Virat Kohli: 100 ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ-ಬಾಬರ್ ಆಝಂ ದಾಖಲೆ ಹೀಗಿವೆ

ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಏಕದಿನ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನು ಪೂರೈಸಿದ್ದಾರೆ. ಈ ನೂರು ಪಂದ್ಯಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ ಜೊತೆಗಿನ ದಾಖಲೆಗಳ ತುಲನೆಯು ಮುನ್ನಲೆಗೆ ಬಂದಿದೆ.ಬಾಬರ್ ಆಝಂ 100 ಏಕದಿನ ಪಂದ್ಯಗಳ ಬಳಿಕ ಒಟ್ಟು 5089 ರನ್​ ಕಲೆಹಾಕಿದ್ದಾರೆ. ಅಂದರೆ ಏಕದಿನ ಕ್ರಿಕೆಟ್​ನಲ್ಲಿ 59.17 ರ ಸರಾಸರಿಯಲ್ಲಿ ರನ್​ಗಳಿಸಿ ಮಿಂಚಿದ್ದಾರೆ.ಇನ್ನೊಂದೆಡೆ ವಿರಾಟ್ ಕೊಹ್ಲಿ 100 ಏಕದಿನ ಪಂದ್ಯಗಳ ಬಳಿಕ ಕಲೆಹಾಕಿರುವುದು 4107 ರನ್​ಗಳು ಮಾತ್ರ. ಅಂದರೆ ಬಾಬರ್​ಗಿಂತ ಕೊಹ್ಲಿ ಸಾವಿರ ರನ್​ ಕಡಿಮೆ ರನ್ ಬಾರಿಸಿದ್ದರು.ಇನ್ನು ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆಯನ್ನು ಕೂಡ ಬಾಬರ್ ಆಝಂ ನಿರ್ಮಿಸಿದ್ದಾರೆ.ಏಕದಿನ ಕ್ರಿಕೆಟ್​​ನಲ್ಲಿ 97 ಇನಿಂಗ್ಸ್​ಗಳ ಮೂಲಕ ಬಾಬರ್ ಆಝಂ 5 ಸಾವಿರ ರನ್ ಪೂರೈಸಿದ್ದರು. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲಾ ಹೆಸರಿನಲ್ಲಿತ್ತು. ಆಮ್ಲ ಈ ಸಾಧನೆ ಮಾಡಲು 101 ಇನಿಂಗ್ಸ್ ತೆಗೆದುಕೊಂಡಿದ್ದರು.ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 5 ಸಾವಿರ ರನ್ ಪೂರೈಸಲು ಬರೋಬ್ಬರಿ 114 ಇನಿಂಗ್ಸ್ ಆಡಿದ್ದರು. ಅಂದರೆ ಕೊಹ್ಲಿಗಿಂತ ಕಡಿಮೆ ಇನಿಂಗ್ಸ್ ಮೂಲಕ ಬಾಬರ್ ಆಝಂ (97 ಇನಿಂಗ್ಸ್​) ಈ ಸಾಧನೆ ಮಾಡಿದ್ದಾರೆ.ಇನ್ನು ಏಕದಿನ ಕ್ರಿಕೆಟ್​ನಲ್ಲಿ 100 ಪಂದ್ಯಗಳ ಬಳಿಕ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ಕೂಡ ಬಾಬರ್ ಆಝಂ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಕೂಡ ಹಶೀಮ್ ಆಮ್ಲಾ (4808 ರನ್) ಹೆಸರಿನಲ್ಲಿತ್ತು.ಇದೀಗ 100 ಏಕದಿನ ಪಂದ್ಯಗಳ ಬಳಿಕ 5089 ರನ್​ ಬಾರಿಸುವ ಮೂಲಕ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಇದೇ ವೇಳೆ ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ಹಾದಿಯಲ್ಲೇ ದಾಪುಗಾಲಿಟ್ಟಿದ್ದಾರೆ.

source https://tv9kannada.com/photo-gallery/cricket-photos/virat-kohli-vs-babar-azam-after-100-odis-match-kannada-news-zp-574051.html

Leave a Reply

Your email address will not be published. Required fields are marked *