VISA: ಶ್ರೀಲಂಕಾ ಒಂದೇ ಅಲ್ಲ, ಈ ದೇಶಗಳಿಗೂ ವೀಸಾ ಇಲ್ಲದೆ ಓಡಾಡಬಹುದು ಗೊತ್ತಾ?

ಶ್ರೀಲಂಕಾ, ಪ್ರಾಯೋಗಿಕ ಯೋಜನೆಯ ಭಾಗವಾಗಿ 31 ಮಾರ್ಚ್ 2024 ರವರೆಗೆ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್ (Japan), ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ಗೆ ಉಚಿತ ವೀಸಾಗಳನ್ನು ಘೋಷಿಸಿದೆ. ಈ ಏಳು ದೇಶಗಳು ಶ್ರೀಲಂಕಾಕ್ಕೆ ತೆರಳಬೇಕು ಅಂದರೆ ವೀಸಾ ಮುಕ್ತವಾಗಿ ಹೋಗಬಹುದು. ಈ ನಿಯಮವು ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಕೊಡುಗೆಯಾದರೆ, ಇತ್ತ ಈ ಏಳು ದೇಶಗಳ ಜನರಿಗೆ ವೀಸಾ (Visa) ಮಾಡಿಸುವ ಸಮಯ ಮತ್ತು ತಗಲುವ ಖರ್ಚು ಎರಡೂ ಉಳಿತಾಯವಾಗುತ್ತದೆ. ಭಾರತೀಯರು ಯಾರೆಲ್ಲಾ ಪಾಸ್‌ಪೋರ್ಟ್‌ (Passport) ಹೊಂದಿರುತ್ತಾರೋ ಅವರಿಗೆ ಶ್ರೀಲಂಕಾಕ್ಕೆ ಹೋಗಲು ವೀಸಾ ಬೇಕಿಲ್ಲ. ಶ್ರೀಲಂಕಾ ಮಾತ್ರ ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತಿಲ್ಲ, ಇದರ ಜೊತೆಗೆ ಇನ್ನೂ ಕೆಲ ದೇಶಗಳು ಕೂಡ ವೀಸಾ ಮುಕ್ತ ಪ್ರವೇಶ ಅನುಮತಿಸುತ್ತಿವೆ.

ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುವ ಆ ದೇಶಗಳು ಯಾವುವು ಇಲ್ಲಿ ನೋಡೋಣ.

1. ಮಾರಿಷಸ್

ಬಿಳಿ ಮರಳಿನ ಕಡಲತೀರಗಳಲ್ಲಿ ಸಮುದ್ರದ ಅನುಭವಗಳನ್ನು ಎಂಜಾಯ್‌ ಮಾಡಲು ಬಯಸಿದರೆ ವೀಸಾ ಚಿಂತೆ ಇಲ್ಲದೇ ನೀವು ಮಾರಿಷಸ್‌ಗೆ ತೆರಳಬಹುದು.

ಶ್ರೀಲಂಕಾದಂತೆಯೇ, ಮಾರಿಷಸ್ ತನ್ನ ಕಡಲತೀರದ ಹೊರಗಿನ ಹವಾಮಾನ ಮತ್ತು ಪರ್ವತದ ಒಳಭಾಗವನ್ನು ಹೊಂದಿರುವ ಸುಂದರವಾದ ದ್ವೀಪ ರಾಷ್ಟ್ರವಾಗಿದೆ. ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ 90 ದಿನಗಳ ಕಾಲ ಮಾರಿಷಸ್‌ನಲ್ಲಿ ಉಳಿಯಬಹುದು.

2. ನೇಪಾಳ

ವಿಹಂಗಮ ಪರ್ವತ ವೀಕ್ಷಣೆಗಳು, ಸುಂದರವಾದ ಪ್ರಕೃತಿ, ಕೃಷಿ ಭೂಮಿ, ತಣ್ಣನೆಯ ಹವಮಾನ ಇವನ್ನೆಲ್ಲಾ ಸವಿಯಲು ವೀಸಾ ಇಲ್ಲದೇ ನೇಪಾಳಕ್ಕೆ ಹೋಗಬಹುದು. ಈ ದೇಶಕ್ಕೆ ಹೋಗಲು ಭಾರತೀಯರಿಗೆ ಯಾವುದೇ ವೀಸಾ ಅಗತ್ಯವಿಲ್ಲ.

3. ಮಾಲ್ಡೀವ್ಸ್‌

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು ಮಾಲ್ಡೀವ್ಸ್‌. ಕಡಲ ತೀರಗಳು, ನೀರಿನೊಳಗಿನ ರೆಸಾರ್ಟ್‌ ಎಲ್ಲವೂ ಪ್ರವಾಸಕ್ಕೆ ಹೇಳಿ ಮಾಡಿಸದ ಸ್ಥಳಗಳು ಇಲ್ಲಿಗೂ ಕೂಡ ನಾವು ವೀಸಾ ಇಲ್ಲದೇ ಹೋಗಬಹುದಾಗಿದೆ. ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ 90 ದಿನಗಳ ಕಾಲ ಮಾಲ್ಡೀವ್ಸ್‌ನಲ್ಲಿ ತಂಗಬಹುದು.

4. ಭೂತಾನ್

ಭಾರತದ ನೆರೆಯ ದೇಶವಾದ ಭೂತಾನ್‌ಗೂ ಭಾರತೀಯರಿಗೆ ವೀಸಾಮುಕ್ತ ಪ್ರವೇಶವಿದೆ. ಇಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ವೀಸಾದ ಅಗತ್ಯವಿಲ್ಲದಿದ್ದರೂ ವಲಸೆ ಇಲಾಖೆಯಿಂದ ನೀಡಲಾಗುವ ಪ್ರವೇಶ ಪರವಾನಗಿಯನ್ನು ಅವರು ಪಡೆದುಕೊಳ್ಳಬೇಕಾಗುತ್ತದೆ.

5. ಬಾರ್ಬಡೋಸ್

ವಿಶ್ವದ ಸುಂದರವಾದ ಬೀಚ್‌ಗಳಲ್ಲಿ ಬಾರ್ಬಡೋಸ್ ಬೀಚ್‌ಗಳು ಕೂಡ ಪ್ರಮುಖವಾಗಿವೆ. ಇವುಗಳನ್ನು ಕೆರಿಬಿಯನ್‌ನ “ಜ್ಯುವೆಲ್” ಎಂದೇ ಕರೆಯಲಾಗುತ್ತದೆ. ಭಾರತೀಯ ಸಂದರ್ಶಕರು 90 ದಿನಗಳ ಅವಧಿಯವರೆಗೆ ವೀಸಾ ಇಲ್ಲದೆ ಬಾರ್ಬಡೋಸ್ ಅನ್ನು ಎಂಜಾಯ್‌ ಮಾಡಬಹುದು.

6. ಫಿಜಿ

300 ಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹ ಇರುವ ರಾಷ್ಟ್ರ ಎಂದರೆ ಫಿಜಿ. ಹವಳದ ಬಂಡೆಗಳನ್ನು ಹೊಂದಿರುವ ಫಿಜಿ ಕಡಲತೀರದ ಸ್ವರ್ಗವಾಗಿದೆ. ಭಾರತೀಯ ಪ್ರವಾಸಿಗರು ವೀಸಾ ಇಲ್ಲದೆ 120 ದಿನಗಳ ಕಾಲ ಇಲ್ಲಿರಬಹುದು.

7. ಟ್ರಿನಿಡಾಡ್ ಮತ್ತು ಟೊಬಾಗೊ

ಡ್ಯುಯಲ್ ಐಲ್ಯಾಂಡ್ ಕೆರಿಬಿಯನ್ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಲು ಕೂಡ ನಿಮಗೆ ವೀಸಾ ಅಗತ್ಯವಿಲ್ಲ. 90 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಉಭಯ-ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವ ಭಾರತೀಯರಿಗೆ ವೀಸಾ ಬೇಕಂತಿಲ್ಲ.

8. ಸೀಶೆಲ್ಸ್

ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ಶ್ರೀಲಂಕಾ ಮತ್ತು ಸೀಶೆಲ್ಸ್‌ನಂತಹ ದೇಶಗಳಿಗೆ ವೀಸಾ ಅಗತ್ಯವಿಲ್ಲ. ಪರ್ವತ ಮಳೆಕಾಡುಗಳು, ಕಡಲತೀರಗಳು ಮತ್ತು ದೈತ್ಯ ಅಲ್ಡಾಬ್ರಾ ಆಮೆಗಳಿಗೆ ನೆಲೆಯಾಗಿದೆ ಈ ಊರು.

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಅಗತ್ಯವಿಲ್ಲ ಆದರೆ 30 ದಿನಗಳವರೆಗೆ ಮಾನ್ಯವಾಗಿರುವ ಪರವಾನಗಿಯನ್ನು ಸೀಶೆಲ್ಸ್ ವಲಸೆ ಇಲಾಖೆಯಿಂದ ಆಗಮನದ ನಂತರ ಪಡೆಯಬೇಕು.

Source : https://kannada.news18.com/news/trend/sri-lanka-is-not-the-only-one-indians-can-easily-visit-these-countries-without-visa-stg-hhb-1418746.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *