ನೀರು ಅಮೂಲ್ಯ ಸಂಪತ್ತು,ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಉಪ ಪರಿಸರಾಧಿಕಾರಿ ರಾಜೇಶ್.ಪಿ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀಶ್.ಪಿ ಅವರು ಮಾತನಾಡುತ್ತ ನೀರು ಅಮೂಲ್ಯ ಸಂಪತ್ತು ನೀರನ್ನು ಲ್ಯಾಬೊರೇಟರಿಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನೀರನ್ನು ವ್ಯರ್ಥಮಾಡದೆ ಮಿತವಾಗಿ ಬಳಸಬೇಕು. ನೀರಿನ ಸಂರಕ್ಷಣೆ ಮತ್ತು ಮಾಲಿನ್ಯವನ್ನು ತಡೆಗಟ್ಟುವುದು ಮುಖ್ಯ ಹಾಗೂ ನೀವೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಶಾಲೆಯನ್ನು ಪ್ಲಾಸ್ಟಿಕ್ ಮುಕ್ತ ಶಾಲೆಯಾಗಿಸಿ ಎಂದರು.

ಶಾಲೆಯ ನಿರ್ದೇಶಕರಾದ ಎಸ್.ಎಮ್.ಪೃಥ್ವೀಶ ಅವರು ತಮ್ಮ ನುಡಿಗಳಲ್ಲಿ ಭೂಮಿಯೊಂದೇ ಜೀವಿಗಳ ಆವಾಸತಾಣ ಭೂಮಿಯ ಮೇಲೆ ಮಾತ್ರ ಜೀವಿಗಳು ವಾಸಿಸಲು ಸೂಕ್ತವಾದ ವಾತಾವರಣವಿದೆ ಹಾಗಾಗಿ ಭೂಸಂರಕ್ಷಣೆ, ಜಲಸಂರಕ್ಷಣೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಎಲ್ಲರೂ ಪಣತೊಡೋಣ, ಮುಂದಿನ ಪೀಳಿಗೆಗೆ ಸಂಪತ್ಬರಿತ ಭೂಮಿಯನ್ನು ಉಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯೊಪಾದ್ಯಾಯರಾದ ಶ್ರೀ ಎನ್.ಜಿ.ತಿಪ್ಪೆಸ್ವಾಮಿ, ಐಸಿಎಸ್‌ಇ ಪ್ರಾಂಶುಪಾಲರಾದ ಶ್ರೀ ಬಸವರಾಜಯ್ಯ.ಪಿ ಹಾಗೂ ಐಸಿಎಸ್‌ಇ ಉಪ ಪ್ರಾಂಶುಪಾಲರಾದ ಅವಿನಾಶ್.ಬಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಬಿ ವಿನ್ಮಯಿ ಮತ್ತು ರುತ್ವಿಕ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿ ಖುಷಿ ಎಮ್ ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಕನ್ನಿಕವೀರು ಗಣ್ಯರಿಗೆ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಬ್ಯಾಡ್ಜ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *