India vs Sri Lanka Match Preview: ನವೆಂಬರ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದೆ.
ಮುಂಬೈ (ಮಹಾರಾಷ್ಟ್ರ): 2023ರ ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಂತೆ ಟೀಂ ಇಂಡಿಯಾ ಆರಕ್ಕೆ ಆರು ಪಂದ್ಯವನ್ನು ಗೆದ್ದು ಅಜೇಯವಾಗಿದೆ.
ಅತ್ತ ಗಾಯಗಳ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾ ಕೇವಲ ಎರಡು ಪಂದ್ಯಗಳ ಗೆಲುವು ಸಾಧಿಸಿದೆ. ಉಳಿದ ಮೂರು ಪಂದ್ಯಗಳನ್ನು ಗೆದ್ದರೆ, ಸಿಂಹಳೀಯರಿಗೆ ಸೆಮೀಸ್ ಪ್ರವೇಶ ಸಿಕ್ಕರೂ ಸಿಗಬಹುದು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 2ರಂದು ತನಗೆ ಮಾಡು ಇಲ್ಲವೇ ಮಡಿ ರೀತಿಯಾಗಿರುವ ಪಂದ್ಯದಲ್ಲಿ ಲಂಕಾ ತಂಡ ಭಾರತವನ್ನು ಎದುರಿಸುತ್ತಿದೆ. ಈ ಮೈದಾನದಲ್ಲಿ ಲಂಕಾಗೆ 2011ರ ವಿಶ್ವಕಪ್ ಫೈನಲ್ನ ಮುಖಭಂಗ ಎಂದಿಗೂ ಮರೆಯದಂತಿದೆ. ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ದ್ವೀಪ ರಾಷ್ಟ್ರದ ಕ್ರಿಕೆಟ್ ಹಿರಿಮೆಯ ಮಸುಕಾಗಿದೆ. ನಾಯಕ ಕುಸಾಲ್ ಮೆಂಡಿಸ್ ಅವರು ಈ ಆವೃತ್ತಿಯಿಂದ ಕನಿಷ್ಠ ಗೌರವಾನ್ವಿತ ನಿರ್ಗಮನದ ಭರವಸೆಯಲ್ಲಿ ತ್ವರಿತ ಪರಿಹಾರ ಕಾರ್ಯಾಚರಣೆಯನ್ನು ಮಾಡಿಕೊಂಡು ತಂಡವನ್ನು ಮುನ್ನಡೆಸುತ್ತಿದ್ದಾರೆ.
https://pbs.twimg.com/media/F929R2oasAA2KYZ?format=jpg&name=small
ನೆಲದ ಲಾಭ ಒಂದೆಡೆ ಆದರೆ, ಅನುಭವಿಗಳ ಫಾರ್ಮ್ ತಂಡವನ್ನು ರಕ್ಷಿಸುತ್ತಿದೆ. ಇದರ ಜೊತೆಗೆ ತಂಡವು ಬೌಲಿಂಗ್ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಂಡಿರುವುದು ಸರಣಿ ಗೆಲುವಿನ ಹಿಂದಿನ ರಹಸ್ಯವಾಗಿದೆ. 6ರಲ್ಲಿ ಎಲ್ಲ ಪಂದ್ಯಗಳ ಗೆಲುವಿನ ಶ್ರೇಯ ಬೌಲರ್ಗಳಿಂಗೆ ಸಲ್ಲುತ್ತದೆ, ಎಂದರೆ ತಪ್ಪಾಗದು. ಏಕೆಂದರೆ ಬ್ಯಾಟರ್ಗಳಿಗೆ ಒತ್ತಡ ಆಗದಂತೆ ಎದುರಾಳಿಯನ್ನು ಪ್ರತಿ ಬಾರಿಯೂ 300 ರನ್ ಗಡಿಯೊಳಗೆ ನಿಯಂತ್ರಸುವಲ್ಲಿ ಯಶಸ್ವಿ ಆಗಿದ್ದಾರೆ.
ಅನುಭವಿಗಳ ಆಸರೆ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರ ಅನುಭವ ಮತ್ತು ಜವಾಬ್ದಾರಿ ತಂಡಕ್ಕೆ ಪ್ರತಿ ಬಾರಿಯೂ ನೆರವಾಗುತ್ತಿದೆ. ಮೂವರಲ್ಲಿ ಒಬ್ಬರು ತಂಡಕ್ಕೆ ನೆರವಾಗುತ್ತಲೇ ಇದ್ದಾರೆ. ರೋಹಿತ್ ಶರ್ಮಾ ಆರಂಭಿಕರಾಗಿ ವೇಗದ ಆರಂಭವನ್ನು ನೀಡಿದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ರಾಹುಲ್ ಐದನೇ ಬ್ಯಾಟರ್ ಆಗಿ ತಂಡಕ್ಕೆ ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿ ಆಗುತ್ತಿದ್ದಾರೆ.
