Vocal For Local: ಮೋದಿಯವರ ವೋಕಲ್ ಫಾರ್ ಲೋಕಲ್ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾ? ಹೀಗೆ ಮಾಡಿ ಸಾಕು

ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸ್ಪೂರ್ತಿದಾಯಕ ವೀಡಿಯೊವನ್ನು (Motivational Video) ಹಂಚಿಕೊಂಡ ನಂತರ ವೋಕಲ್ ಫಾರ್ ಲೋಕಲ್ ಚಳುವಳಿ ದೇಶಾದ್ಯಂತ ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ನಮೋ ಆ್ಯಪ್‌ನಲ್ಲಿ (Namo App) ಸ್ವದೇಶಿ ಉತ್ಪನ್ನಗಳೊಂದಿಗಿನ ಸೆಲ್ಫಿಯನ್ನು ಹಂಚಿಕೊಳ್ಳುವಂತೆಯೇ ಜನತೆಗೆ ಮೋದಿ ಕರೆ ನೀಡಿದ್ದು, ಯುಪಿಐ ಮೂಲಕ ಪಾವತಿಗಳನ್ನು ಮಾಡುವಂತೆ ಆಗ್ರಹಿಸಿದ್ದಾರೆ. ವೋಕಲ್ ಫಾರ್ ಲೋಕಲ್ (Vocal For Local) ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಮೋದಿಯವರು ಕೈಗೊಂಡಿರುವ ಮಹತ್ವದ ಕ್ರಮ ಎಂದೆನಿಸಿದೆ. ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ದೊರೆಯುವುದರೊಂದಿಗೆ ಸ್ಥಳೀಯ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೂ ಬೆಂಬಲ ಹಾಗೂ ಆರ್ಥಿಕ ಸಹಕಾರವನ್ನೊದಗಿಸುವ ಗುರಿಯನ್ನು ವೋಕಲ್ ಫಾರ್ ಲೋಕಲ್ ಅಭಿಯಾನ ಹೊಂದಿದೆ.

ವೋಕಲ್ ಫಾರ್ ಲೋಕಲ್ ಸಂದೇಶ ಸಾರುವ ಜಾಹೀರಾತು ಹಂಚಿಕೊಂಡ ಮೋದಿ

ರೂಪಾಲಿ ಗಂಗೂಲಿ ಮತ್ತು ಗೌರವ್ ಖನ್ನಾ ಪ್ರಮುಖ ಪಾತ್ರದಲ್ಲಿ ಕಂಡುಬರುವ ವೋಕಲ್ ಫಾರ್ ಲೋಕಲ್ ಆಂದೋಲನದ ಮಹತ್ವವನ್ನು ಸಾರುವ ಜಾಹೀರಾತನ್ನು ಪ್ರಧಾನಿಯವರು ಹಂಚಿಕೊಂಡಿದ್ದಾರೆ.

ಅನುಪಮಾ ಹಾಗೂ ಅನುಜ್ ಕಪಾಡಿಯಾ ಪಾತ್ರದಲ್ಲಿ ಪಾತ್ರದಲ್ಲಿ ಮಿಂಚಿರುವ ರೂಪಾಲಿ ಹಾಗೂ ಗೌರವ್, ಭಾರತದ ಜನತೆಗೆ ಉತ್ತಮ ಸಂದೇಶವೊಂದನ್ನು ಸಾರಿದ್ದು, ಸುಪ್ರಸಿದ್ಧ ಹಾಗೂ ಬ್ರ್ಯಾಂಡೆಡ್ ಉತ್ಪನ್ನಗಳನ್ನು ಸ್ಥಿರವಾಗಿ ಆಯ್ಕೆಮಾಡುವ ಬದಲಿಗೆ ಸ್ಥಳೀಯ ಬ್ರ್ಯಾಂಡ್‌ಗಳನ್ನು ಅನ್ವೇಷಿಸಲು ಹಾಗೂ ಅವುಗಳಿಗೆ ಬೆಂಬಲ ಸೂಚಿಸಲು ಕರೆ ನೀಡಿದ್ದಾರೆ.

ದೇಶದ ಪ್ರಗತಿ ಹಾಗೂ ಆತ್ಮನಿರ್ಭರ್ ಭಾರತವನ್ನು ಉತ್ತೇಜಿಸುವ ಗುರಿ

ಸ್ಥಳೀಯ ಉತ್ಪನ್ನಗಳನ್ನು ಅನುಮೋದಿಸುವ ಮೂಲಕ ದೇಶದ ತ್ವರಿತ ಪ್ರಗತಿಯನ್ನು ಉತ್ತೇಜಿಸಲು ಹಾಗೂ ಆತ್ಮನಿರ್ಭರ್ ಭಾರತ್‌ನ ದೃಷ್ಟಿಕೋನವನ್ನು ಸಾಕಾರಗೊಳಿಸಲು “ವೋಕಲ್ ಫಾರ್ ಲೋಕಲ್” ಸಂದೇಶವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ವೋಕಲ್ ಫಾರ್ ಲೋಕಲ್ ಈ ಸಂದೇಶವನ್ನು ಆಗಸ್ಟ್ 15, 2020 ರಂದು ಕೆಂಪು ಕೋಟೆಯ ಆವರಣದಿಂದ ಸತತ ಏಳನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಿಳಿಸಲಾಯಿತು.

ಉದ್ಯೋಗವಕಾಶಗಳ ಸೃಷ್ಟಿ

ಸ್ಥಳೀಯ ಉತ್ಪನ್ನಗಳನ್ನು ಉತ್ಪಾದಿಸುವುದು ಮತ್ತು ಬಳಸುವುದು ಮಾತ್ರವಲ್ಲದೆ ಅವುಗಳನ್ನು ಪ್ರಚಾರ ಮಾಡುವುದು ‘ವೋಕಲ್ ಫಾರ್ ಲೋಕಲ್’ ನ ಮುಖ್ಯ ಅಂಶವಾಗಿದೆ.

ಈ ಉಪಕ್ರಮವು ಆಯಾಯ ಪರಿಸರದೊಳಗೆ ಹೆಚ್ಚಿನ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಡೆಗೆ ಸಜ್ಜಾಗಿದೆ, ಸ್ಥಳೀಯ ಮಾರುಕಟ್ಟೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆ

ಈ ಸ್ಥಳೀಯ ಮಾರುಕಟ್ಟೆಗಳ ಪ್ರಗತಿಯನ್ನು ವಿಶ್ವದಾದ್ಯಂತ ಹಲವಾರು ದೇಶಗಳಿಗೆ ತಮ್ಮ ಸರಕುಗಳನ್ನು ರಫ್ತು ಮಾಡುವ ಮಟ್ಟಕ್ಕೆ ಮುನ್ನಡೆಸುವುದು ವಿಶಾಲ ಉದ್ದೇಶವಾಗಿದೆ.

ಇದರಿಂದ ಭಾರತೀಯ ಆರ್ಥಿಕತೆಯ ಉತ್ತೇಜನವಾಗುತ್ತದೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಉದ್ಯೋಗಿಗಳಿಗೆ ಬೆಂಬಲ ದೊರೆಯುತ್ತದೆ ಎಂಬುದು ಈ ಯೋಜನೆಯ ಉದ್ದೇಶವಾಗಿದೆ.

ಪ್ರಧಾನಿ ಮೋದಿಯವರ ‘ಲೋಕಲ್ ಫಾರ್ ವೋಕಲ್’ ಆಂದೋಲನದಲ್ಲಿ ಸೇರುವುದು ಹೇಗೆ ಎಂಬುದನ್ನು ನೋಡುವುದಾದರೆ ಜನರು ಸ್ಥಳೀಯ ಉತ್ಪನ್ನಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಆಂದೋಲನಕ್ಕೆ ಸೇರಬಹುದು ಮತ್ತು ಅದನ್ನು ನಮೋ ಅಪ್ಲಿಕೇಶನ್‌ನಲ್ಲಿ ಪ್ರಧಾನ ಮಂತ್ರಿಯೊಂದಿಗೆ ಹಂಚಿಕೊಳ್ಳಬಹುದು.

  • ಮೊದಲಿಗೆ ನೀವು ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ
  • ಈ ಆ್ಯಪ್‌ನಲ್ಲೇ ಥ್ರೆಡ್ ಒಂದನ್ನು ನೀವು ಕಾಣಬಹುದು ಅದುವೇ ವೋಕಲ್ ಫಾರ್ ಲೋಕಲ್ ಸೆಲ್ಫಿ ಥ್ರೆಡ್ ಆರಂಭಿಸಿ ಎಂಬುದನ್ನು ಕಾಣಬಹುದು
  • ಒಮ್ಮೆ ನೀವು ಅದನ್ನು ಕ್ಲಿಕ್ ಮಾಡಿದಾಗ, ನೀವು ಉತ್ಪನ್ನದೊಂದಿಗೆ ಸೆಲ್ಫಿ ತೆಗೆದು ಅಪ್‌ಲೋಡ್ ಮಾಡಬಹುದಾದ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ
  • ಮೋದಿಯವರು ಕೆಲವೊಂದು ಆಯ್ಕೆಮಾಡಿದ ಸೆಲ್ಫಿಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಆ್ಯಪ್‌ನಲ್ಲಿ ಸೆಲ್ಫಿ ಹಂಚಿಕೊಳ್ಳುವ ಪ್ರಕ್ರಿಯೆಯು ಇನ್ನೂ ಪ್ರಾರಂಭವಾಗಿಲ್ಲ ಎಂಬುದನ್ನು ಗಮನಿಸಿ

Source : https://kannada.news18.com/news/national-international/how-to-participate-in-prime-minister-narendra-modis-vocal-for-local-campaign-stg-hhb-1431731.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *