‘ಕ್ರಿಕೆಟರ್​ಗಳ ಕ್ರಶ್​ ಆಗಿದ್ದೀರಿ’; ಶುಬ್​ಮನ್ ಗಿಲ್ ಬಗ್ಗೆ ಹೇಳಿದ್ದಕ್ಕೆ ರಶ್ಮಿಕಾ ಮಂದಣ್ಣ ರಿಯಾಕ್ಷನ್ ಹೇಗಿತ್ತು?

shubaman gill

ರಶ್ಮಿಕಾ ಮಂದಣ್ಣ ಅವರು ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಅವರು ಜನಪ್ರಿಯತೆ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ ಎಂದು ಅನೇಕರು ಹೇಳಿಕೊಂಡಿದ್ದು ಇದೆ. ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ ಶುಬ್​ಮನ್ ಗಿಲ್ (Shubman Gill) ಅವರು ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ ಎಂದು ಹೇಳಿಕೊಂಡಿದ್ದಾಗಿ ವರದಿ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಿಯಾಕ್ಷನ್ ನೀಡಿದ್ದಾರೆ. ಪಾಪರಾಜಿಗಳು ಈ ಬಗ್ಗೆ ಕೇಳಿದ್ದಕ್ಕೆ ಅವರು ಮನಪೂರ್ತಿಯಾಗಿ ನಕ್ಕಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸದ್ಯ ಮುಂಬೈನಲ್ಲಿದ್ದಾರೆ. ‘ಅನಿಮಲ್​’ ಚಿತ್ರದ ಶೂಟಿಂಗ್​ನಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಜೊತೆ ಅನೇಕ ಬ್ರ್ಯಾಂಡ್​​ಗಳ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಅವರು ಮುಂಬೈನಲ್ಲಿ ಬ್ರ್ಯಾಂಡ್ ಒಂದರ ಪ್ರಮೋಷನ್​ನಲ್ಲಿ ಭಾಗಿ ಆಗಿದ್ದರು. ಆಗ ಅವರನ್ನು ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಅವರಿಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ.

ವೀರಲ್ ಭಯಾನಿ ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ‘ರಶ್ಮಿಕಾ ಅವರೇ ನೀವು ಎಲ್ಲರ ಕ್ರಶ್​ ಆಗಿಬಿಟ್ಟಿದ್ದೀರಾ. ಕ್ರಿಕೆಟರ್​ಗಳ ಕ್ರಶ್​ ಕೂಡ’ ಎಂದು ಪಾಪರಾಜಿಗಳು ಹೇಳಿದರು. ಇದಕ್ಕೆ ರಶ್ಮಿಕಾ ನಕ್ಕಿದ್ದಾರೆ ಅಷ್ಟೇ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ

 

View this post on Instagram

 

A post shared by Viral Bhayani (@viralbhayani)

ನಾನು ಹಾಗೆ ಹೇಳೆ ಇಲ್ಲ ಎಂದಿದ್ದ ಶುಬ್​ಮನ್

‘ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ’ ಎಂದು ಶುಬ್​ಮನ್​ ಗಿಲ್ ಅವರು ಹೇಳಿಕೊಂಡಿರುವುದಾಗಿ ಇತ್ತೀಚೆಗೆ ವರದಿ ಆಗಿತ್ತು. ಇದಾದ ಬೆನ್ನಲ್ಲೇ ಟ್ರೋಲ್​ ಪೇಜ್​ಗಳು ಹಬ್ಬ ಮಾಡಿದ್ದವು. ಶುಬ್​ಮನ್ ಗಿಲ್​ ಹಾಗೂ ರಶ್ಮಿಕಾ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡೋಕೆ ಆರಂಭಿಸಿದ್ದವು. ಸಾಲು ಸಾಲು ಪೋಸ್ಟ್​ಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವು. ಇದು ಶುಬ್​ಮನ್ ಗಿಲ್ ಕಣ್ಣಿಗೂ ಬಿದ್ದಿದೆ. ಅವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ‘ಅದು ಯಾವ ಮಾಧ್ಯಮ ಜೊತೆಗಿನ ಸಂದರ್ಶನ? ನನಗೆ ಆ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದ್ದರು ಗಿಲ್. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿತ್ತು.

ಎರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್​ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್​’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

source https://tv9kannada.com/entertainment/sandalwood/here-is-what-rashmika-mandanna-reaction-about-shubaman-gill-crush-statement-rmd-au34-536112.html

Leave a Reply

Your email address will not be published. Required fields are marked *