ರೈಲ್ವೇ ಇಲಾಖೆಯಲ್ಲಿ ಕ್ರೀಡಾ ಕೋಟಾದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ! ಉದ್ಯೋಗ ಪಡೆಯಲು ಅರ್ಹತೆಗಳೇನು?

ರೈಲ್ವೆ ಕ್ರೀಡಾಪಟು ನೇಮಕಾತಿ

ಪೂರ್ವ ರೈಲ್ವೆ 60 ಕ್ರೀಡಾಪಟು ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ 15.11.2024 ರಿಂದ 14.12.2024 ರವರೆಗೆ http://www.rrcer.org/ ನಲ್ಲಿ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಉದ್ಯೋಗ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಬೇಕು ಎಂದು ಅರ್ಜಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

RRC ಪೂರ್ವ ರೈಲ್ವೆ ಗ್ರೂಪ್ C & D ನೇಮಕಾತಿ

ಗುಂಪು ‘C’, ಹಂತ-4/ಹಂತ-5 – ಪದವಿ ಅಥವಾ ಸಮಾನ. ಗುಂಪು ‘C’ ಹಂತ-2/ಹಂತ-3 – 12ನೇ ತರಗತಿ ಅಥವಾ ಸಮಾನ ಮತ್ತು ಐಟಿಐ ಅಥವಾ ಸಮಾನ. ಗುಂಪು ‘D’ ಹಂತ-1- 10ನೇ ತರಗತಿ ಅಥವಾ ಸಮಾನ ಅಥವಾ ಐಟಿಐ ಅಥವಾ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ನೇಮಕಾತಿ 2024

01/04/2022 ರಿಂದ ಕ್ರೀಡಾ ಸಾಧನೆಗಳನ್ನು ಪರಿಗಣಿಸಲಾಗುತ್ತದೆ.

ವಯಸ್ಸಿನ ಮಿತಿ: ಕ್ರೀಡಾಪಟುಗಳು – ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು.

ಆಯ್ಕೆ ಪ್ರಕ್ರಿಯೆ: ಕ್ರೀಡಾ ಸಾಧನೆಗಳು, ಪ್ರಾವೀಣ್ಯತೆ, ದೈಹಿಕ ಸಾಮರ್ಥ್ಯ.

ಕ್ರೀಡಾ ಕೋಟಾ ಉದ್ಯೋಗಗಳು

ಅರ್ಜಿ ಶುಲ್ಕ: ಕೆಳಗೆ ತಿಳಿಸಲಾದವರನ್ನು ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳಿಗೆ ರೂ. 500.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು* ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ* ರೂ. 250.

ಪೂರ್ವ ರೈಲ್ವೆ ವೆಬ್‌ಸೈಟ್‌ನಲ್ಲಿ (http://www.rrcer.org/) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Source : https://kannada.asianetnews.com/gallery/central-government-jobs/eastern-railway-sports-quota-recruitment-2024-apply-now-online-kvn-sn4v76#image4

Leave a Reply

Your email address will not be published. Required fields are marked *