500ನೇ ಏಕದಿನ ಪಂದ್ಯ ಗೆದ್ದ ಪಾಕ್; ಭಾರತ ಗೆದ್ದಿರುವುದೆಷ್ಟು? ಯಾರ ಹೆಸರಿನಲ್ಲಿದೆ ವಿಶ್ವ ದಾಖಲೆ?

ರಾವಲ್ಪಿಂಡಿಯಲ್ಲಿ ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡ ಕಿವೀಸ್ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನ ಸದ್ಯ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ನಿರತವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಪಾಕಿಸ್ತಾನ ಭಾರತ-ಆಸ್ಟ್ರೇಲಿಯಾ ರೀತಿಯಲ್ಲಿ ಎಲೈಟ್ ಗುಂಪಿಗೆ ಪ್ರವೇಶಿಸಿದೆ. ಇದರೊಂದಿಗೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ 500ನೇ ಏಕದಿನ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಹಾಗಿದ್ದರೆ ಏಕದಿನ ಕ್ರಿಕೆಟ್​ನಲ್ಲಿ ಅಧಿಕ ಪಂದ್ಯ ಗೆದ್ದು ದಾಖಲೆ ಬರೆದಿರುವ ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ...ಪಾಕಿಸ್ತಾನಕ್ಕಿಂತ ಮೊದಲು ಭಾರತ ಏಕದಿನ ಕ್ರಿಕೆಟ್‌ನಲ್ಲಿ 500 ನೇ ಗೆಲುವಿನ ದಾಖಲೆಯನ್ನು ಮಾಡಿದೆ. ಭಾರತ ತಂಡ ಇದುವರೆಗೆ ಒಟ್ಟು 1029 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಟೀಂ ಇಂಡಿಯಾ 539 ಪಂದ್ಯಗಳನ್ನು ಗೆದ್ದಿದ್ದರೆ, 438 ಪಂದ್ಯಗಳಲ್ಲಿ ಸೋಲು ಕಂಡಿದೆ. 43 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 9 ಪಂದ್ಯಗಳು ಟೈ ಆಗಿವೆ.ಆಸ್ಟ್ರೇಲಿಯಾ ಇದುವರೆಗೆ ಒಟ್ಟು 978 ಏಕದಿನ ಪಂದ್ಯಗಳನ್ನು ಆಡಿದೆ. ಅದರಲ್ಲಿ ಅಜಿರಾ 594 ಪಂದ್ಯಗಳನ್ನು ಗೆದ್ದಿದ್ದು, 341 ಪಂದ್ಯಗಳಲ್ಲಿ ಸೋಲು ಕಂಡಿದೆ. 34 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 9 ಪಂದ್ಯಗಳು ಟೈ ಆಗಿವೆ.ಪಾಕಿಸ್ತಾನ ಇದುವರೆಗೆ ಒಟ್ಟು 949 ಏಕದಿನ ಪಂದ್ಯಗಳನ್ನು ಆಡಿದೆ. ಅದರಲ್ಲಿ 500 ಪಂದ್ಯಗಳನ್ನು ಗೆದ್ದು 420 ಸೋಲು ಕಂಡಿದೆ. 20 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 9 ಪಂದ್ಯಗಳು ಟೈ ಆಗಿವೆ.ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇದುವರೆಗೆ 854 ಏಕದಿನ ಪಂದ್ಯಗಳನ್ನು ಆಡಿದೆ. ಅದರಲ್ಲಿ 411 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 403 ಪಂದ್ಯಗಳಲ್ಲಿ ಸೋಲು ಕಂಡಿದೆ. 30 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 10 ಪಂದ್ಯಗಳು ಟೈ ಆಗಿವೆ.ಇದುವರೆಗೆ ದಕ್ಷಿಣ ಆಫ್ರಿಕಾ 654 ಏಕದಿನ ಪಂದ್ಯಗಳನ್ನು ಆಡಿದೆ. ಅದರಲ್ಲಿ ಪ್ರೋಟೀಸ್ 399 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 228 ಪಂದ್ಯಗಳಲ್ಲಿ ಸೋತಿದೆ. 21 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 6 ಪಂದ್ಯಗಳು ಟೈ ಆಗಿವೆ.

source https://tv9kannada.com/photo-gallery/cricket-photos/pakistan-win-500th-odi-match-see-full-list-of-most-odi-wins-by-a-team-in-kannada-psr-au14-565612.html

Leave a Reply

Your email address will not be published. Required fields are marked *