UI Update: ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಹೊಸ ವರ್ಷಕ್ಕೆ ಯುಐ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಕೊಡ್ತಾರೆಂದು ಕಾಯ್ತಿದ್ದ ಫ್ಯಾನ್ಸ್ ತಲೆಗೆ ಸದು, ಉಪ್ಪಿ ಕೆಲಸ ಕೊಟ್ಟಿದ್ದಾರೆ. UI ಚಿತ್ರತಂಡ ಸಣ್ಣ ಝಲಕ್ ವಿಡಿಯೋ ರಿಲೀಸ್ ಮಾಡಿ, ಫ್ಯಾನ್ಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
- ಉಪೇಂದ್ರರವರ ಹೊಸ ಅಪ್ಡೇಟ್‌ನ್ನು ಹೊಸ ವರ್ಷಕ್ಕೆ ನೀಡುವುದಾಗಿ UI ಚಿತ್ರತಂಡ ಅನೌನ್ಸ್ ಮಾಡಿದ್ದು, ಗುಡ್ ನ್ಯೂಸ್ ಗಾಗಿ ರಿಯಲ್ ಸ್ಟಾರ್ ಅಭಿಮಾನಿಗಳು ಕಾಯ್ತಾಯಿದ್ರು.
- UI ಚಿತ್ರತಂಡ ಟೀಸರ್‌ನಲ್ಲಿ ಕುದುರೆ ಓಡುವ ದೃಶ್ಯವನ್ನು ಕಾಣಬಹುದಾಗಿದ್ದು, ಕುದುರೆ ಲಾಳದಲ್ಲಿ ಬೆಂಕಿಯಲ್ಲಿ ಮೂಡಿದ UI ಗುರುತಿದೆ.
- ಇದಕ್ಕೋ ಮುಂಚೆ ರಿಯಲ್‌ಸ್ಟಾರ್ ಉಪೇಂದ್ರ ಹುಟ್ಟುಹಬ್ಬದಂದು ಯುಐ ಸಿನಿಮಾ ಶೀರ್ಷಿಕೆಯೊಂದಿಗೆ ಕತ್ತಲೆಯ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದರು

UI Teaser: ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಸಖತ್ ಸಿಂಪಲ್, ಆದ್ರೆ ಅವರ ಸಿನಿಮಾ ಮಾತ್ರ ಫುಲ್ ಡಿಫರೆಂಟ್ ಆಗಿರುತ್ತದೆ. ನಟ-ನಿರ್ದೇಶಕ ಉಪೇಂದ್ರರವರ ಹೊಸ ಅಪ್ಡೇಟ್‌ನ್ನು ಹೊಸ ವರ್ಷಕ್ಕೆ ನೀಡುವುದಾಗಿ UI ಚಿತ್ರತಂಡ ಅನೌನ್ಸ್ ಮಾಡಿದ್ದು, ಜನವರಿ 1 ರಂದು ಸಂಜೆ 5 ಗಂಟೆ ಕೊಡುವ ಗುಡ್ ನ್ಯೂಸ್ ಗಾಗಿ ರಿಯಲ್ ಸ್ಟಾರ್ ಅಭಿಮಾನಿಗಳು ಕಾಯ್ತಾಯಿದ್ರು. ಉಪ್ಪಿ ಅಭಿನಯದ ಬಹುನಿರೀಕ್ಷಿತ ಯುಐ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಆದರೆ ಉಪ್ಪಿ UI ಸಿನಿಮಾ ಡೇಟ್ ಅನೌನ್ಸ್ ಮಾಡ್ತಾರೆ ಎಂಬ ನಿರೀಕ್ಷೆಯಿಂದ ಕಾಯ್ತಿದ್ದ ಜನರಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ.
