Viral Video: ಗಿನ್ನೀಸ್​ ವಿಶ್ವ ದಾಖಲೆ; ಕಣ್ಣು ಮುಚ್ಚಿ ಚೆಸ್ ಜೋಡಿಸಿದ 10 ವರ್ಷದ ಪುನೀತಾಮಲರ್​

Chess: ಮಲೇಷಿಯಾದ ಹತ್ತು ವರ್ಷದ ಪುನೀತಾಮಲರ್​ ರಾಜಶೇಖರ್ ಬಹುಮುಖಿ ಪ್ರತಿಭೆ. ಇದೀಗ ಚೆಸ್​ ಕ್ಷೇತ್ರದಲ್ಲಿ ಗಿನ್ನೀಸ್​ ವಿಶ್ವದಾಖಲೆ ಮಾಡಿರುವ ಈಕೆ ಬಾಹ್ಯಾಕಾಶ ವಿಜ್ಞಾನಿಯಾಗುವ ಗುರಿ ಹೊಂದಿದ್ದಾಳೆ. ಸಾರ್ವಜನಿಕವಾಗಿ ಭಾಷಣವನ್ನು ಮಾಡುವ ಈಕೆ ಸುಂದರವಾಗಿ ಕಥೆಯನ್ನ ಹೇಳಬಲ್ಲಳು. ಚೆಸ್​ನಲ್ಲಿ ಇನ್ನೂ ಹೆಚ್ಚಿನ ದಾಖಲೆ ಮಾಡುವ ಇರಾದೆ ಈಕೆಗಿದೆ.

GWR: ಮಲೇಷಿಯಾದ 10 ವರ್ಷದ ಚೆಸ್ ಪಟು ಪುನೀತಾಮಲರ್​ ರಾಜಶೇಖರ್ (Punithamalar Rajashekhar) ಕಣ್ಣುಮುಚ್ಚಿ (Blindfolded) ಚೆಸ್ ಜೋಡಿಸಿ ಗಿನ್ನೀಸ್​ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಕೇವಲ 45.72 ಸೆಕೆಂಡ್‌ಗಳಲ್ಲಿ ಚೆಸ್ ಬೋರ್ಡ್ ಅನ್ನು ಯಶಸ್ವಿಯಾಗಿ ಜೋಡಿಸಿ ಮುಂದಿನ ಹಂತಕ್ಕೆ ಆಟವನ್ನು ಕೊಂಡೊಯ್ದು ಗಮನ ಸೆಳೆದಿದ್ದಾಳೆ ಪುನೀತಾಮಲರ್​. ಈ ಮೂಲಕ Quickest blindfolded chess set arrangement ಗಾಗಿ ಪ್ರತಿಷ್ಠಿತ ಗಿನ್ನೀಸ್​ ವಿಶ್ವ ದಾಖಲೆಯನ್ನು ಈಕೆ ಗಳಿಸಿದ್ದಾಳೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೊತೆ ಮಾತನಾಡಿದ ಈಕೆ, ‘ನನ್ನ ತಂದೆಯೇ ನನ್ನ ತರಬೇತುದಾರರು. ನಾವು ಪ್ರತೀದಿನ ಒಟ್ಟಿಗೇ ಆಡುತ್ತೇವೆ. ಅಲ್ಲದೇ, ಅಸಾಧಾರಣ ಸಾಧಕರ ಕುರಿತು ಸಾಕ್ಷ್ಯಚಿತ್ರವನ್ನು ವೀಕ್ಷಿಸುತ್ತಿರುವಾಗ ನನಗೂ ವಿಶ್ವದಾಖಲೆಗಾಗಿ ಪ್ರಯತ್ನಿಸಬೇಕು ಎಂಬ ಆಲೋಚನೆ ಬಂದಿತು ‘ ಎಂದಿದ್ದಾಳೆ.

‘ತಮ್ಮ ಮಿತಿಗಳನ್ನು ಮೀರಿ ಮತ್ತು ನಂಬಲು ಆಗದಂಥ ಸಾಧನೆಗಳನ್ನು ಮಾಡಿದ ಸಾಧಕರು ನನಗೆ ನಿಜಕ್ಕೂ ಸ್ಫೂರ್ತಿ ಕೊಡುತ್ತಾರೆ. ಈಗಾಗಲೇ ಕಿಡ್ಸ್ ಗಾಟ್ ಟ್ಯಾಲೆಂಟ್‌ನಂತಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಇನ್ನೂ ಹೆಚ್ಚಿನ ಸಾಧನೆ ಮಾಡಲು ಬಯಸುತ್ತೇನೆ.’ ಎಂದಿದ್ಧಾಳೆ ಪುನೀತಾಮಲರ್.

ಗಣಿತ ಈಕೆಯ ನೆಚ್ಚಿನ ವಿಷಯ. ಮುಂದೆ ಬಾಹ್ಯಾಕಾಶ ವಿಜ್ಞಾನಿಯಾಗಲು ಈಕೆ ಬಯಸಿದ್ದಾಳೆ. ಅನೇಕ ಚೆಸ್​ ಪಂದ್ಯಾವಳಿಯಲ್ಲಿ ಬಹುಮಾನ ಗೆದ್ದಿರುವ ಈಕೆ ಸಾರ್ವಜನಿಕ ಭಾಷಣಕಾರಳು. ಜೊತೆಗೆ ಕಥೆ ಹೇಳುವ ಕಲೆಯೂ ಈಕೆಗಿದೆ. ಬಹುಮುಖಿಯಾದ ಈಕೆ ಇಷ್ಟಕ್ಕೇ ಸುಮ್ಮನಾಗಿಲ್ಲ. ಕಣ್ಣುಮುಚ್ಚಿ ಚೆಸ್​ ಆಡುವ ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ಧಾಳೆ.

ಈ ಎಲ್ಲಾ ನನ್ನ ಆಸಕ್ತಿಗಳಿಗೆ ಮತ್ತು ಚಟುವಟಿಕೆಗಳಿಗೆ ಪೋಷಕರು, ಶಿಕ್ಷಕರು ಸದಾ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಹಾಗಾಗಿ ನಾನು ಈ ಸಾಧನೆಗಳನ್ನು ಮಾಡಲು ಅನುಕೂಲವಾಗುತ್ತಿದೆ. ಈಗಷ್ಟೇ ನನ್ನ ಯಾನ ಆರಂಭವಾಗಿದೆ, ಇನ್ನೂ ಸಾಧಿಸುವುದು ಸಾಕಷ್ಟು ಇದೆ ಎಂದಿದ್ದಾಳೆ ಈಕೆ.

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://tv9kannada.com/trending/viral-video-malaysian-girl-punithamalar-rajashekhar-sets-gwr-for-blindfolded-chessboard-arrangement-skvd-680177.html

Leave a Reply

Your email address will not be published. Required fields are marked *