Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ.

Motivational : ಈ ಕಾಯಿಲೆಗೆ ಔಷಧಿಯೇ ಇಲ್ಲ. ಇದೊಂದು ಅನುವಂಶಿಕ ಕಾಯಿಲೆ. ಮಿಲಿಯನ್​ ಜನರಲ್ಲಿ ಒಬ್ಬರಿಗೆ ಮಾತ್ರ ಇದು ಕಾಣಿಸಿಕೊಳ್ಳುತ್ತದೆ. ಲಲಿತ ಪಾಟಿದಾರಗೆ ಹುಟ್ಟುತ್ತಲೇ ಮುಖಮೈತುಂಬಾ ಕೂದಲಿದ್ದವು. ಯಾವ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಆರು ವರ್ಷದ ಬಾಲಕನಿದ್ದಾಗ ಈತನಿಗಿರುವ ರೋಗ ಪತ್ತೆಯಾಯಿತು. ಸಾಕಷ್ಟು ಸಂಕಷ್ಟಗಳನ್ನೆದುರಿಸಿ ಲಲಿತ ಧೈರ್ಯ ತಂದುಕೊಂಡಿದ್ದಾನೆ.

Hypertrichosis : ‘ನಾನು ಚಿಕಿತ್ಸೆಯೇ ಇಲ್ಲದ ಹೈಪರ್ಟ್ರಿಕೋಸಿಸ್ ಎಂಬ ರೋಗಕ್ಕೆ ಹುಟ್ಟಿನಿಂದಲೇ ತುತ್ತಾಗಿದ್ದೇನೆ. ಆರು ವರ್ಷದವನಿದ್ದಾಗ ವೈದ್ಯರು ಈ ರೋಗವನ್ನು ಪತ್ತೆ ಹಚ್ಚಿದರು. ನಾನು ಬೆಳೆಯುತ್ತಿದ್ದಂತೆ ತಂದೆತಾಯಿ ಬಹಳ ಚಿಂತೇಗೀಡಾದರು. ನನ್ನನ್ನು ನೋಡಿದ ಮಕ್ಕಳು ಕಲ್ಲೆಸೆಯುತ್ತಿದ್ದರು. ‘ಮಂಕೀ ಮ್ಯಾನ್​’ ಎಂದು ಕೂಗಿ ಅವಮಾನಿಸುತ್ತಿದ್ದರು. ದೊಡ್ಡವರು ಹನುಮಂತನ ಅವತಾರವೆಂದು ಕೈಮುಗಿಯುತ್ತಿದ್ದರು. ನಾನು ಒಟ್ಟಾರೆ ಕುಸಿಯುತ್ತಿದ್ದೆ. ಆಗ ನನ್ನ ತಂದೆತಾಯಿಯೇ ಧೈರ್ಯ ತುಂಬಿ ಬದುಕಲು ಬೆಂಬಲಿಸಿದರು. ಒಂದು ಮಿಲಿಯನ್​ ಜನರಲ್ಲಿ ಒಬ್ಬರು ಈ ರೋಗಕ್ಕೆ ಈಡಾಗುತ್ತಾರೆ. ಈಗ ನನ್ನ ಕುಟುಂಬ ಸದಸ್ಯರು ನನ್ನೊಂದಿಗೆ ಸಹಜವಾಗಿ ಬೆರೆಯುತ್ತಾರೆ. ನಾನೂ ನನ್ನನ್ನು ಒಪ್ಪಿಕೊಂಡಿದ್ದೇನೆ.’ ಲಲಿತ ಪಾಟಿದಾರ

ಎರಡು ದಿನಗಳ ಹಿಂದೆ officialpeopleofindiaa ದ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಈತನಕ 1.8 ಲಕ್ಷ ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ, ಈ ವಿಡಿಯೋ ನೋಡುತ್ತಿದ್ದಂತೆ, ನನಗಿರುವ ಎಲ್ಲ ಸಮಸ್ಯೆಗಳು ಇದ್ದಕ್ಕಿದ್ದಂತೆ ಕರಗಿ ಹೋದವು ಎನ್ನಿಸಿತು. ಇವನು ಎಲ್ಲರಿಗಿಂತ ಭಿನ್ನವಾಗಿಲ್ಲ, ಅತೀ ವಿಶಿಷ್ಟನಾಗಿದ್ದಾನೆ. ಪೋಷಕರು ತಮ್ಮ ಮಕ್ಕಳಿಗೆ ಸಹಾನುಭೂತಿಯನ್ನು ಹೇಳಿಕೊಡಬೇಕು, ಆಗ ಇಂಥ ಜನರು ಆತ್ಮವಿಶ್ವಾಸದಿಂದ ಬದುಕುತ್ತಾರೆ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ.

ಲಲಿತ ಪಾಟಿದಾರನ ಈತನಕದ ಪಯಣ

https://www.instagram.com/reel/CxR5OFwodBp/?utm_source=ig_embed&ig_rid=27f75dd7-0b8e-4569-962e-388b0c45c8bf

‘ನೀವು ನಿಮ್ಮ ಸಂತೋಷವನ್ನು ಬಿಟ್ಟುಕೊಡಬಾರದು. ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ನನಗೆ Hyperhidrosis ಇದೆ. ನಾನು ಕೂಡ ಮಿಲಿಯನ್​ ಜನರಲ್ಲಿ ಒಬ್ಬನು. ನನ್ನ ಕೈ ಸದಾ ನೀರಾಡುತ್ತಿರುತ್ತವೆ. ಯಾರಾದರೂ ಸಿಕ್ಕಾಗ ಕೈಕುಲುಕುವುದರಿಂದ ಹಿಂಜರಿಯುತ್ತೇನೆ. ಏಕೆಂದರೆ ನನ್ನ ಕೈಗಳು ಕೊಳಕಾಗಿವೆ ಎಂದು ಅವರು ಭಾವಿಸಬಾರದಲ್ಲ? ನಾನು ಕಲಾವಿದನಾಗಿರುವುದರಿಂದ ನನ್ನ ಗುದ್ದಾಟವೇನಿದ್ದರೂ ರೇಖಾಚಿತ್ರಗಳೊಂದಿಗೆ.’

‘ಹಾಗೆಂದು ಅದೂ ಸುಲಭವಲ್ಲ, ಬಲುಬೇಗ ಕಾಗದವು ಒದ್ದೆಯಾಗಿಬಿಡುತ್ತದೆ. ಇನ್ನು ಪರೀಕ್ಷೆ ಸಮಯದಲ್ಲಿಯೂ ಕಷ್ಟಪಡುತ್ತೇನೆ, ಬಹುತೇಕ ನನ್ನ ಉತ್ತರ ಪತ್ರಿಕೆ ಒದ್ದೆಯೇ ಆಗಿರುತ್ತದೆ. ಅನೇಕ ಸಲ ಹರಿದೂ ಹೋಗಿವೆ. ಹಾಗಾಗಿ ಇದೆಲ್ಲವನ್ನೂ ತಪ್ಪಿಸಲು ನಾನು ದೊಡ್ಡ ಕರ್ಚೀಫ್​ ಉಪಯೋಗಿಸುತ್ತೇನೆ. ಧೈರ್ಯವಾಗಿರಿ ಬದುಕು ವಿಶಾಲವಾಗಿದೆ’ ಎಂದು ಧೈರ್ಯ ಹೇಳಿದ್ದಾರೆ ಮತ್ತೊಬ್ಬರು.

ಖಂಡಿತ ಒಂದು ಮಿಲಿಯನ್​ನಲ್ಲಿ ನೀವು ಅತ್ಯಂತ ಅಮೂಲ್ಯ ವ್ಯಕ್ತಿ. ದೇವರ ವಿಶೇಷ ಮಗು ನೀವು. ಸಣ್ಣಪುಟ್ಟ ಸಮಸ್ಯೆಯಿಂದ ಚಿಂತಿಸುವ ಅನೇಕರಿಗೆ ನೀವು ಸ್ಫೂರ್ತಿ. ಹನುಮಂತ ಹೊಸ ಅವತಾರ ತಾಳಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವು ಮಾದರಿ ವ್ಯಕ್ತಿ ಎನ್ನಿಸಿಕೊಳ್ಳುತ್ತೀರಿ ಅಂತೆಲ್ಲ ಅನೇಕರು ಧೈರ್ಯ ತುಂಬಿದ್ದಾರೆ.

ಈ ಸುದ್ದಿ ಓದಿದ ನಿಮ್ಮ ಅಭಿಪ್ರಾಯವೇನು?

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://tv9kannada.com/trending/a-man-living-with-hypertrichosis-watch-viral-video-skvd-673846.html

Leave a Reply

Your email address will not be published. Required fields are marked *