ಏನಿವು IIT – NIT – IIIT: ಇವುಗಳ ನಡುವಿನ ವ್ಯತ್ಯಾಸಗಳೇನು?; ಪ್ರವೇಶ ಪಡೆಯುವುದು ಹೇಗೆ? ಎಷ್ಟಿರುತ್ತೆ ಶುಲ್ಕ?

DIFFERENCE BETWEEN IIT NIT AND IIIT : IIT vs NIT vs IIIT ನಡುವಿನ ಪ್ರವೇಶ ಮತ್ತು ಶುಲ್ಕದ ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೈದರಾಬಾದ್​: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎಂದು ಕರೆಯಲ್ಪಡುವ ಐಐಟಿ, ಎನ್‌ಐಟಿ, ಮತ್ತು ಐಐಐಟಿಯಲ್ಲಿ ಅಧ್ಯಯನ ಮಾಡಬೇಕು ಎಂಬುದು ನವಯುವಕರ ಹೆಬ್ಬಯಕೆ. ಇದಕ್ಕಾಗಿ ಯುವಕರು ತುದಿಗಾಲ ಮೇಲೆ ನಿಂತಿರುತ್ತಾರೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಉತ್ತಮ ಉದ್ಯೋಗಾವಕಾಶಗಳಿವೆ. ಹೀಗಾಗಿ ಇವುಗಳಿಗೆ ಭಾರಿ ಬೇಡಿಕೆ ಇದೆ. ಈ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಸೀಟು ಪಡೆಯುವುದು ಅಷ್ಟು ಸುಲಭವಲ್ಲ. ಜೆಇಇಯಂತಹ ಕಠಿಣ ಪರೀಕ್ಷೆಗಳಲ್ಲಿ ನೀವು ಉತ್ತಮ ಅಂಕಗಳನ್ನು ಗಳಿಸಬೇಕು ಮತ್ತು ಉತ್ತಮ ಶ್ರೇಣಿಗಳನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಅವುಗಳಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ.

ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೆಂದು ಹೆಸರಾಗಿರುವ ಈ ಸಂಸ್ಥೆಗಳಲ್ಲಿ ಸೀಟು ಪಡೆಯಲು ಪ್ರವೇಶ ಪ್ರಕ್ರಿಯೆ ಏನು? ನಾನು ಎಷ್ಟು ಶುಲ್ಕವನ್ನು ಪಾವತಿಸಬೇಕು? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪಡೆದುಕೊಳ್ಳೋಣ

IIT vs NIT vs IIIT Fee Comparison

IITಗಳು ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಾಗಿವೆ. ಅನೇಕ ಜನರು ಈ ಸ್ಥಳಗಳಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ. ಇದರಲ್ಲಿ ಸೀಟು ಪಡೆಯಲು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್​ ಗಳಿಸಬೇಕು. ಆಗ ಮಾತ್ರ ಐಐಟಿಗೆ ಪ್ರವೇಶ ಸಿಗುತ್ತದೆ. ಇಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್​ ಗಳನ್ನು ಕಲಿಯಲು ಅವಕಾಶ ಇದೆ. ಕೇಂದ್ರ ಸರ್ಕಾರ ನಡೆಸುವ ಐಐಟಿಗಳು ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನಿಮಗೆ ಒದಗಿಸಿಕೊಡುತ್ತವೆ.

ಶುಲ್ಕದ ವಿವರಗಳು ಹೀಗಿವೆ:

  • IIT ಗಳಲ್ಲಿ B.Tech ಶುಲ್ಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀವು ವರ್ಷಕ್ಕೆ 2.2 ಲಕ್ಷದಿಂದ 3.2 ಲಕ್ಷಗಳ ನಡುವೆ ಪಾವತಿಸಬೇಕಾಗುತ್ತದೆ.
  • ಹಾಸ್ಟೆಲ್ ಮೆಸ್ ಶುಲ್ಕಕ್ಕೆ ಒಂದೂವರೆ ಲಕ್ಷದಿಂದ 2 ಲಕ್ಷ ರೂ. ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ. ಇದನ್ನು ಲೆಕ್ಕ ಹಾಕಿದರೆ ನಾಲ್ಕು ವರ್ಷಗಳ ಬಿ.ಟೆಕ್ ಕೋರ್ಸ್ ಗೆ ಒಟ್ಟು ಅಂದಾಜು 10 ಲಕ್ಷದಿಂದ 14 ಲಕ್ಷದವರೆಗೆ ಖರ್ಚಾಗುತ್ತದೆ.
IIT vs NIT vs IIIT Fee Comparison

ಏನಿವು NITಗಳೆಂದರೆ?: ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಐಐಟಿಗಳ ನಂತರ ದೇಶದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಂದರೆ NITಗಳಾಗಿವೆ. ಐಐಟಿಯಲ್ಲಿ ಸೀಟು ಸಿಗದವರು ಎನ್‌ಐಟಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವೂ ಕೂಡ ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿವೆ.

