Voting Tips: ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ- 2024ರ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಮತಗಟ್ಟೆ ಆವರಣದಲ್ಲಿ ಮತದಾರರು ಮಾಡಬಹುದಾದ, ಮಾಡಬಾರದ ಕೆಲಸಗಳ ಪಟ್ಟಿ ಇಲ್ಲಿದೆ. ಮತ ಚಲಾವಣೆಯ ನಿಯಮಗಳನ್ನು ತಪ್ಪದೇ ಪಾಲಿಸಿ.

ಬೆಂಗಳೂರು: ಲೋಕಸಭಾ (Voting Tips) ಚುನಾವಣೆ 2024ರ (Lok Sabha Election 2024) ಎರಡನೇ ಹಂತದ (second phase) ಮತದಾನ (voting) ಕರ್ನಾಟಕದಲ್ಲಿ (karnataka) ಮೊದಲ ಹಂತದ ಮತದಾನ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದೆ. ಮತದಾನ ಪ್ರಕ್ರಿಯೆಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಮತದಾರರೂ ತಮ್ಮ ಹಕ್ಕು ಚಲಾವಣೆಗೆ ಕಾತರರಾಗಿದ್ದಾರೆ.
ಎರಡನೇ ಹಂತದ ಚುನಾವಣಾ ಪ್ರಚಾರವು ಏಪ್ರಿಲ್ 24ರಂದು ಕೊನೆಯಾಗಿದ್ದು, ಮತದಾನವು ಶುಕ್ರವಾರ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ನಡೆಯಲಿದೆ.
ಎರಡನೇ ಹಂತದಲ್ಲಿ ಕೇರಳದ 20 ಸ್ಥಾನಗಳು, ಕರ್ನಾಟಕದ 28 ಸ್ಥಾನಗಳಲ್ಲಿ 14, ರಾಜಸ್ಥಾನದ 13 ಸ್ಥಾನಗಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8 ಸ್ಥಾನಗಳು, ಮಧ್ಯಪ್ರದೇಶದ ಏಳು ಸ್ಥಾನಗಳು, ಅಸ್ಸಾಂನಲ್ಲಿ ತಲಾ 5 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬಿಹಾರ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಮೂರು ಸ್ಥಾನಗಳು ಮತ್ತು ಮಣಿಪುರ, ತ್ರಿಪುರಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.
ಮತದಾನ ಮಾಡಲಿರುವ ಮತದಾರರಿಗೆ ಕೆಲವೊಂದು ಜವಾಬ್ದಾರಿಗಳಿವೆ. ಮತದಾನದ ವೇಳೆ ಮತದಾರ ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳು ಇಂತಿವೆ.
ಮತದಾನದಕ್ಕೂ ಮೊದಲು ಹೀಗೆ ಮಾಡಿ…
1. ಮತದಾನಕ್ಕೆ ಹೋಗುವ ಮುನ್ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ಮತಗಟ್ಟೆಯನ್ನು ದೃಢೀಕರಿಸಿ.
2. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇದನ್ನು ಮಾಡಬಹುದು.
3. ನಿರ್ಣಾಯಕ ಲೋಕಸಭಾ ಚುನಾವಣೆ 2024ಕ್ಕೆ ನಿಮ್ಮ ಮತವನ್ನು ಚಲಾಯಿಸುವ ಮೊದಲು ನಿಮ್ಮ ಆಯಾ ಮತಗಟ್ಟೆಯಲ್ಲಿ ಮತದಾನದ ಸಮಯವನ್ನು ಪರಿಶೀಲಿಸಿ.
4. ಮತದಾರರು ತಮ್ಮ ಗುರುತು ಚೀಟಿ, ಆಧಾರ್, ಡ್ರೈವಿಂಗ್ ಲೈಸೆನ್ಸ್‌ನಂತಹ ಇತರ ಹೆಚ್ಚುವರಿ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಹೋಗಿ.
5. ಮತ ಚಲಾಯಿಸಲು ಹೊರಡುವ ಮೊದಲು ಸರಿಯಾದ ಆಯ್ಕೆ ಮಾಡಲು ನಿಮ್ಮ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಿ.
6. ನಿಮ್ಮ ಮತವನ್ನು ಚಲಾಯಿಸಿದ ಅನಂತರ EVMಗೆ ಲಿಂಕ್ ಮಾಡಲಾದ VVPAT ಯಂತ್ರದ ಔಟ್‌ಪುಟ್ ಅನ್ನು ಪರಿಶೀಲಿಸಿ. ಯಾವುದೇ ಸಂಶಯ ಕಂಡು ಬಂದರೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿ.
ಮತ ಹಾಕಲು ಹೋದಾಗ ಹೀಗೆ ಮಾಡಬೇಡಿ:
1. ಮತಗಟ್ಟೆಯಲ್ಲಿ ಮೊಬೈಲ್ ಬಳಸಬೇಡಿ.
2. ನಿಮ್ಮ ಮತವನ್ನು ಚಲಾಯಿಸುವಾಗ ಚಿತ್ರ ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳಬೇಡಿ.
3. ಮತ್ತೊಬ್ಬ ಮತದಾರರ ಹೆಸರಿನಲ್ಲಿ ಹೋಗಿ ಮತ ಹಾಕುವುದು ಗಂಭೀರ ಅಪರಾಧವಾಗಿದ್ದು, ಬೇರೆಯವರ ಹೆಸರಿನಲ್ಲಿ ಮತ ಚಲಾಯಿಸಬಾರದು.
4. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಚಿಹ್ನೆಯನ್ನು ಉತ್ತೇಜಿಸುವ ಯಾವುದನ್ನೂ ಮತಗಟ್ಟೆಗೆ ತರಬೇಡಿ.
ಮತದಾನ ಮಾಡುವಾಗ ಒಂದಕ್ಕಿಂತ ಹೆಚ್ಚು ಬಟನ್‌ಗಳನ್ನು ಒತ್ತಬೇಡಿ.
5. ಒಬ್ಬ ಮತದಾರರಾಗಿ ನೀವು ಯಾರ ಪರವಾಗಿ ಮತ ಹಾಕಿದ್ದೀರಿ ಎಂಬುದನ್ನು ಒಬ್ಬ ಅಭ್ಯರ್ಥಿ/ ಪಕ್ಷವನ್ನು ಬಹಿರಂಗಪಡಿಸಬಾರದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1