![Kavya Maran and Virat Kohli](https://images.tv9kannada.com/wp-content/uploads/2023/05/Kavya-Maran-and-Virat-Kohli-1024x576.jpg)
ಐಪಿಎಲ್ 2023 ರಲ್ಲಿ ಗುರುವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ (SRH vs RCB) ವಿರಾಟ್ ಕೊಹ್ಲಿ ಮಿಂಚಿನ ಪ್ರದರ್ಶನ ತೋರಿದರು. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕೊಹ್ಲಿ ಬ್ಯಾಟ್ನಿಂದ ಐಪಿಎಲ್ನಲ್ಲಿ ಶತಕ ಮೂಡಿಬಂತು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ (Virat Kohli) ಕೇವಲ 63 ಎಸೆತಗಳಲ್ಲಿ 12 ಫೋರ್, 4 ಮನಮೋಹಕ ಸಿಕ್ಸರ್ ಸಿಡಿಸಿ 100 ರನ್ ಚಚ್ಚಿದರು. ಚೇಸ್ ಕಿಂಗ್ನ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ 8 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಡುಪ್ಲೆಸಿಸ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮವಾಗಿದೆ. ಈ ಪಂದ್ಯ ವೀಕ್ಷಿಸಲು ಸನ್ರೈಸರ್ಸ್ ಫ್ರಾಂಚೈಸಿಯ ಮಾಲಕಿ ಕಾವ್ಯ ಮಾರನ್ (Kavya Maran) ಕೂಡ ಹಾಜರಿದ್ದರು.
ತನ್ನ ತಂಡದ ಪಂದ್ಯ ವೀಕ್ಷಿಸಲು ಸದಾ ಮೈದಾನದಲ್ಲಿರುವ ಕಾವ್ಯ ಅವರು ಆಟಗಾರರ ಪ್ರದರ್ಶನಕ್ಕೆ ರಿಯಾಕ್ಷನ್ ಕೊಡುತ್ತಾ ಇರುತ್ತಾರೆ. ಪ್ರತಿಬಾರಿ ಹೈದರಾಬಾದ್ ಪಂದ್ಯ ನಡೆದಾಗ ಇವರು ಕೂಡ ಸುದ್ದಿಯಾಗುತ್ತಾರೆ. ಈ ಬಾರಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸುತ್ತಿದ್ದಂತೆ ಡಗೌಟ್ನಲ್ಲಿ ಇವರು ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ. ಆರ್ಸಿಬಿ ಬ್ಯಾಟಿಂಗ್ನ 18ನೇ ಓವರ್ನ ಭುವನೇಶ್ವರ್ ಕುಮಾರ್ ಅವರ 4ನೇ ಎಸೆತದಲ್ಲಿ ಕೊಹ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟಿ ಶತಕ ಪೂರೈಸಿದರು. ಆಗ ಕಾವ್ಯ ಅವರು ಬೇಸರಗೊಂಡರು. ಆದರೂ ಕೊಹ್ಲಿ ಆಟಕ್ಕೆ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂತು. ಇಲ್ಲಿದೆ ನೋಡಿ ವಿಡಿಯೋ.
Kavya Maran reaction when Virat Kohli celebration his 6th IPL hundred against SRH
#ViratKohli𓃵 #ViratKohli #viratkholi #Trending #IPLPlayOffs #IPL2023 #hundred #RCBvSRH #themyth #RCB #rcbforever pic.twitter.com/E7wekQsJ14
— Srinibash (@Srnibash1) May 18, 2023
LSG New Jersey: LSG ಮಾಸ್ಟರ್ ಪ್ಲ್ಯಾನ್: ಹೊಸ ಜೆರ್ಸಿ ಅನಾವರಣ
ಇದರ ಜೊತೆಗೆ ಪಂದ್ಯದ ಮಧ್ಯೆ ಅನೇಕ ಬಾರಿ ಕಾವ್ಯ ಮಾರನ್ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಎಸ್ಆರ್ಹೆಚ್ ತಂಡದ ಹೆನ್ರಿಚ್ ಕ್ಲಾಸೆನ್ ಶತಕ ಬಾರಿಸಿದಾಗ ಕಾವ್ಯ ಸಂಭ್ರಮಿಸಿದರು.
— Raju88 (@Raju88784482906) May 18, 2023
ಕೊಹ್ಲಿ ಆಟಕ್ಕೆ ಪ್ರಶಂಸೆಯ ಸುರಿಮಳೆ:
ಐಪಿಎಲ್ ಇತಿಹಾಸದಲ್ಲಿ ದಾಖಲೆಯ 6ನೇ ಶತಕ ಸಿಡಿಸಿದ ಕೊಹ್ಲಿ ಬ್ಯಾಟಿಂಗ್ ವೈಭವಕ್ಕೆ ಹಲವು ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್, ”ಎಂತಹ ಇನ್ನಿಂಗ್ಸ್, ವಿರಾಟ್ ಕೊಹ್ಲಿ ಏಕೈಕ ನಿಜವಾದ ಕಿಂಗ್,” ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಆಟಗಾರರಾದ ಆಲ್ರೌಂಡರ್ ಯುವರಾಜ್ ಸಿಂಗ್, ಸುರೇಶ್ ರೈನಾ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಆಟವನ್ನು ಹಾಡಿ ಹೊಗಳಿದ್ದಾರೆ. ”ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗ ಇದು ವಿರಾಟ್ ದಿನ ಎಂಬುದು ಸ್ಪಷ್ಟವಾಗಿತ್ತು,” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ದಾಖಲೆ ಬರೆದ ಕಿಂಗ್ ಕೊಹ್ಲಿ:
ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಕ್ರಿಸ್ ಗೇಲ್ ಇದ್ದರು. ಗೇಲ್ ಒಟ್ಟು 6 ಶತಕ ಬಾರಿಸಿದ್ದರೂ, ಸದ್ಯ ಸಕ್ರೀಯರಾಗಿರುವ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಶತಕದೊಂದಿಗೆ ಐಪಿಎಲ್ನಲ್ಲಿ 7500 ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 7 ಸಾವಿರದ ಐನೂರು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