Virat Kohli: ಮೈದಾನಕ್ಕೆ ಓಡಿ ಬಂದು ಮಂಡಿಯೂರಿ ವಿರಾಟ್ ಕೊಹ್ಲಿಯ ಕಾಲು ಹಿಡಿದ ಲಖನೌ ಅಭಿಮಾನಿ

ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ಲೋಕಕ್ಕೆ ಹಾಗೂ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿದ ಕೊಡುಗೆ ಅಪಾರ. ತನ್ನ ಬ್ಯಾಟಿಂಗ್ ಶೈಲಿ, ನಡತೆಯಿಂದಲೇ ಕೊಹ್ಲಿ ವಿಶ್ವದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನು ಗಳಿಸಿದ್ದಾರೆ.ತನ್ನ ನೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು ಎಂಬುದು ಪ್ರತಿಯೊಬ್ಬ ಅಭಿಮಾನಿಯ ಆಸೆ. ಕೆಲವರು ಇದಕ್ಕಾಗಿ ಏನು ಮಾಡಲೂ ಸಿದ್ದರಿರುತ್ತಾರೆ. ಅದರಂತೆ ಕೊಹ್ಲಿ ಅಭಿಮಾನಿಯೊಬ್ಬ ಸೆಕ್ಯುರಿಟಿ ಕಣ್ಣುತಪ್ಪಿಸಿ ಮೈದಾನಕ್ಕೆ ಬಂದು ಆಶೀರ್ವಾದ ಪಡೆದ ಘಟನೆ ಐಪಿಎಲ್ 2023 ರಲ್ಲಿ ನಡೆದಿದೆ.ಐಪಿಎಲ್​ನಲ್ಲಿ ಸೋಮವಾರ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿದೆ. 8ನೇ ಓವರ್ ಆರಂಭಕ್ಕೂ ಮುನ್ನ ಅಭಿಮಾನಿಯೊಬ್ಬರು ದಿಢೀರ್ ಮೈದಾನಕ್ಕೆ ಆಗಮಿಸಿದ್ದಾರೆ.ಅಭಿಮಾನಿಯೊಬ್ಬ ಕೊಹ್ಲಿ ಬಳಿ ಬಂದು ಮಂಡಿಯೂರಿ ಕೂದು ನಮಸ್ಕರಿಸಿದ್ದಾರೆ. ನಂತರ ಕೊಹ್ಲಿಯ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ.ವಿರಾಟ್ ಕೊಹ್ಲಿ ಅಭಿಮಾನಿಯನ್ನು ದೂರ ತಳ್ಳದೆ ಅಥವಾ ಸೆಕ್ಯುರಿಟಿ ಅವರನ್ನು ಕರೆಯದೆ ತಬ್ಬಿಕೊಂಡು ಆಸೆ ಪೂರೈಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.ಕೊಹ್ಲಿಯನ್ನು ನೋಡಲು ಆಶೀರ್ವಾದ ಪಡೆದುಕೊಳ್ಳಲು ಮೈದಾನಕ್ಕೆ ನುಗ್ಗಿ ಕಾಲು ಮುಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಪಿಎಲ್​ನಲ್ಲಿ ಆರ್​ಸಿಬಿ ಪಂದ್ಯ ನಡೆಯುತ್ತಿರುವಾಗ ಮತ್ತು ಟೀಮ್ ಇಂಡಿಯಾ ಪಂದ್ಯ ನಡೆಯುತ್ತಿರುವಾಗ ಈರೀತಿಯ ಘಟನೆ ಅನೇಕ ಬಾರಿ ನಡೆದಿದೆ.ಕೊಹ್ಲಿಗೆ ಬಿತ್ತು ದಂಡ: ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಗಂಭೀರ್, ಕೊಹ್ಲಿ ಅವರಿಗೆ ಇಡೀ ಪಂದ್ಯದ ಶುಲ್ಕವನ್ನು ಕಡಿತ ಮಾಡಲಾಗಿದೆ.

source https://tv9kannada.com/photo-gallery/cricket-photos/virat-kohli-fan-one-fan-touched-the-feet-of-kohli-during-lsg-vs-rcb-ipl-2023-match-viral-photo-kannada-news-vb-au48-568147.html

Leave a Reply

Your email address will not be published. Required fields are marked *