ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಚಲವಾದಿ ಸಮುದಾಯದವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಚಿತ್ರದುರ್ಗ ಅ. 19: ನಾವು ಚಲವಾದಿಗಳು, ನಮ್ಮ ಸಮುದಾಯದ ಹೆಸರು ಹೇಳಿಕೊಳ್ಳಲು ಹೆಮ್ಮೆಪಡಬೇಕು. ನಮ್ಮ ಜಾತಿಯ ಕೀಳರಿಮೆ ನಮ್ಮನ್ನೇ ಕಾಡುವಂತೆ ಮಾಡಿಕೊಂಡಿದ್ದೇವೆ ನಮ್ಮನ್ನು ಚಲವಾದಿ ಎಂದು ಕರೆದರೆ ಖುಷಿಪಡಬೇಕು, ನಮ್ಮದು ಪರಿಶಿಷ್ಟ ಜಾತಿಯಲ್ಲೇ ಅತಿದೊಡ್ಡ ಸಮುದಾಯವಾಗಿದ್ದರೂ ಇತರ ಒಳಪಂಗಡದವರ ಜೊತೆ ಅಣ್ಣ ತಮ್ಮಂದಿರಂತೆ ಇರಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಕರೆ ನೀಡಿದರು.

ಚಿತ್ರದುರ್ಗ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಚಲವಾದಿ ಸಮುದಾಯದವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾವು ಕುಳಿತಲ್ಲೇ ಕುಳಿತು ಸಮಾಧಾನ ಪಟ್ಟುಕೊಳ್ಳಬಾರದು, ಸಮಾಜದ ಮುಖ್ಯವಾಹಿನಿ ಕಡೆ ದೌಡಾಯಿಸಬೇಕು, ನಾವು ಚಲವಾದಿಗಳು, ನಮ್ಮ ಸಮುದಾಯದ ಹೆಸರು ಹೇಳಿಕೊಳ್ಳಲು ಹೆಮ್ಮೆಪಡಬೇಕು. ನಮ್ಮ ಜಾತಿಯ ಕೀಳರಿಮೆ ನಮ್ಮನ್ನೇ ಕಾಡುವಂತೆ ಮಾಡಿಕೊಂಡಿದ್ದೇವೆ, ನಮ್ಮ ಜನಾಂಗಕ್ಕೆ ಗೌರವ ತರುವಂತೆ ಹಿರಿಯರೆಲ್ಲ ಚರ್ಚಿಸಿ ಚಲವಾದಿ ಎಂಬ ಹೆಸರನ್ನು ಬದಲಾಯಿಸಿಕೊಂಡಿದ್ದೇವೆ, ನಮ್ಮನ್ನು ಚಲವಾದಿ ಎಂದು ಕರೆದರೆ ಖುಷಿಪಡಬೇಕು, ನಮ್ಮದು ಪರಿಶಿಷ್ಟ ಜಾತಿಯಲ್ಲೇ ಅತಿದೊಡ್ಡ ಸಮುದಾಯವಾಗಿದ್ದರೂ ಇತರ ಒಳಪಂಗಡದವರ ಜೊತೆ ಅಣ್ಣ ತಮ್ಮಂದಿರಂತೆ ಇರಬೇಕು, ನಮ್ಮ ಎಡ ಬಲ ಸಮುದಾಯಗಳು ಒಗ್ಗಟ್ಟಿನಿಂದ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು, ಸಮುದಾಯಕ್ಕೆ ಒಳ್ಳೆಯದನ್ನು ಮಾಡದಿದ್ದರೆ ಅಂತಹವರನ್ನು ಸೋಲಿಸುವ ಮೂಲಕ ಪಾಠ ಕಲಿಸಬೇಕು. ಡಾ.ಬಿ. ಆರ್ ಅಂಬೇಡ್ಕರ್ ಅವರು ನಮಗೆ ಮೀಸಲಾತಿ ಕೊಟ್ಟು ಹೋಗಿದ್ದಾರೆ, ಆ ಮೀಸಲಾತಿಗೆ ಗೌರವ ಸಿಗುವ ಕಡೆ ನಾವು ರಾಜಕೀಯ ಶಕ್ತಿ ಪಡೆದುಕೊಳ್ಳಬೇಕು ಎಂದರು.
ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳನ್ನು ಕೊಡುತ್ತೇವೆ ಎಂದಿದ್ದರು, ಆದರೆ ನಮ್ಮ ಸಮುದಾಯದ ಜನರಿಗೆ ಗ್ಯಾರೆಂಟಿ ಯೋಜನೆ ತಲುಪಿಲ್ಲ, ನಮ್ಮ ಜಾತಿಗಾಗಿ ಮೀಸಲಿಟ್ಟ ಹಣವನ್ನೇ ಬಳಸಿಕೊಂಡು ಗ್ಯಾರೆಂಟಿ ಹೆಸರಲ್ಲಿ ನಮಗೇ ಕೊಡುತ್ತಿದ್ದಾರೆ, ಬೇರೆ ಸಮುದಾಯಗಳಿಗೆ ಕೊಡುವಂತೆ ಸರ್ಕಾರದ ಯೋಜನೆಯ ಹಣದಿಂದ ಗ್ಯಾರೆಂಟಿ ಯೋಜನೆಗಳನ್ನು ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳನ್ನು ಬೊಮ್ಮಾಯಿಯವರು ಉಚಿತವಾಗಿ ಕೊಟ್ಟಿದ್ದರು, ಆದರೆ ಈಗ ನಮ್ಮ ಮೀಸಲಾತಿ ಹಣದಿಂದ ನಮಗೆ ಉಚಿತ ವಿದ್ಯುತ್ ಕೊಡುತ್ತಿದ್ದಾರೆ ಎಂದರೆ ಪರೋಕ್ಷವಾಗಿ ನಾವೇ ಬಿಲ್ ಕಟ್ಟುತ್ತಿದ್ದೇವೆ, ನಾವು ನಮಗೆ ಅರಿವಿಲ್ಲದಂತೆ ಕಾಂಗ್ರೆಸ್ ಸರ್ಕಾರದಿಂದ ವಂಚನೆಗೆ ಒಳಗಾಗು ತ್ತಿದ್ದೇವೆ. ಹೀಗಾಗಿ ನಮ್ಮ ಸಮುದಾಯ ಒಗ್ಗಟ್ಟಾಗಿ ಪ್ರಶ್ನೆ ಮಾಡದಿದ್ದರೆ ನಾವು ಹಿಂದುಳಿದವರಾಗೇ ಇರಬೇಕಾಗುತ್ತದೆ ಎಂದು ಸಮುದಾಯದವರಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ವಹಿಸಿದ್ದರು. ಅದ್ಯಕ್ಷತೆಯನ್ನು ಬಿ.ಜೆ.ಪಿಯ .ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಮುದಾಯದ ಯುವ ನಾಯಕಿ ಭಾರ್ಗವಿ ದ್ರಾವಿಡ್ ವಹಿಸಿದ್ದರು. ಜಿಲ್ಲಾ ಛಲವಾದಿ ಮಹಾಸಭ ಅದ್ಯಕ್ಷ ಹೆಚ್.ಶೇಷಪ್ಪ. ರುದ್ರಯ್ಯ.ಚನ್ನಬಸಪ್ಪ ಮುಸ್ಟೂರು. ಬಿಜೆಪಿ ಜಿಲ್ಲಾ ಅದ್ಯಕ್ಷ ಎ. ಮುರಳಿ. ರವೀಂದ್ರ ಮರಿಕುಂಟೆ. ನಿವೃತ್ತ ಮುಖ್ಯ ಶಿಕ್ಷಕಿ ಮಂಜುಳಾ ದೇವಿ. ಓಂಕಾರಮೂರ್ತಿ. ದೀಪು. ತಿಪ್ಪೇಸ್ವಾಮಿ. ಆನಂದ ಪೈಲಟ್. ರೇಖಾ ಮತ್ತಿತರಿದ್ದರು.