UI ಚಿತ್ರತಂಡ ಟೀಸರ್‌ನಲ್ಲಿ ಕುದುರೆ ಓಡುವ ದೃಶ್ಯವನ್ನು ಕಾಣಬಹುದಾಗಿದ್ದು, ಕುದುರೆ ಲಾಳದಲ್ಲಿ ಬೆಂಕಿಯಲ್ಲಿ ಮೂಡಿದ UI ಗುರುತಿದೆ. ಕೆಳಗೆ ಸಿನಿಮಾ ರಿಲೀಸ್ ಮಾಡುವ ತಿಂಗಳು ಹಾಗೂ ಇಸವಿಯನ್ನು ನೀಡಲಾಗಿದ್ದು, ಆದ್ರೆ ಡೇಟ್ ಮಾತ್ರ ಅನೌನ್ಸ್ ಮಾಡಿಲ್ಲ. ಸಿನಿಮಾ ದಿನಾಂಕವನ್ನು ಗೆಸ್ ಮಾಡುವ ಜವಾಬ್ದಾರಿಯನ್ನು ಉಪ್ಪಿ ಅಭಿಮಾನಿಗಳಿಗೆ ನೀಡಿದ್ದಾರೆ. ಹಾಗೆಯೇ ಇದರಲ್ಲಿ ಚಿತ್ರದ ಡೇಟ್ ಮಾತ್ರ ತಿಳಿಸದ ಉಪ್ಪಿ, ಅಲ್ಲೇ ಒಂದು ಟ್ವಿಸ್ಟ್ ಕೂಡ ಕೊಟ್ಟಿ, ಡಿಕೋಡ್ ಮಾಡಿ ದಿನಾಂಕ್ ಗೆಸ್ ಮಾಡಿದ ಸಿನಿಪ್ರಿಯರು ContestUITheMovie.Com ಗೆ ಮೇಲ್ ಮಾಡಲು ತಿಳಿಸಿದ್ದಾರೆ. ಸರಿಯಾದ ಉತ್ತರ ನೀಡಿದವರಿಗೆ ಸಿನಿಮಾ ಇವೆಂಟ್ ಪಾಸ್ ನೀಡೋದಾಗಿ ಚಿತ್ರತಂಡ ಘೋಷಿಸಿದೆ.
ಇದಕ್ಕೋ ಮುಂಚೆ ರಿಯಲ್‌ಸ್ಟಾರ್ ಉಪೇಂದ್ರ ಹುಟ್ಟುಹಬ್ಬದಂದು ಯುಐ ಸಿನಿಮಾ ಶೀರ್ಷಿಕೆಯೊಂದಿಗೆ ಕತ್ತಲೆಯ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಪೂರ್ತಿ ಕತ್ತಲ ಲೋಕ, ಸ್ಕ್ರೀನ್ ಮೇಲೆ ಏನೂ ಕಾಣಿಸದು. ಸದ್ದಷ್ಟೇ ಕೇಳುತ್ತೆ. ಅದರ ಜತೆಗೆ ಒಂದಷ್ಟು ಸಂಭಾಷಣೆ, ನೀರಿನ ಸದ್ದು, ಕುದುರೆ ಓಡುವ ಸದ್ದು, ಗದ್ದಲ. ಕೊನೆಗೆ ಯುಐ ಚಿತ್ರದ ಶೀರ್ಷಿಕೆ ಪುನಃ ಕಾಣಿಸಿಕೊಳ್ಳುತ್ತದೆ. ಕುದುರೆ ಮುಖ, ಆ ಮುಖದೊಳಗೆ ಒಂದಷ್ಟು ಚಿತ್ರಗಳು, ಅದರ ಕಿವಿಗೆ ಹೆಡ್‌ಫೋನ್ ಇದ್ದು, ಹಾಗೇ ಕುದುರೆ ಮುಖದಲ್ಲೂ ಸಿನಿಮಾ ಶೀರ್ಷಿಕೆ ಇದೆ. ಈ ಟೀಸರ್ ನಿಮ್ಮ ಕಲ್ಪನೆಗಾಗಿ ಎಂಬ ಬರೆಹ ಗಮನಸೆಳೆದಿತ್ತು.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಓಂ ಸಿನಿಮಾ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಲ್ಲೇ ದೊಡ್ಡ ಇತಿಹಾಸ ಬರೆದ ಉಪ್ಪಿ, ಇದೀಗ ಮತ್ತೆ UI ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾದ ಮೂಲಕ ಹೊಸದನ್ನ ಕೊಡೊಕೆ ಬರ್ತಿರೋ ರಿಯಲ್‌ಸ್ಟಾರ್‌ಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಾಥ್ ಕೊಟ್ಟಿದ್ದಾರೆ.
Source : https://zeenews.india.com/kannada/entertainment/upendra-ui-teaser-released-180437
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1