ಕಾಡುವ ಬೌಲರ್ಗಳು: 6 ಪಂದ್ಯಗಳಲ್ಲಿ 4 ತಂಡವನ್ನು ಟೀಂ ಇಂಡಿಯಾ ಬೌಲರ್ಗಳು ಸರ್ವಪತನ ಮಾಡಿದ್ದಾರೆ. 2 ತಂಡಗಳ 8 ವಿಕೆಟ್ ಕೀಳುವಲ್ಲಿ ಯಶಸ್ವಿ ಆಗಿದ್ದಾರೆ. ಪವರ್ ಪ್ಲೇ ಮತ್ತು ಮಧ್ಯಮ ಓವರ್ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಜೊತೆಗೆ ಡೆತ್ ಓವರ್ಗಳಲ್ಲಿ ರನ್ ಕೊಡದೇ ವಿಕೆಟ್ ಪಡೆಯುವಲ್ಲಿ ತಂಡ ಯಶಸ್ವಿ ಆಗುತ್ತಿದೆ. ಇದರಿಂದ ತಂಡ ಬೃಹತ್ ಮೊತ್ತವನ್ನು ಎದುರಿಸದೇ ಸರಳವಾದ ಮೊತ್ತವನ್ನು ಸುಲಭವಾಗಿ ಬೆನ್ನತ್ತಿ ಗೆದ್ದಿದೆ.
- ” class=”align-text-top noRightClick twitterSection” data=””>
ಬದಲಾವಣೆ ಸಾಧ್ಯತೆ: ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ ಅಷ್ಟು ಉತ್ತಮ ಪ್ರದರ್ಶನ ನೀಡದಿರುವುದು ಅವರ ಸ್ಥಾನಕ್ಕೆ ಕುತ್ತಾಗುವ ಸಾಧ್ಯತೆ ಇದೆ. ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ. ಬೌಲಿಂಗ್ ವಿಭಾಗದಲ್ಲಿ ಸಿರಾಜ್ ಕಳೆದ ಕೆಲ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಕಾಣದಿರುವ ಹಿನ್ನೆಲೆ ಅವರಿಗೆ ಕೊಕ್ ನೀಡುವ ನಿರೀಕ್ಷೆ ಇದೆ.
ಲಂಕಾಗೆ ಗೆಲುವು ಅನಿವಾರ್ಯ: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಅವಕಾಶಕ್ಕಾಗಿ ಆದರೂ ಮುಂದಿನ ಪಂದ್ಯಗಳನ್ನು ಲಂಕಾ ಗೆಲ್ಲಬೇಕಿದೆ. ಈ ವಿಶ್ವಕಪ್ನಲ್ಲಿ ತಂಡ ಸೆಮೀಸ್ ಪ್ರವೇಶಿಸಲು ಮಾರ್ಗ ಕಠಿಣವಾಗಿದೆ. ತಂಡದ ಪ್ರಮುಖ ಆಟಗಾರರು ಗಾಯ್ಕಕೆ ತುತ್ತಾಗಿದ್ದು, ತಂಡದ ದುರ್ಬಲತೆಗೆ ಕಾರಣವಾಗಿದೆ. ವಿಶ್ವಕಪ್ಗೂ ಮುನ್ನ ನಡೆದ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಟಗಾರರು ಗಾಯಕ್ಕೆ ತುತ್ತಾದರು. ಅದಲ್ಲೂ ಸ್ಟಾರ್ ಅಲ್ರೌಂಡರ್ ವನಿಂದು ಹಸರಂಗ ಇಲ್ಲದಿರುವುದು ತಂಡಕ್ಕೆ ಹೊರೆಯಾಗಿದೆ.
ಸಂಭಾವ್ಯ ತಂಡಗಳು.. ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ/ ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಯಾವಾಗ?: ನವೆಂಬರ್ 2, 2023, ಮಧ್ಯಹ್ನ 2ಕ್ಕೆ ಪಂದ್ಯಾರಂಭ.
ಎಲ್ಲಿ?: ವಾಂಖೆಡೆ ಸ್ಟೇಡಿಯಂ, ಮುಂಬೈ. ಸ್ಟಾರ್ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ನಲ್ಲಿ ನೇರಪ್ರಸಾರ ಲಭ್ಯ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1