಚನೆಯನ್ನು ನೀಡಿ ನಾನು ಸಹಾ ಸ್ಥಳಕ್ಕೆ ಬಂದು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *