ಗಾಬಾ ಟೆಸ್ಟ್ ಡ್ರಾನಲ್ಲಿ ಅಂತ್ಯ; ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಆದ ಬದಲಾವಣೆಗಳೇನು?

ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಗೆಲುವಿಗೆ 275 ರನ್​ಗಳ ಗುರಿ ಪಡೆದಿದ್ದ ಟೀಂ ಇಂಡಿಯಾಕ್ಕೆ ಗುರಿ ಬೆನ್ನಟ್ಟುವ ಅವಕಾಶವನ್ನು ವರುಣ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯದ ಐದನೇ ದಿನದಾಟವನ್ನೂ ಸಹ ಮಳೆಯಿಂದಾಗಿ ರದ್ದು ಮಾಡಬೇಕಾಯಿತು.

ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಸದ್ಯ ಮೂರು ಪಂದ್ಯಗಳ ಬಳಿಕ ಎರಡೂ ತಂಡಗಳು ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿವೆ. ಪಂದ್ಯ ರದ್ದಾದ ನಂತರವೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಟೀಂ ಇಂಡಿಯಾದ ಆಸೆ ಇನ್ನೂ ಹಾಗೆಯೇ ಉಳಿದಿದೆ.

ಗಾಬಾ ಟೆಸ್ಟ್ ರದ್ದಾದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 4 ಅಂಕ ಪಡೆದಿವೆ. ಐಸಿಸಿ ನಿಯಮಗಳ ಪ್ರಕಾರ ಪಂದ್ಯ ರದ್ದಾದ ಬಳಿಕ ಎರಡೂ ತಂಡಗಳು ಸಮಾನ ಅಂಕ ಪಡೆಯುತ್ತವೆ. ಆ ಪ್ರಕಾರ ಈ ಪಂದ್ಯದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

ಆಂದರೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರೆದಿದ್ದರೆ, ಆಸ್ಟ್ರೇಲಿಯ ಎರಡನೇ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಗಾಬಾ ಟೆಸ್ಟ್‌ನ ನಂತರ ಆಸ್ಟ್ರೇಲಿಯಾ 106 ಮತ್ತು ಭಾರತ 114 ಅಂಕಗಳನ್ನು ಹೊಂದಿದೆ.

ಸದ್ಯಕ್ಕೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 2 ಪಂದ್ಯಗಳು ಬಾಕಿ ಉಳಿದಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಏಕಾಂಗಿಯಾಗಿ ಫೈನಲ್‌ಗೆ ಲಗ್ಗೆ ಇಡಬೇಕಾದರೆ ಟೀಂ ಇಂಡಿಯಾ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಸರಣಿಯನ್ನು 3-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದುಕೊಂಡರೆ ಡಬ್ಲ್ಯುಟಿಸಿ ಫೈನಲ್‌ಗೆ ಟಿಕೆಟ್ ಪಡೆಯಲಿದೆ.

ಒಂದು ವೇಳೆ ಸರಣಿ 2-2ರಲ್ಲಿ ಅಂತ್ಯಗೊಂಡರೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಟೀಂ ಇಂಡಿಯಾ ಅವಲಂಬಿತವಾಗಬೇಕಾಗುತ್ತದೆ. ಈ ಸರಣಿಯಲ್ಲಿ, ಶ್ರೀಲಂಕಾ ತಂಡವು ಆಸ್ಟ್ರೇಲಿಯಾವನ್ನು ಮಣಿಸಿದರೆ ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಹಾದಿ ಸುಗಮವಾಗಲಿದೆ.

Source : https://tv9kannada.com/photo-gallery/cricket-photos/wtc-final-hopes-india-australia-series-psr-951667-6.html

Leave a Reply

Your email address will not be published. Required fields are marked *