ಇಲ್ಲಿನ ಶುಲ್ಕದ ವಿವರಗಳು:

  • NIT ಗಳಲ್ಲಿ B.Tech ಕೋರ್ಸ್‌ಗಳಿಗೆ ವಾರ್ಷಿಕ ಶುಲ್ಕ 1.4 ಲಕ್ಷದಿಂದ 2.4 ಲಕ್ಷದವರೆಗೆ ಇರುತ್ತದೆ.
  • ಹೆಚ್ಚುವರಿಯಾಗಿ ಹಾಸ್ಟೆಲ್ ಮತ್ತು ಮೆಸ್ ಶುಲ್ಕಗಳು ಎಂದು ವರ್ಷಕ್ಕೆ 1.2 ಲಕ್ಷದಿಂದ 2.2 ಲಕ್ಷದವರೆಗೆ ವೆಚ್ಚ ಬರುತ್ತೆ.
  • ಒಟ್ಟು ನಾಲ್ಕು ವರ್ಷಗಳ ಬಿ.ಟೆಕ್ ಕೋರ್ಸ್ ಪೂರ್ಣಗೊಳಿಸಲು ಪ್ರತಿ ವಿದ್ಯಾರ್ಥಿ ಅಂದಾಜು 8 ಲಕ್ಷದಿಂದ 10 ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ.
IIT vs NIT vs IIIT Fee Comparison
Students (Getty Images)

ಟ್ರಿಪಲ್ ಐಟಿ (ಐಐಐಟಿ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದೊಂದಿಗೆ IIIT ಗಳು ನಡೆಸಲ್ಪಡುತ್ತವೆ. ಐಐಟಿಗಳು ಮತ್ತು ಎನ್‌ಐಟಿಗಳ ನಂತರ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಐಐಐಟಿಗಳು ಅತ್ಯಂತ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಾಗಿವೆ. ಟ್ರಿಪಲ್ ಐಟಿಗಳು ಪ್ರಾಥಮಿಕವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರಗಳಲ್ಲಿ ನಿಮಗೆ ಶಿಕ್ಷಣವನ್ನು ಒದಗಿಸುತ್ತವೆ. ಪ್ರವೇಶ ಪ್ರಕ್ರಿಯೆಯು ಜೆಇಇ ಮೇನ್ಸ್ ಶ್ರೇಣಿಯನ್ನು ಆಧರಿಸಿರುತ್ತದೆ. ಆದರೆ, ಜೆಇಇಯಲ್ಲಿ ಕಡಿಮೆ ರ್‍ಯಾಂಕ್​ ಪಡೆದರೂ ಇವುಗಳಲ್ಲಿ ಸೀಟು ಸಿಗುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲೂ ಸಹ IIT, NIT ಶಿಕ್ಷಣ ಸಂಸ್ಥೆಗಳಲ್ಲಿ ದೊರೆತಂತೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್​ ವ್ಯಾಸಂಗಕ್ಕೆ ಅವಕಾಶಗಳಿವೆ.

ಶುಲ್ಕದ ವಿವರಗಳು ಹೀಗಿವೆ:

  • ಟ್ರಿಪಲ್ ಐಟಿಗೆ ವಾರ್ಷಿಕ ಶುಲ್ಕವು 1.5 ಲಕ್ಷದಿಂದ 3 ಲಕ್ಷದವರೆಗೆ ಇರುತ್ತದೆ.
  • ಹಾಸ್ಟೆಲ್ ಮತ್ತು ಮೆಸ್ ಶುಲ್ಕಕ್ಕೆ ಸಂಬಂಧಿಸಿದಂತೆ ನೀವು ವರ್ಷಕ್ಕೆ 1.2 ಲಕ್ಷದಿಂದ 2.5 ಲಕ್ಷದವರೆಗೆ ಪಾವತಿಸಬೇಕಾಗುತ್ತದೆ.
  • ಈ ಲೆಕ್ಕಾಚಾರದ ಮೇಲೆ ನಾಲ್ಕು ವರ್ಷಗಳಲ್ಲಿ ಸುಮಾರು 8 ಲಕ್ಷದಿಂದ 14 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆ ಇದೆ

Source : ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *