IPL 2023: ಬ್ಯಾನ್ ಮಾಡುವಂತೆ ಸೂಚಿಸಿದ ವೀರೇಂದ್ರ ಸೆಹ್ವಾಗ್

IPL 2023: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಬಳಿಕ ನಡೆದ ಘಟನೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸೆಹ್ವಾಗ್, ಈ ಪಂದ್ಯ ಮುಗಿದ ಮೇಲೆ ನಾನು ಟಿವಿಯನ್ನು ಸ್ವಿಚ್ ಆಫ್ ಮಾಡಿ ಮಲಗಿದ್ದೆ. ಪಂದ್ಯದ ನಂತರ ಏನಾಯಿತು ಎಂಬುದು ಕೂಡ ನನಗೆ ತಿಳಿದಿರಲಿಲ್ಲ. ಮರುದಿನ ನಾನು ಎದ್ದಾಗ, ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಚರ್ಚೆ ನೋಡಿ ಆಶ್ಚರ್ಯಚಕಿತನಾದೆ.ಏಕೆಂದರೆ ಅಲ್ಲಿ ಕಿತ್ತಾಡಿಕೊಂಡಿರುವುದು ದೇಶದ ಇಬ್ಬರು ಐಕಾನ್​ಗಳು. ಸೋತವರು ಸದ್ದಿಲ್ಲದೆ ಸೋಲನ್ನು ಸ್ವೀಕರಿಸಿ ಹೊರನಡೆಯಬೇಕು. ಗೆದ್ದ ತಂಡ ಸಂಭ್ರಮಿಸಬೇಕು ಅಷ್ಟೇ. ಇಲ್ಲಿ ಇಬ್ಬರು ಪರಸ್ಪರ ಮಾತಿನ ಚಕಮಕಿಗೆ ಇಳಿಯುವ ಅವಶ್ಯಕತೆ ಏನಿತ್ತು?ಈ ವ್ಯಕ್ತಿಗಳು ದೇಶದ ಐಕಾನ್‌ಗಳು. ಅವರು ಏನಾದರೂ ಮಾಡಿದರೆ ಅಥವಾ ಹೇಳಿದರೆ, ಲಕ್ಷಾಂತರ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಘಟನೆಗಳನ್ನು ಮಿತಿಗೊಳಿಸುತ್ತಾರೆ ಎಂದು ಸೆಹ್ವಾಗ್ ಹೇಳಿದರು.ಇನ್ನು ಮಾತು ಮುಂದುವರೆಸಿದ ಸೆಹ್ವಾಗ್, ಇಂತಹ ಘಟನೆಗಳು ನಡೆದರೆ ಬಿಸಿಸಿಐ ಅಂತಹವರನ್ನು ನಿಷೇಧಿಸಬೇಕು. ಇದರಿಂದ ಇಂತಹ ಅಹಿತಕರ ಘಟನೆಗಳು ನಡೆಯುವುದಿಲ್ಲ ಅಥವಾ ಅಪರೂಪವಾಗುತ್ತದೆ. ಈ ಹಿಂದೆ ಇಂತಹ ಘಟನೆಗಳು ಹಲವಾರು ಬಾರಿ ನಡೆದಿವೆ. ಹೀಗಾಗಿ ಈ ಬಗ್ಗೆ ಬಿಸಿಸಿಐ ಕಠಿಣ ನಿಲುವು ತೆಗೆದುಕೊಳ್ಳುವುದು ಉತ್ತಮ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.ಇನ್ನು ಮೈದಾನದಲ್ಲಿನ ಬೈಗುಳದ ಬಗ್ಗೆ ಮಾತನಾಡಿದ ಸೆಹ್ವಾಗ್, ನನ್ನ ಸ್ವಂತ ಮಕ್ಕಳು ಲಿಪ್-ರೀಡ್ ಮಾಡಬಲ್ಲರು. ಅವರು "ಬೆನ್ ಸ್ಟೋಕ್ಸ್" (ಹಿಂದಿ ಬೈಗುಳದ ಬದಲು ಹೆಸರು ಬಳಸಲಾಗಿದೆ) ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಇದೆಲ್ಲವನ್ನೂ ನಾಳೆ ಮಕ್ಕಳು ಕೂಡ ಮುಂದುವರೆಸಬಹುದು. ವಿರಾಟ್ ಕೊಹ್ಲಿ ಅಥವಾ ಗಂಭೀರ್​ಗೆ ಮಾಡಬಹುದಾದರೆ, ನಾವು ಕೂಡ ಮಾಡಬಹುದು ಎಂಬ ಭಾವನೆ ಅವರಲ್ಲಿ ಮೂಡತ್ತದೆ ಎಂದು ಸೆಹ್ವಾಗ್ ತಿಳಿಸಿದರು.ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಯೊಂದಿಗೆ 5 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿದ್ದ ವೀರೇಂದ್ರ ಸೆಹ್ವಾಗ್, ಇಬ್ಬರ ನಡೆಯ ಬಗ್ಗೆ ಸಂತುಷ್ಟರಾಗಿಲ್ಲ. ಅಲ್ಲದೆ ಇಬ್ಬರೂ ಕೂಡ ಮೈದಾನದಲ್ಲಿ ಉತ್ತಮವಾಗಿ ನಡೆದುಕೊಳ್ಳಬೇಕೆಂದು ಇದೇ ವೇಳೆ ವೀರೇಂದ್ರ ಸೆಹ್ವಾಗ್ ವಿನಂತಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-virender-sehwag-opens-up-on-virat-kohli-gambhir-spat-kannada-news-zp-570101.html

Leave a Reply

Your email address will not be published. Required fields are marked *