ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್​​ಫೋನ್​ ನೋಡುತ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್​​!

ಬೆಳಗ್ಗೆ ಎದ್ದ ತಕ್ಷಣ ಸ್ಮಾರ್ಟ್​ಫೋನ್ ನೋಡುತ್ತೀರಾ? ಹಾಸಿಗೆಯಲ್ಲೇ ಕಣ್ಣು ಬಿಟ್ಟುಕೊಂಡು ಸ್ಮಾರ್ಟ್​ಫೋನ್​ ಒತ್ತುತ್ತೀರಾ? ಹಾಗಿದ್ರೆ ಹುಷಾರ್. ಸ್ಮಾರ್ಟ್​ಫೋನ್​ ಬಳಕೆಯಿಂದ ಹಲವು ರೋಗಗಳು ಜನರನ್ನು ಕಾಡುತ್ತಿವೆ. ಗೊತ್ತಿಲ್ಲದೆಯೇ ಜನರು ಅನಾರೋಗ್ಯ ಬಾಧಿತರಾಗುತ್ತಿದ್ದಾರೆ.

​ಸ್ಮಾರ್ಟ್ ಫೋನ್ ಬಂದ ನಂತರ ಜನರ ದೈನಂದಿನ ಬಹುತೇಕ ಸಮಯವನ್ನು ಕೊಲ್ಲುತ್ತಿದೆ. ಎಲ್ಲಾ ವಯೋಮಾನದವರು ಸ್ಮಾರ್ಟ್​ಫೋನ್​ ಚಟಕ್ಕೆ ಬಿದ್ದು ಅದರಿಂದ ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರನ್ನು ಕುಗ್ಗಿಸುತ್ತಿದೆ.

ನಿದ್ರೆಗೆ ಭಂಗ ತರುತ್ತೆ.. ಹುಷಾರ್​

ನಿಮಗೆ ಗೊತ್ತಾ? ಮೆಲಟೋನಿನ್ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್. ಆದರೆ ಸ್ಮಾರ್ಟ್​​ಫೋನ್ ನಿಂದ ಬರುವ ನೀಲಿ ಬೆಳಕು ನಿಮಗೆ ತೊಂದರೆ ನೀಡುತ್ತೆ. ಸ್ಮಾರ್ಟ್​ಫೋನ್​ ಬಳಕೆಯಿಂದ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಬಹುತೇಕರು ಸ್ಮಾರ್ಟ್​ಫೋನ್ ನೋಡುತ್ತಾರೆ. ಇನ್ನು ಕೆಲವರು ಅಲರಾಂ ಇಟ್ಟುಕೊಂಡಿರುತ್ತಾರೆ. ಆದರೆ ಈ ವೇಳೆ ಸ್ಮಾರ್ಟ್​ಫೋನ್​ನಿಂದ ಹೊರಬರುವ ನೀಲಿ ಬೆಳಕು ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದು ಹಗಲಿನಲ್ಲಿ ನಿಮಗೆ ಆಯಾಸವನ್ನುಂಟು ಮಾಡುತ್ತದೆ. ರಾತ್ರಿಯಲ್ಲಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಒತ್ತಡ ಮತ್ತು ಆತಂಕ

ಎದ್ದ ತಕ್ಷಣ ಫೋನ್ ನೋಟಿಫಿಕೇಶನ್ ನೋಡುವ ಅಭ್ಯಾಸವು ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ನೀವು ಒತ್ತಡದಲ್ಲಿರುವಾಗ ಕಾರ್ಟಿಸೋಲ್ ಮಟ್ಟಗಳು ಹೆಚ್ಚಾಗಬಹುದು. ಇದು ಹೃದಯ ಬಡಿತವನ್ನು ಹೆಚ್ಚಿಸುವುದು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗಮನ ಸೆಳೆಯುವ ಸ್ಮಾರ್ಟ್​ಫೋನ್

ಬೆಳ್ಳಗ್ಗೆಯಾದ ನಂತರ ಕೆಲವರು ಸ್ಮಾರ್ಟ್​ಫೋನ್​ ತೆರೆದು ಏನಾದರೂ ಇದೆಯಾ ಎಂದು ಪರಿಶೀಲಿಸುತ್ತಾರೆ. ಇದು ನಿಮ್ಮನ್ನು ಬೇರೆಡೆಗೆ ತಿರುಗಿಸಬಹುದು. ಧ್ಯಾನ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಕ್ರಮೇಣ ತಪ್ಪಿಸಲು ಪ್ರಾರಂಭಿಸುತ್ತದೆ.

ಆರೋಗ್ಯ ಮುಖ್ಯ

ಸರಿಯಾದ ಜೀವನ ನಡೆಸಲು ಆರೋಗ್ಯ ಬಹು ಮುಖ್ಯ. ಆರೋಗ್ಯವಿಲ್ಲದೆ ಏನು ಮಾಡಲು ಸಾಧ್ಯವಿಲ್ಲ. ಆದರೆ ಸ್ಮಾರ್ಟ್​ಫೋನ್​ ಜನರ ಜೀವನವನ್ನು ಕಸಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಸ್ಮಾರ್ಟ್​ಫೋನ್​ ಬಳಕೆ ಜೋರಾಗಿದೆ. ಸ್ಕೂಲ್​​​ನಿಂದ ಬಂದಂತೆ ನೇರವಾಗಿ ಸ್ಮಾರ್ಟ್​ಫೋನ್​​ ಬಳಸಲು ಮುಂದಾಗುತ್ತಾರೆ. ಇದರಿಂದ ಎಳೆಯರ ಕಣ್ಣುಗಳಿಗೆ ಬೇಗ ಕನ್ನಡಕ ಬರುತ್ತಿದೆ.

Source: https://newsfirstlive.com/do-not-see-smartphone-when-you-wake-up-in-the-morning

Leave a Reply

Your email address will not be published. Required fields are marked *