ವಾಟ್ಸಾಪ್ ಹೋದ್ರೆ ಬೇರೆ ಆ್ಯಪ್​ಗಳು ಯಾವ್ಯಾವಿವೆ? ಈ ಪರ್ಯಾಯ ಮೆಸೇಜಿಂಗ್ ಅಪ್ಲಿಕೇಶನ್​ಗಳ ಬಗ್ಗೆ ಒಂದು ಪರಿಚಯ

ವಾಟ್ಸಾಪ್ ಭಾರತದಿಂದ ನಿರ್ಗಮಿಸುವುದಾಗಿ ಹೇಳಿದೆ. ನಾಡಿನ ಕಾನೂನು ಕಟ್ಟಳೆಗಿಂತ ತನ್ನ ಬಳಕೆದಾರರ ಗೌಪ್ಯತೆ ಕಾಪಾಡುವುದು ಮುಖ್ಯ ಎನ್ನುವುದು ವಾಟ್ಸಾಪ್​ನ ಮಾಲಕ ಸಂಸ್ಥೆ ಮೆಟಾದ (Meta) ಧೋರಣೆ. ಅಂತೆಯೇ ಭಾರತದ ಇತ್ತೀಚಿನ ಐಟಿ ನಿಯಮಗಳ ವಿರುದ್ಧ ವಾಟ್ಸಾಪ್ ನ್ಯಾಯಾಲಯದ ಮೊರೆ ಹೋಗಿದೆ. ಸಂದೇಶಗಳನ್ನು ಎನ್​ಕ್ರಿಪ್ಟ್ ಮಾಡಲಾಗುತ್ತದೆಯಾದ್ದರಿಂದ ಅದರ ಮೂಲ ಶೋಧಿಸಲು ಆಗುವುದಿಲ್ಲ. ಎನ್​ಕ್ರಿಪ್ಷನ್ ವ್ಯವಸ್ಥೆ ತೆಗೆದುಹಾಕುವುದಿಲ್ಲ ಎಂದು ವಾಟ್ಸಾಪ್ ಹೇಳಿದ್ದು, ಒಂದು ವೇಳೆ ಬಲವಂತ ಮಾಡಿದರೆ ಭಾರತದಿಂದಲೇ ನಿರ್ಗಮಿಸುವುದಾಗಿ ಹೇಳಿದೆ. ಒಂದು ವೇಳೆ ವಾಟ್ಸಾಪ್ ಭಾರತದಲ್ಲಿ ಅಲಭ್ಯವಾದರೆ ಪರ್ಯಾಯವಾಗಿರುವ ಮೆಸೇಜಿಂಗ್ ಆ್ಯಪ್​ಗಳು ಯಾವುವಿವೆ? ಲಭ್ಯ ಇರುವ ವಾಟ್ಸಪೇತರ ಐದು ಆ್ಯಪ್​ಗಳ ಪರಿಚಯ ಇಲ್ಲಿದೆ:

ಟೆಲಿಗ್ರಾಂ ಮೆಸೆಂಜರ್

ಬಳಕೆದಾರರ ಪ್ರೈವಸಿ ವಿಚಾರದಲ್ಲಿ ವಾಟ್ಸಾಪ್​ಗಿಂತ ಟೆಲಿಗ್ರಾಂ ಹೆಚ್ಚು ಬದ್ಧವಾಗಿದೆ. ಇದೇ ಕಾರಣಕ್ಕೆ ಟೆಲಿಗ್ರಾಂಗೆ ನಿಷ್ಠಾವಂತರ ಬಳಕೆದಾರರ ಬಳಗ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಎರಡು ಲಕ್ಷ ಸದಸ್ಯರನ್ನು ಒಳಗೊಳ್ಳಬಹುದಾದ ಗ್ರೂಪ್ ಕ್ರಿಯೇಟ್ ಮಾಡಬಹುದು. ದೊಡ್ಡ ಗಾತ್ರ ಫೈಲ್​ಗಳನ್ನು ಕಳುಹಿಸಬಹುದು. ಇನ್ನೂ ಹಲವು ವಿಶೇಷ ಫೀಚರ್ಸ್ ಟೆಲಿಗ್ರಾಂನಲ್ಲಿವೆ.

ಹೈಕ್ ಸ್ಟಿಕರ್ ಚ್ಯಾಟ್

ಹೈಕ್ ಭಾರತದ್ದೇ ಆದ ಮೆಸೇಜಿಂಗ್ ಆ್ಯಪ್. ರಸವತ್ತಾಗಿ ಸಂವಾದ ನಡೆಸಲು ನಾನಾ ರೀತಿಯ ಸ್ಟಿಕ್ ಪ್ಯಾಕ್​ಗಳನ್ನು ಹೊಂದಿದೆ. ಮೆಸೇಜಿಂಗ್ ಅಲ್ಲದೇ ಕ್ರಿಕೆಟ್ ಸ್ಕೋರ್, ಡಿಜಿಟಲ್ ವ್ಯಾಲಟ್ ಇತ್ಯಾದಿ ಸೇವೆಗಳು ಹೈಕ್​ನಲ್ಲಿವೆ.

ಇದನ್ನು ಓದಿ : ಇಂಟರ್ನ್ಯಾಷನಲ್ ನೋ ಡಯಟ್ ಡೇ 2024: ದಿನಾಂಕ, ಇತಿಹಾಸ ಮತ್ತು ಪ್ರಾಮುಖ್ಯತೆ .

ಜಿಯೋ ಚ್ಯಾಟ್

ಜಿಯೋಚ್ಯಾಟ್ ಮತ್ತೊಂದು ಉತ್ತಮ ಪರ್ಯಾಯ ಮೆಸೇಜಿಂಗ್ ಆ್ಯಪ್. ವಿಡಿಯೋ ಕಾನ್ಫರೆನ್ಸಿಂಗ್, ವಾಯ್ಸ್ ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಹೊಂದಿದೆ. ಹಲವು ವಿಶೇಷ ಫೀಚರ್ಸ್ ಟೆಲಿಗ್ರಾಂನಲ್ಲಿವೆ.

ಸಿಗ್ನಲ್

ಸಿಗ್ನಲ್ ಆ್ಯಪ್ ತನ್ನ ಬಳಕೆದಾರರ ಪ್ರೈವೆಸಿ ರಕ್ಷಣೆಯಲ್ಲಿ ಟೆಲಿಗ್ರಾಂಗಿಂತ ಒಂದು ಹೆಜ್ಜೆ ಮುಂದು. ಇದು ಪರಿಣಾಮಕಾರಿ ಹಾಗೂ ಸರಳ ಎನಿಸುವ ಆ್ಯಪ್ ಆಗಿದೆ. ಜಾಗತಿಕವಾಗಿ ಇದು ಮನ್ನಣೆ ಪಡೆಯುತ್ತಿದೆ.

ಸ್ಕೈಪ್

ಮೂಲತಃ ವಿಡಿಯೋ ಕಾಲಿಂಗ್​ಗೆಂದು ರೂಪಿಸಲಾಗಿದ್ದ ಸ್ಕೈಪ್ ಈಗ ಮೆಸೇಜಿಂಗ್ ಸರ್ವಿಸ್ ಕೂಡ ನೀಡುತ್ತದೆ. ಕಾರ್ಪೊರೇಟ್ ವಲಯದಲ್ಲೂ ಸ್ಕೈಪ್​ಗೆ ಪ್ರಾಧಾನ್ಯತೆ ಇದೆ.

Source : https://tv9kannada.com/technology/what-if-whatsapp-leave-india-here-are-five-alternative-messaging-apps-snvs-825770.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *