ನಮ್ಮ ಪಕ್ಷದಲ್ಲಿ ದುಡಿದಂತ ಕಾರ್ಯಕರ್ತರನ್ನು ಯಾವೂತ್ತು ಸಹ ಮರೆಯುವುದಿಲ್ಲ, ನಮ್ಮ ಪಕ್ಷದ ಬೆನ್ನುಲುಬು ಕಾರ್ಯಕರ್ತರು: ಡಿ ಸುಧಾಕರ್.

ಚಿತ್ರದುರ್ಗ ಜು. 29 ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಪಕ್ಷ ಕಡೆಗಣಿಸಿಲ್ಲ, ಸಕಾಲದಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನ-ಮಾನಗಳು ದೂರಕಲಿವೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ತಮಗೆ ಯಾವುದೇ ಸ್ಥಾನ ಸಿಕ್ಕಲ್ಲ ಎಂದು ನಿರಾಸೆಯಾಗುವುದು ಬೇಡ ಎಂದು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ತಿಳಿಸಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿ ಸಭಾಂಗಣದಲ್ಲಿ ನಡೆದ ಸೋಮವಾರ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ದುಡಿದಂತ ಕಾರ್ಯಕರ್ತರನ್ನು ಯಾವೂತ್ತು ಸಹ ಮರೆಯುವುದಿಲ್ಲ, ನಮ್ಮ ಪಕ್ಷದ ಬೆನ್ನುಲುಬು ಕಾರ್ಯಕರ್ತರು, ನಿಮ್ಮಗಳ ಸಹಕಾರದಿಂದ ವಿಧಾನಸಭೆಯ ಚುನಾವಣೆಯಲ್ಲಿ ಅಭೂತವಾದ ಜಯವನ್ನು ಜಿಲ್ಲೆಯಲ್ಲಿ ಗಳಿಸಲಾಯಿತು, ಇದೆ ರೀತಿ ಲೋಕಸಭಾ ಚುನಾವಣೆಯಲ್ಲಿಯೂ ಸಹಾ ಕಾರ್ಯಕರ್ತರು ಶ್ರಮವನ್ನು ಹಾಕಿದರು. ಆದರೆ ಮತದಾರರ ತೀರ್ಪು ಬೇರೆ ರೀತಿಯಲ್ಲಿ ಬಂದಿತು. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ೧೫ ತಿಂಗಳಾಗಿದೆ, ಚುನಾವಣೆಯ ಸಮಯದಲ್ಲಿ ನೀಡದ ಭರವಸೆಯಂತೆ ನಮ್ಮ ಪಕ್ಷ ಐದು ಗ್ಯಾರೇಂಟಿಗಳನ್ನು ಜನರಿಗೆ ನೀಡಿದೆ ಒಂದು ಕಡೆಯಲ್ಲಿ ಒಂದೇ ಬಾರಿಗೆ ಭರವಸೆಯನ್ನು ಈಡೇರಿಸಿದ್ದು ತಪ್ಪಾಯಿತೆಂದು ಅನಿಸುತ್ತಿದೆ ಯಾಕೆಂದರೆ ಪಕ್ಷ ನೀಡಿದ ಭರವಸೆಯನ್ನು ಈಡೇರಿಸಲು ಐದು ವರ್ಷಗಳ ವರೆಗೆ ಅವಕಾಶ ಇದೆ. ಆದರೆ ನಮ್ಮ ಮುಖ್ಯಮಂತ್ರಿಗಳು ಅತಿ ಶೀಘ್ರವಾಗಿ ಈಡೇರಿಸಿದ್ದಾರೆ ಎಂದರು.

ಒಂದು ಕಾಲದಲ್ಲಿ ನಾನು ಸಹಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸವನ್ನು ಮಾಡಿದ್ದೇನೆ ಇಷ್ಠು ವರ್ಷದವರೆಗೆ ಕಾದ ಪರಿಣಾಮವಾಗಿ ಇಂದು ನನಗೆ ಅಧಿಕಾರ ಸಿಕ್ಕಿದೆ. ಈ ಹಿನ್ನಲೆಯಲ್ಲಿ ನೀವುಗಳು ಸಹಾ ಪಕ್ಷದ ಕಾರ್ಯಕರ್ತರಾದ ಕೊಡಲೇ ಅಧಿಕಾರ ಬೇಕು ಎನ್ನುವ ಮನೋಭಾವ ಬೇಡ ಕಾಲ ಬಂದಾಗ ಪಕ್ಷದ ವರಿಷ್ಠರು ತಾವೇ ಕರೆದು ಸ್ಥಾನವನ್ನು ನೀಡುತ್ತಾರೆ. ಇದರ ಬಗ್ಗೆ ಅನುಮಾನ ಬೇಡ, ಈಗ ನಿಗಮಗಳಿಗೆ ನೀಡಿರುವ ಅಧ್ಯಕ್ಷ ಸ್ಥಾನ ೨೦ ತಿಂಗಳು ಮಾತ್ರ ಉಳಿದ ೨೦ ತಿಂಗಳನ್ನು ಮತ್ತೋಬ್ಬರಿಗೆ ನೀಡುವುದರ ಮೂಲಕ ಅವರಿಗೂ ಸಹಾ ಅಧಿಕಾರವನ್ನು ಪಕ್ಷ ನೀಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

ರಾಜ್ಯದ ಅಭೀವೃದ್ದಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಕ್ಷೇತ್ರದಲ್ಲಿ ಯಾವ ಕಾಮಗಾರಿಯೂ ಆಗುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕ್ಷೇತ್ರದಲ್ಲಿ ಓಡಾಡಲು ಕಸಿವಿಸಿಯಾಗುತ್ತಿದೆ ಇದಕ್ಕೆ ಕಾರಣ ಹಿಂದಿನ ಸರ್ಕಾರ. ಬಿಜೆಪಿ ಸರ್ಕಾರ ಅಧಿಕಾರವನ್ನು ಮಾಡಿದಾಗ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಮಾಡಿದೆ ಇದರಿಂದ ಅದನ್ನು ತೀರಿಸಲು ನಮ್ಮ ಸರ್ಕಾರ ಹಣವನ್ನು ಹೊಂದಿಸುತ್ತಿದೆ. ಇದರಿಂದ ಕ್ಷೇತ್ರದ ಕಾಮಗಾರಿಗೆ ಹಣವನ್ನು ನೀಡಲಾಗುತ್ತಿಲ್ಲ ಇದ್ದೆಲ್ಲ ಮುಂದಿನ ಒಂದು ವರ್ಷದವರೆಗೆ ಮಾತ್ರ ತದ ನಂತರ ಸರ್ಕಾರದಿಂದ ಅನುದಾನ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ವಿವಿಧ ರೀತಿಯ ಅನಿಸಿಕೆಗಳನ್ನು ತಿಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಂ ಕಾರಣರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಸ್ಲಿಂರಿಗೆ ಸರ್ಕಾರದಲ್ಲಿ ಹೆಚ್ಚಿನ ರೀತಿಯ ಮಾನ್ಯತೆಯನ್ನು ನೀಡುವುದರ ಮೂಲಕ ಅವರಿಗೆ ಗೌರವವನ್ನು ನೀಡಿ, ಚಿತ್ರದುರ್ಗದಲ್ಲಿ ಹಲವಾರು ಜನತೆ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವರ್ಷಗಳಿಂದ ದುಡಿದಿದ್ದಾರೆ ಅವರಿಗೆ ರಾಜ್ಯ ಮಟ್ಟದ ನಿಗಮದಲ್ಲಿ ಸ್ಥಾನವನ್ನು ಕಲ್ಪಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಂಪತ್ ಕುಮಾರ್, ಮೈಲಾರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾನಂದಿನಿ ಗೌಡ, ವೆಂಕಟೇಶ್, ಲಕ್ಷ್ಮೀಕಾಂತ್, ಪ್ರಕಾಶ್, ನಾಗರಾಜ್ ಜಾಹ್ನವಿ, ಜಾಕಿರ್, ಖಾಸಿಂಆಲಿ, ಅಲ್ಲಾ ಭಕ್ಷಿ, ನರಸಿಂಹರಾಜು, ನಜ್ಮಾತಾಜ್, ಶ್ರೀಮತಿ ಮೋಕ್ಷಾ ರುದ್ರಸ್ವಾಮಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್,ಡಿ,ಕುಮಾರ್ ಸೇರಿದಂತೆ ಇತರರು ಸಚಿವರ ಮುಂದೆ ತಮ್ಮ ಮನವಿಯನ್ನು ಸಲ್ಲಿಸಿದರು.  

Leave a Reply

Your email address will not be published. Required fields are marked *