Viral Photo: ಎಲ್ಲೆಲ್ಲೂ ಬಿಸಿ ಆದ್ರೆ, ಈ ಮನೆಯಲ್ಲಿ ತಂಪು ತಂಪು! 14 ಲಕ್ಷದಲ್ಲಿ ಕೂಲ್ ಹೋಂ ನಿರ್ಮಿಸಿದ ಯುವ ಇಂಜಿನಿಯರ್

ಬಿರು ಬೇಸಿಗೆಯಲ್ಲಿ ಜನರು ತಂಪಿನ ತಾಣಗಳನ್ನು ಅರಸಿ ಹೋಗುತ್ತಿದ್ದಾರೆ. ತಂಪಿನ ವಾತಾವರಣವಿರುವ ಪ್ರದೇಶಗಳಲ್ಲಿ ಪ್ರವಾಸಿಗರ (Tourist) ಸಂಖ್ಯೆ ಅಧಿಕವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಾವು ಎಷ್ಟೇ ಪ್ರಯಾಣಗೈದರೂ ಕೊನೆಗೆ ನಮ್ಮ ಮನೆಗೆ ಬರಲೇಬೇಕು. ಮನೆ ಕೂಡ ಬೇಸಿಗೆಯ ಬಿಸಿಲಿನಿಂದ ಬಿಸಿ ಬಿಸಿಯಾದರೆ ಅಲ್ಲಿ ವಾಸವಾಗಿರುವವರು ಕೂಡ ಆ ಬಿಸಿಯನ್ನು ಅನುಭವಿಸುವಂತಾಗುತ್ತದೆ. ಆ ಮನೆಯನ್ನೇ ತಂಪಿನ ತಾಣವಾಗಿಸಿದರೆ ಹೇಗಿರುತ್ತದೆ ಹೇಳಿ… ಇದೇ ಕೆಲಸವನ್ನು ಕಣ್ಣೂರಿನ ಸನೀಶ್ ಮಾಡಿದ್ದಾರೆ.

ಬೇಸಿಗೆಯಲ್ಲೂ ತಣ್ಣನೆ ಅನುಭವ ನೀಡುವ ಸುಂದರ ಮನೆ

14 ಲಕ್ಷದಲ್ಲಿ ಬಿಸಿಲಿನಲ್ಲೂ ತಣ್ಣಗಿನ ಅನುಭವ ನೀಡುವ ಮನೆಯನ್ನು ನಿರ್ಮಿಸಿರುವ ಈ ಯುವ ಸಿವಿಲ್ ಇಂಜಿನಿಯರ್ 950 ಸ್ಕ್ವೇರ್ ಫೀಟ್ ಸ್ಥಳದಲ್ಲಿ ಸುಂದರವಾದ ಪರಿಸರ ಸ್ನೇಹಿ ಟು-ಬೆಡ್‌ರೂಮ್ (2-BHK) ಮನೆಯನ್ನು ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ. ಬೇಸಿಗೆಯಲ್ಲಿ ಕೂಡ ಎಸಿಯ ಜಂಜಾಟವಿಲ್ಲದೆ ತಣ್ಣಗೆ ತಮ್ಮ ಪ್ರೀತಿಯ ಮನೆಯಲ್ಲಿರುತ್ತಾರೆ ಎಂದು ಸನೀಶ್ ಹೇಳುತ್ತಾರೆ.

ನನ್ನ ಕನಸಿನ ಮನೆಯನ್ನು ನಿರ್ಮಿಸಬೇಕೆಂದು ದೃಢ ಸಂಕಲ್ಪ ಹೊಂದಿದ್ದ ಸನೀಶ್, ಕೇರಳ ಶೈಲಿಯ ಸಾಂಪ್ರದಾಯಿಕ ಮನೆಯನ್ನೇ ಬಯಸಿದ್ದರು. ತಮ್ಮ ಬಜೆಟ್‌ಗೆ ಅನುಸಾರವಾಗಿ ಮನೆ ನಿರ್ಮಿಸಲು ಅನೇಕ ಶೋಧನೆಗಳನ್ನು ಸನೀಶ್ ಕೈಗೊಂಡರು.

ಮನೆ ನಿರ್ಮಾಣಕ್ಕೆ ಇವರು ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳನ್ನೇ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪರಿಸರ ಸ್ನೇಹಿಯನ್ನಾಗಿ ತಮ್ಮ ಮನೆ ನಿರ್ಮಿಸಬೇಕೆಂದು ಇವರು ಬಯಸಿದ್ದರು.

ಸ್ಥಳೀಯ ವಸ್ತುಗಳನ್ನೇ ಬಳಸಿ ಮನೆ ನಿರ್ಮಿಸಿರುವ ಯುವ ಇಂಜಿನಿಯರ್

ಲ್ಯಾಟರೈಟ್ ಕಲ್ಲುಗಳು, ಟೆರಾಕೋಟಾ ಟೈಲ್ಸ್ ಮತ್ತು ವಿಶೇಷವಾಗಿ ಆಯ್ಕೆಮಾಡಿದ ಮರವನ್ನು ಮನೆ ನಿರ್ಮಾಣಕ್ಕಾಗಿ ಆಯ್ಕೆಮಾಡಿಕೊಂಡಿರುವುದಾಗಿ ಹೇಳಿರುವ ಸನೀಶ್, ಬೇಸಿಗೆಯ ತೀಕ್ಷ್ಣ ಸಮಯದಲ್ಲಿಯೂ ಈ ಮನೆ ತಂಪಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಸುಲಭವಾಗಿ ಲಭ್ಯವಿರುವ ಈ ವಸ್ತುಗಳು ಮನೆಯ ಸೌಂದರ್ಯದ ಆಕರ್ಷಣೆಗೆ ಕೊಡುಗೆ ನೀಡುವುದಲ್ಲದೆ ಅದರ ಉಷ್ಣ ದಕ್ಷತೆಯನ್ನು ಹೆಚ್ಚಿಸುತ್ತವೆ ಹಾಗೂ ಉರಿಬಿಸಿಲಿನ ಸಮಯದಲ್ಲೂ ಮನೆಯನ್ನು ತಣ್ಣಗೆ ಇರಿಸುತ್ತದೆ ಎಂದು ಸನೀಶ್ ಮಾಹಿತಿ ನೀಡುತ್ತಾರೆ.

ದುಬಾರಿ ವಸ್ತುಗಳಿಗಿಂತ ಸ್ಥಳೀಯ ವಸ್ತುಗಳನ್ನೇ ಬಳಸಿ

ಸಾಮಾನ್ಯವಾಗಿ ಮನೆ ನಿರ್ಮಿಸುವಾಗ ನಾವು ನಮ್ಮ ಸುತ್ತಮುತ್ತಲಿನ ಹಿತ್ತಲಿನಲ್ಲಿರುವ ಕೆಲವೊಂದು ವಸ್ತುಗಳನ್ನು ಕಡೆಗಣಿಸುತ್ತೇವೆ. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಮೂಲೆಗುಂಪಾಗಿಸುತ್ತೇವೆ ವೃಥಾ ಅನಗತ್ಯ ದುಬಾರಿ ವಸ್ತುಗಳನ್ನು ಮನೆ ಕಟ್ಟುತ್ತೇವೆ.

ಆದರೆ ನಾನು ನಮ್ಮಲ್ಲೇ ದೊರೆಯುವ ಪ್ರಾಕೃತಿಕ ವಸ್ತುಗಳನ್ನು ಬಳಸಿಕೊಂಡು ಸುಂದರ ಮನೆ ನಿರ್ಮಿಸಿದ್ದೇನೆ ಎಂದು ತಿಳಿಸಿದ್ದಾರೆ. ಸಾಂಪ್ರದಾಯಿಕ ತಂತ್ರಗಳನ್ನು ಅಳವಡಿಸಿಕೊಂಡು ನನಗೆ ಬೇಕಾದ ರೀತಿಯಲ್ಲೇ ನನ್ನ ಬಜೆಟ್ ವೆಚ್ಚದಲ್ಲೇ ಮನೆ ನಿರ್ಮಿಸಿರುವೆ.

ಹೀಗೆ ಸ್ಥಳೀಯವಾಗಿ ದೊರೆಯುವ ಸಾಮಾಗ್ರಿ ಹಾಗೂ ವಸ್ತುಗಳನ್ನು ಬಳಸಿಕೊಂಡು ಪರಿಸರ ಸಮುದಾಯ ಎರಡಕ್ಕೂ ಪ್ರಯೋಜನಕಾರಿಯಾಗಿರುವ ಸುಸ್ಥಿರ ಪರಿಹಾರಗಳನ್ನು ಅನ್ವೇಷಿಸಿಕೊಂಡು ಮನೆ ಕಟ್ಟಬಹುದು ಎಂದು ತಿಳಿಸಿದ್ದಾರೆ.

14 ಲಕ್ಷದಲ್ಲಿ ಮನೆ ನಿರ್ಮಾಣ

ಮನೆಯನ್ನು ವೈಭವೋಪೇತವಾಗಿ ನಿರ್ಮಿಸದಿದ್ದರೂ ಕೊಂಚ ಆಧುನಿಕ ರೀತಿಯಲ್ಲೇ ನಿರ್ಮಿಸಿರುವೆ. ಅದಾಗ್ಯೂ ನನಗೆ ನನ್ನ ಕನಸಿನ ಮನೆ ನಿರ್ಮಿಸಲು 14 ಲಕ್ಷ ವೆಚ್ಚವಾಗಿದೆ ಅದು ಕೂಡ ನಾನು ಲೆಕ್ಕಾಚಾರ ಮಾಡಿದ ಬಜೆಟ್‌ಗೆ ಅನುಗುಣವಾಗಿಯೇ ಮನೆಯನ್ನು ಸುಂದರವಾಗಿ ನಿರ್ಮಿಸಿರುವೆ ಎಂದು ಸನೀಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸೆರಾಮಿಕ್ ಟೈಲ್ಸ್, ಗ್ರಾನೈಟ್ ಅಥವಾ ಮಾರ್ಬಲ್‌ನಂತಹ ಯಾವುದೇ ದುಬಾರಿ ವಸ್ತುಗಳನ್ನು ಮನೆಗೆ ಬಳಸಿಕೊಂಡಿಲ್ಲ ಅಂತೆಯೇ ಮಿತ ಬೆಲೆಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಮನೆ ನಿರ್ಮಿಸಿರುವೆ ಎಂದು ಹೇಳುತ್ತಾರೆ.

ನನ್ನ ಕನಸಿನ ಸುಂದರ ಮನೆಯನ್ನು ನಾನು ಎಣಿಸಿದಂತೆಯೇ ನಿರ್ಮಿಸಿದ್ದಕ್ಕಾಗಿ ನನಗೆ ಅಪಾರ ಸಂತೋಷವಿದೆ ಎಂದು ಸನೀಶ್ ಹೇಳುತ್ತಾರೆ.

Source : https://kannada.news18.com/news/trend/a-young-engineer-from-kerala-who-built-a-14-lakh-house-that-gives-a-cool-feeling-even-in-hot-summer-stg-pjl-1641101.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *