Productivity During Bengaluru traffic: ಟ್ರಾಫಿಕ್ನಲ್ಲಿ ಮಹಿಳೆ ಬಟಾಣಿಕಾಳು ಸುಲಿಯುತ್ತಿರುವ ದೃಶ್ಯವಿಗ ಸಖತ್ ಸೌಂಡ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನಕ್ಕೆ ಟ್ರಾಫಿಕ್‍ನದ್ದೇ ದೊಡ್ಡ ತಲೆನೋವು. ಪ್ರತಿದಿನ ಆಫೀಸ್ ಮತ್ತು ಕೆಲಸಕ್ಕೆ ಹೋಗುವ ಜನರು ಟ್ರಾಫಿಕ್ ಸಮಸ್ಯೆಯಿಂದ ಸುಸ್ತಾಗುತ್ತಾರೆ. ಆದರೆ ಈ ಟ್ರಾಫಿಕ್ ಮಧ್ಯೆಯೇ ನಡೆಯುವ ಕೆಲವು ಘಟನೆಗಳು ಸಖತ್ ಮಜಾ ಕೊಡುತ್ತವೆ. ಅದೇ ರೀತಿಯ ಘಟನೆಯೊಂದು ನಡೆದಿದೆ.
ಹೌದು, ಬೆಂಗಳೂರಿನ ಟ್ರಾಫಿಕ್ ನಡುವೆ ಮಹಿಳೆಯೊಬ್ಬರು ಕಾರಿನಲ್ಲಿಯೇ ಕುಳಿತು ಬಟಾಣಿ ಸುಲಿದಿದ್ದಾರೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟ್ರಾಫಿಕ್ ಸಮಸ್ಯೆಯ ನಡುವೆಯೇ ಮಹಿಳೆ ತಮ್ಮಸಮಯವನ್ನು ಸದ್ಬಳಕೆ ಮಾಡಿಕೊಂಡಿರುವುದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ.
ಟ್ರಾಫಿಕ್‌ನಲ್ಲಿ ಮಹಿಳೆ ಬಟಾಣಿಕಾಳು ಸುಲಿಯುತ್ತಿರುವ ದೃಶ್ಯವಿಗ ಸಖತ್ ಸೌಂಡ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ. ಪ್ರಿಯಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಟ್ರಾಫಿಕ್‌ನಲ್ಲಿ ಬಟಾಣಿಕಾಳು ಸುಲಿಯುತ್ತಿರುವ ಮಹಿಳೆಯ ಫೋಟೊವನ್ನು ಹಂಚಿಕೊಳ್ಲಲಾಗಿದೆ. ‘ಟ್ರಾಫಿಕ್ ದಟ್ಟಣೆಯ ವೇಳೆಯನ್ನು ಹೀಗೆ ಸದುಪಯೋಗ ಮಾಡಿಕೊಳ್ಳಿ’ ಎಂದು ಈ ಫೋಟೋಗೆ ಕ್ಯಾಪ್ಶನ್ ನೀಡಲಾಗಿದೆ.
ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, 1.2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 200ಕ್ಕೂ ಹೆಚ್ಚು ಮಂದಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಹೊಂದುವ ಬಯಸುತ್ತಾರೆ, ಆದರೆ ಅದಕ್ಕೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಟ್ರಾಫಿಕ್‍ನಲ್ಲಿ ಸಿಲುಕಿದಾಗ ಹೇಗೆ productive ಆಗಿರಬೇಕು ಅನ್ನೋದನ್ನು ಈ ಫೋಟೋ ಸೂಚಿಸುತ್ತದೆ ಎಂದು ಹೇಳಿದ್ದಾರೆ.