IMEI ಸಂಖ್ಯೆಯ ಮಹತ್ವವೇನು? ಅದನ್ನು ತಿಳಿಯುವುದು ಹೇಗೆ?

ಸ್ಮಾರ್ಟ್​ಫೋನ್​ನ IMEI ಸಂಖ್ಯೆಯ ಮಹತ್ವವೇನು ಮತ್ತು ಅದನ್ನು ಪತ್ತೆ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರು : ಸ್ಮಾರ್ಟ್‌ಫೋನ್‌ಗಳು ನಮ್ಮ ಸಂವಹನವನ್ನು ಸುಲಭ ಮತ್ತು ತ್ವರಿತಗೊಳಿಸುತ್ತವೆ. ಆದರೆ ಅವು ಅಷ್ಟೇ ಸಂಕೀರ್ಣವಾದ ತಾಂತ್ರಿಕ ಸಾಧನಗಳಾಗಿವೆ.

ಹೀಗಾಗಿ ನೀವು ಅವುಗಳನ್ನು ಬಳಸುವ ಮೊದಲು ಅವುಗಳ ಬಗೆಗಿನ ಒಂದಿಷ್ಟು ಪ್ರಮುಖ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸ್ಮಾರ್ಟ್‌ಫೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಅದರ IMEI ಸಂಖ್ಯೆ. ವಾಸ್ತವವಾಗಿ ಸ್ಮಾರ್ಟ್​ ಫೋನ್​ಗಳು ಮಾತ್ರವಲ್ಲದೆ ಎಲ್ಲಾ GSM ಮೊಬೈಲ್ ಸಾಧನಗಳು IMEI ಸಂಖ್ಯೆಯನ್ನು ಹೊಂದಿರುತ್ತವೆ.

IMEI ಸಂಖ್ಯೆ ಎಂದರೇನು?: IMEI ಎಂಬುದು ಇಂಟರ್​ ನ್ಯಾಷನಲ್ ಮೊಬೈಲ್ ಇಕ್ವಿಪ್​ಮೆಂಟ್ ಐಡೆಂಟಿಟಿ ಕೋಡ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಮಾರಾಟಕ್ಕೆ ಲಭ್ಯವಾಗುವ ಮೊದಲೇ ಸ್ಮಾರ್ಟ್​ ಫೋನ್​ಗೆ 15 ಅಂಕಿಯ IMEI ನಂಬರನ್ನು ಅಳವಡಿಸಲಾಗಿರುತ್ತದೆ.

IMEI ಸಂಖ್ಯೆಯ ಉದ್ದೇಶವೇನು? : ಕಳೆದುಹೋದ ಫೋನ್ ಅನ್ನು ಪತ್ತೆಹಚ್ಚಲು ಅಥವಾ ಹುಡುಕಲು ಈ IMEI ಕೋಡ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಕೋಡ್ ಮೊಬೈಲ್ ಕಳ್ಳತನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಕಳ್ಳರು ಸಿಮ್ ಅನ್ನು ಬದಲಾಯಿಸಿದರೆ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಸ್ಮಾರ್ಟ್​ಫೋನ್​ನಲ್ಲಿ ಡ್ಯುಯಲ್ ಸಿಮ್ ಇದ್ದರೆ ಅದರಲ್ಲಿ ಎರಡು IMEI ಸಂಖ್ಯೆಗಳಿವೆ ಎಂದರ್ಥ. ನಿಮ್ಮ ಫೋನ್ ಕಳುವಾದರೆ ಮತ್ತು ಆ ವಿಷಯವನ್ನು ನೀವು ನಿಮ್ಮ ಟೆಲಿಕಾಂ ಸೇವಾ ಪೂರೈಕೆದಾರರಿಗೆ ತಿಳಿಸಿದರೆ, ಅವರು ಆ ಸಂಖ್ಯೆಯನ್ನು ಕಪ್ಪುಪಟ್ಟಿಗೆ ಸೇರಿಸಬಹುದು ಮತ್ತು CEIR ಅಥವಾ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ಮುಂದಿನ ಕ್ರಮ ಕೈಗೊಳ್ಳಬಹುದು.

CEIR ಇದು ಎಲ್ಲಾ ಮೊಬೈಲ್ ಸಂಖ್ಯೆಗಳ ದಾಖಲೆಗಳನ್ನು ನಿರ್ವಹಿಸುವ ಕೇಂದ್ರವಾಗಿದೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಅಥವಾ ನಿರ್ಬಂಧಿಸುವ ಅಧಿಕಾರವನ್ನು ಹೊಂದಿದೆ.

ನನ್ನ IMEI ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ? : IMEI ಸಂಖ್ಯೆಯನ್ನು ಪರಿಶೀಲಿಸಲು ನಾಲ್ಕು ವಿಭಿನ್ನ ಮಾರ್ಗಗಳಿವೆ ಮತ್ತು ನಿಮಗೆ ಹೆಚ್ಚು ಅನುಕೂಲಕರವಾದುದನ್ನು ನೀವು ಆಯ್ಕೆ ಮಾಡಬಹುದು.

1. ಡಯಲ್ ಮಾಡುವ ಮೂಲಕ IMEI ಸಂಖ್ಯೆ ಪತ್ತೆ ಮಾಡುವುದು: ಯುಎಸ್‌ಎಸ್‌ಡಿ ಎಂದರೆ ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡಿವೈಸ್ ಇದು ಜಿಎಸ್‌ಎಂ (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್) ಪ್ರೋಟೋಕಾಲ್ ಆಗಿದೆ. ಇದು SMS ನಂತೆಯೇ ಕೆಲಸ ಮಾಡುತ್ತದೆ. ಆದರೆ ಇದು ನಿಮ್ಮ ಫೋನ್ ಮಾತ್ರ ಅರ್ಥಮಾಡಿಕೊಳ್ಳುವ ಕೋಡ್‌ಗಳ ರೂಪದಲ್ಲಿರುತ್ತದೆ.

ಮೊದಲಿಗೆ ನಿಮ್ಮ ಡಯಲ್‌ಪ್ಯಾಡ್ ಓಪನ್ ಮಾಡಿ ಅದರಲ್ಲಿ *#06# ಅನ್ನು ಟೈಪ್ ಮಾಡಿ ಮತ್ತು send ಒತ್ತಿರಿ. ಈಗ ನಿಮ್ಮ ಫೋನ್‌ನ IMEI ಕೋಡ್ ಅನ್ನು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. *#06# ಅನ್ನು ಸಾಮಾನ್ಯವಾಗಿ ‘IMEI ಸಂಖ್ಯೆ ಚೆಕ್ ಕೋಡ್’ ಎಂದು ಕರೆಯಲಾಗುತ್ತದೆ. ನೀವು ಇತ್ತೀಚಿನ ಸ್ಮಾರ್ಟ್‌ಫೋನ್ ಹೊಂದಿದ್ದರೆ, ನೀವು ಎಂಟರ್ ಬಟನ್ ಅನ್ನು ಒತ್ತಬೇಕಾಗಿಲ್ಲ. ಬದಲಿಗೆ ಅದು ನಿಮ್ಮ IMEI ಕೋಡ್ ಅನ್ನು ಸ್ವಯಂಚಾಲಿತವಾಗಿ ತೋರಿಸುತ್ತದೆ.

2. ನಿಮ್ಮ ಫೋನ್ ಬಾಕ್ಸ್ ಪರಿಶೀಲಿಸಿ: ನೀವು ಹೊಸದಾಗಿ ಫೋನ್ ತಂದಾಗ ಅದನ್ನು ಪ್ಯಾಕ್ ಮಾಡಿದ ಬಾಕ್ಸ್​ ನಿಮ್ಮಲ್ಲಿದ್ದರೆ ಅದರ ಮೂಲಕವೂ IMEI ಸಂಖ್ಯೆಯನ್ನು ತಿಳಿಯಬಹುದು. ಬಾಕ್ಸ್​ ಮೇಲೆ IMEI ಕೋಡ್​ ಅನ್ನು ಪ್ರಿಂಟ್ ಮಾಡಲಾಗಿರುತ್ತದೆ.

3. ಆಯಂಡ್ರಾಯ್ಡ್​ ಫೋನ್‌ಗಳಲ್ಲಿ IMEI ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ?: ಆಯಂಡ್ರಾಯ್ಡ್​ ಬಳಕೆದಾರರು ತಮ್ಮ IMEI ಸಂಖ್ಯೆಯನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:

ಹಂತ 1: ನಿಮ್ಮ ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ

ಹಂತ 2: ಲಭ್ಯವಿರುವ About Phone ಅಥವಾ Phone option ಆಯ್ಕೆಮಾಡಿ

ಹಂತ 3: IMEI ಕೋಡ್ ಅನ್ನು ಪರಿಶೀಲಿಸಲು ಸ್ಕ್ರಾಲ್ ಮಾಡಿ

4. ಐಫೋನ್‌ನಲ್ಲಿ IMEI ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?: ಆಪಲ್ ಬಳಕೆದಾರರು ತಮ್ಮ IMEI ಕೋಡ್ ಅನ್ನು ಈ ಹಂತಗಳ ಮೂಲಕ ಪರಿಶೀಲಿಸಬಹುದು:

ಹಂತ 1: iPhone, iCloud, ಅಥವಾ iPad ಸಾಧನದಲ್ಲಿ ಸೆಟ್ಟಿಂಗ್‌ಗಳ ಆಯ್ಕೆ ಓಪನ್ ಮಾಡಿ.

ಹಂತ 2: General option ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: About ಕ್ಲಿಕ್ ಮಾಡಿ

ಒಮ್ಮೆ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ IMEI ಕೋಡ್ ಅನ್ನು ನೀವು ಪರಿಶೀಲಿಸಬಹುದು.

Source : https://m.dailyhunt.in/news/india/kannada/etvbhar9348944527258-epaper-etvbhkn/imei+sankhyeya+mahatvavenu+adannu+tiliyuvudu+hege+-newsid-n516859828?listname=newspaperLanding&topic=scienceandtechnology&index=3&topicIndex=7&mode=pwa&action=click

Leave a Reply

Your email address will not be published. Required fields are marked *