Skip to content
  • Wednesday, March 25, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • Virat Kohli: ಡೆಲ್ಲಿಯ ವಿರಾಟ್ ಕೊಹ್ಲಿ ಪೆವಿಲಿಯನ್​ನಲ್ಲಿ ಕಿಂಗ್ ಕೊಹ್ಲಿ: ವೈರಲ್ ಆಗುತ್ತಿದೆ ಫೋಟೋ
Sports

Virat Kohli: ಡೆಲ್ಲಿಯ ವಿರಾಟ್ ಕೊಹ್ಲಿ ಪೆವಿಲಿಯನ್​ನಲ್ಲಿ ಕಿಂಗ್ ಕೊಹ್ಲಿ: ವೈರಲ್ ಆಗುತ್ತಿದೆ ಫೋಟೋ

May 5, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಮೇ 6 ಶನಿವಾರದಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.ಈಗಾಗಲೇ ಆರ್​ಸಿಬಿ ಆಟಗಾರರು ದೆಹಲಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸ್​ವೆಲ್ ಸೇರಿದಂತೆ ಇತರೆ ಪ್ಲೇಯರ್ಸ್ ಬ್ಯಾಟಿಂಗ್- ಬೌಲಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.ಇದರ ನಡುವೆ ವಿರಾಟ್ ಕೊಹ್ಲಿ ಅವರು ಅಭ್ಯಾಸಕ್ಕೆಂದು ತಮ್ಮ ಹೆಸರಿರುವ ಪೆವಿಲಿಯನ್ ಕಡೆಯಿಂದ ನಡೆದುಕೊಂಡು ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.ದೆಹಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು ಪೆವಿಲಿಯನ್​ಗೆ ವಿರಾಟ್ ಕೊಹ್ಲಿ ಹೆಸರು ಇಡಲಾಗಿದೆ. ಇಲ್ಲಿಂದಲೇ ಕೊಹ್ಲಿ ಆರ್​ಸಿಬಿ ಜೆರ್ಸಿಯಲ್ಲಿ ನಡೆದುಕೊಂಡು ಬರುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.ಆರ್​ಸಿಬಿ ಈ ಬಾರಿಯ ಐಪಿಎಲ್​ನಲ್ಲಿ ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಮತ್ತು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್​ರೇಟ್ ಹೊಂದಿದೆ. ಹೀಗಾಗಿ ಮುಂಬರುವ ಮ್ಯಾಚ್​ಗಳು ಬೆಂಗಳೂರಿಗೆ ಮಹತ್ವದ್ದಾಗಿದೆ.ಇನ್ನು ಗಾಯದ ಕಾರಣ ಐಪಿಎಲ್​ನಿಂದ ಹೊರಬಿದ್ದಿರುವ ಆರ್​ಸಿಬಿ ಆಟಗಾರ ಡೇವಿಡ್ ವಿಲ್ಲಿ ಬದಲಿಗೆ ಮೊನ್ನೆಯಷ್ಟೆ ಬೆಂಗಳೂರು ಮ್ಯಾನೇಜ್ಮೆಂಟ್ ಐಪಿಎಲ್ 2023 ರಲ್ಲಿ ಮರಾಠಿ ಕಾಮೆಂಟ್ರಿ ಪ್ಯಾನೆಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇದಾರ್ ಜಾಧವ್​ ಅವರನ್ನು ಆಯ್ಕೆ ಮಾಡಿದೆ. ಇವರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.ಆರ್​ಸಿಬಿ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ನೆಮ್ಮದಿ ತಂದಿದೆ. ಜೋಶ್ ಹೇಜ್ಲೆವುಡ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ. ಆದರೆ, ಬ್ಯಾಟಿಂಗ್​ನಲ್ಲಿ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್​ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ಇದೀಗ ಜಾಧವ್ ಆಗಮನದಿಂದ ಬ್ಯಾಟಿಂಗ್ ವಿಭಾಗ ಯಾವರೀತಿ ಬದಲಾಗುತ್ತೆ ನೋಡಬೇಕಿದೆ.

source https://tv9kannada.com/photo-gallery/cricket-photos/dc-vs-rcb-ipl-2023-a-photo-of-virat-kohli-walking-towards-the-pavilion-bearing-his-name-for-practice-vb-570544.html

Tags: samagrasuddi, ಸಮಗ್ರ ಸುದ್ದಿ

Post navigation

‘ಬಿಜೆಪಿ ನಾಯಕನ ಕಾರು ಗುದ್ದಿ ವ್ಯಕ್ತಿ ಸಾವು’ : ಪ್ರತ್ಯಕ್ಷದರ್ಶಿಗಳ ಆರೋಪವೇನು..?
R Ashwin: ಆತನಿಗೆ ನನ್ನ ಮೇಲೆ ಕ್ರಶ್ ಇತ್ತೆಂದು ಇಡೀ ಶಾಲೆಗೆ ತಿಳಿದಿತ್ತು: ಅಶ್ವಿನ್ ಜೊತೆಗಿನ ಲವ್ ​ಸ್ಟೋರಿ ಬಿಚ್ಚಿಟ್ಟ ಪ್ರೀತಿ

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
  • RCB New Era:ಬೃಹತ್ ಮೊತ್ತಕ್ಕೆ ಮಾರಾಟವಾದ ಆರ್‌ಸಿಬಿ; ಹೊಸ ಮಾಲೀಕರು ಯಾರು? ಕೊಹ್ಲಿ ಭವಿಷ್ಯವೇನು? ಸಂಪೂರ್ಣ ವಿವರ.
  • UPSC ನಿಂದ ಮೆಗಾ ನೇಮಕಾತಿ: 1300ಕ್ಕೂ ಅಧಿಕ ವೈದ್ಯಾಧಿಕಾರಿ ಹುದ್ದೆಗಳು ಖಾಲಿ, ಮಾ.31 ಕಡೆ ದಿನ.
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
  • ಇತಿಹಾಸದಲ್ಲೇ ಮೊದಲ ಬಾರಿಗೆ 94ರ ಗಡಿ ದಾಟಿದ ಡಾಲರ್: ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣಗಳೇನು?
  • ಹವಾಮಾನ ಬದಲಾವಣೆಯಿಂದ ಕಾಡುತ್ತಿರುವ ಒಣ ಕೆಮ್ಮು: ಕಾರಣ, ಲಕ್ಷಣ ಮತ್ತು ಪರಿಹಾರ.
Copyright © 2026
CONTACT US
Theme by: Theme Horse
Proudly Powered by: WordPress